ಆರೋಪಿಗಳನ್ನು ಹಿಡಿಯಬೇಕಿದ್ದ ಪೊಲೀಸ್ ಕಳ್ಳನಾದ!

ಬೆಂಗಳೂರು : ಕಳ್ಳತನ ಮಾಡುವವರನ್ನು ಹಿಡಿದು ರಕ್ಷಣೆ ನೀಡಬೇಕಾದ ಪೊಲೀಸರೇ ಖುದ್ದು ನಿಂತು ಕಳ್ಳತನ ಮಾಡಿದರೆ ಜನರ ಗತಿ ಏನಾಗಬೇಡ? ಅಂತಹದ್ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಯುವಕರನ್ನು ಬಳಸಿಕೊಂಡು ಕಳ್ಳತನ ಮಾಡಿಸುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಈಗ ಕಂಬಿ ಹಿಂದೆ ಸೇರಿದ್ದಾನೆ.

ಹೌದು, ಬೈಕ್ ಕಳ್ಳತನ ಪ್ರಕರಣದಲ್ಲಿ ವಿದ್ಯಾರಣ್ಯಪುರ ಪೊಲೀಸ್ ಕಾನ್ಸ್​​ಟೇಬಲ್ ಹೊನ್ನಪ್ಪ ನನ್ನು ಪೊಲೀಸರು ಬಂಧಿಸಿದ್ದಾರೆ. 2016ರ ಬ್ಯಾಚ್ ನ ಸಿವಿಲ್ ಕಾನ್ ಸ್ಟೇಬಲ್ ಆಗಿರೋ ಹೊನ್ನಪ್ಪ ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ಮನೆಯಲ್ಲೆ ಗ್ಯಾಂಗ್ ಸಾಕಿದ್ದ ಪೇದೆ : ಬೆಂಗಳೂರು ಸುತ್ತಮುತ್ತ ಬೈಕ್​ಗಳ ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದ, ವಾಹನಗಳ್ಳರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಿದ್ದ, ಮನೆಯಲ್ಲೇ ಕದ್ದ ಬೈಕ್​ಗಳ ದಾಖಲೆ ತಯಾರು ಮಾಡಿ, ಮಾರಾಟ ಮಾಡುತ್ತಿದ್ದ. ಅಪ್ರಾಪ್ತ ವಯಸ್ಸಿನವರ ಪಾತಕಿಗಳು ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡ್ತಿದ್ದರು. ಬೈಕ್ ಮಾರಾಟ ಮಾಡಿ ಐದರಿಂದ ಆರು ಸಾವಿರ ಹಣವನ್ನ ಹುಡುಗರಿಗೆ ನೀಡ್ತಿದ್ದ ಪೇದೆ ಹೊನ್ನಪ್ಪ.

ಸದ್ಯ ಮಾಹಿತಿ ಆಧರಿಸಿ ವಿಚಾರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 77 ಲಕ್ಷದ 52 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *