ವಿದ್ಯಾರ್ಥಿನಿಗೆ ಅನುಚಿತ ವರ್ತನೆ ತೋರಿ ಥಳಿತ; ಶಿಕ್ಷಕನ ವಿರುದ್ದ ಪೋಕ್ಸೋ ಕೇಸ್ ದಾಖಲು

ಹಾಸನ: ಸರ್ಕಾರಿ ವಸತಿ ಶಾಲೆಯೊಂದರ ಶಿಕ್ಷಕನೊಬ್ಬ ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ ಬಾಲಕಿಗೆ ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ. ವಿದ್ಯಾರ್ಥಿನಿ

ಅಪ್ರಾಪ್ತೆಯ ಮೈಮುಟ್ಟಿ ಮನಬಂದಂತೆ ಥಳಿಸಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕ ಶ್ರೀನಿವಾಸ್ ಎಂಬುವರ ವಿರುದ್ಧ ಹಾಸನ ತಾಲೂಕಿನ ಶಾಂತಿಗ್ರಾಮ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ: ಮೈತ್ರಿಕೂಟ ರಚನೆಗೆ ಪ್ರಯತ್ನ – ರವಿಕೃಷ್ಣಾರೆಡ್ಡಿ

ವಸತಿ ಶಾಲೆಯಲ್ಲಿ ಮಗಳು ಚೆನ್ನಾಗಿ ಓದದೇ ಇದ್ದರೆ ನಮಗೆ ಹೇಳಿದ್ದರೆ ಬುದ್ಧಿವಾದ ಹೇಳುತ್ತಿದ್ದೆವು, ಆದರೆ ಮಗಳಿಗೆ ಎಡಗೈ ಮುರಿಯುವಂತೆ ಹಲ್ಲೆ ಮಾಡಿದ್ದಲ್ಲದೆ ಅನುಚಿತವಾಗಿ ವರ್ತಿಸಿರುವ ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಂತಿಗ್ರಾಮ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.

ಇದನ್ನೂ ನೋಡಿ: ದೇವದಾಸಿ, ಒಂಟಿ ಮಹಿಳೆ, ಮಸಣ ಕಾರ್ಮಿಕರಿಗೆ 6000 ರೂ ಮಾಸಿಕ ಪಿಂಚಣಿ ನೀಡಿ Janashakthi Media

Donate Janashakthi Media