ಬೆಂಗಳೂರು : ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಕವಯತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಏಪ್ರಿಲ್ 4 ರಿಂದ 6 ರವರೆಗೆ ನೈಜೀರಿಯಾದ ಅಬುಜ ನಗರದಲ್ಲಿ ಜಾಗತಿಕ ಬರಹಗಾರರ ಒಕ್ಕೂಟ ಆಯೋಜಿಸಿದ್ದ ಏಳನೇ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಮ್ತಾ ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿದ್ದು, ಇಂದು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ಸಮೇತ ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ.
ಇದನ್ನು ಓದಿ : ‘ಸಪ್ದರ್ ಜೀವಿಸಿದ್ದರೆ’ ಪ್ಯಾಸಿಸಂ ವಿರುದ್ದ ಬೀದಿಯಲ್ಲಿರುತ್ತಿದ್ದರು…
ವೈವಿಧ್ಯತೆಯನ್ನು ಸಂಭ್ರಮಿಸುವ ಮೂಲಕ ಹೊಸ ಏಕತೆಯನ್ನು ಕುರಿತು ಚಿಂತಿಸುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರೆಕೊಟ್ಟ ಖ್ಯಾತ ಕವಿ ಮಮ್ತಾ ಅವರಿಗೆ ಮಾನ್ಯ ಮುಖ್ಯಮಂತ್ರಿಗಳು ಇಂದು ಅಭಿನಂದಿಸಿದರು.
ಈ ಬಾರಿಯ ಪ್ರತಿಷ್ಠಿತ ಜಾಗತಿಕ ಒಕ್ಕೂಟದ ಗೌರವ ಪ್ರಶಸ್ತಿಯನ್ನು ನೋಬೆಲ್ ಪ್ರಶಸ್ತಿ ವಿಜೇತ ಬರಹಗಾರ ವೋಲೆ ಸೋಯೆಂಕಾ ಅವರಿಗೆ ಘೋಷಿಸಲಾಗಿದೆ.
ಇದನ್ನು ನೋಡಿ : ತೇಜಸ್ವಿ ಸೂರ್ಯಗೆ ಮತ ನೀಡುವ ಮೊದಲು ಯೋಚಿಸಿ – ಮೋಹನ್ ರಾವ್ ಬಹಿರಂಗ ಪತ್ರ