ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗ ತೀವ್ರತರದಲ್ಲಿ ದೇಶದಲ್ಲಿ ಹರಡುತ್ತಿರುವ ಸಂದರ್ಭದಲ್ಲಿ ಲಸಿಕೆಗಳು, ಆಮ್ಲಜನಕ, ಔಷಧಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇಷ್ಟೊಂದು ಸಮಸ್ತೆಗಳಿದ್ದರೂ ಸಹ ಪ್ರಧಾನಿಮಂತ್ರಿಗಳು ಕಾಣಿಸಿಕೊಳ್ಳದೆ ಇರುವುದಕ್ಕೆ ಅವರು ತೀವ್ರವಾಗಿ ಟೀಕೆ ಮಾಡಿದ್ದಾರೆ.
ಇದನ್ನು ಓದಿ: ಪ್ರಧಾನ ಮಂತ್ರಿಗಳಿಗೆ ಮತ್ತೊಮ್ಮೆ 12 ಪ್ರತಿಪಕ್ಷಗಳ ಮುಖಂಡರ ಜಂಟಿ ಪತ್ರ
ಪ್ರಧಾನಿ ಕಾಣೆಯಾಗಿದ್ದಾರೆ. ಉಳಿದಿರುವುದು ಸೆಂಟ್ರಲ್ ವಿಸ್ತಾ ಯೋಜನೆ ಮತ್ತು ಔಷಧಗಳ ಮೇಲಿನ ಜಿಎಸ್‌ಟಿ ಮತ್ತು ಪ್ರಧಾನಿಯ ಫೋಟೊಗಳು ಮಾತ್ರ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸರಕಾರ ಸಮರೋಪಾಧಿಯಲ್ಲಿ ಕಾರ್ಯನಿರ್ವಹಿಸದಿರುವ ಬಗ್ಗೆ ತೀವ್ರವಾದ ವಾಗ್ದಾಳಿ ನಡಸಿರುವ ರಾಹುಲ್ ಗಾಂಧಿ ಅವರು ಕೋವಿಡ್ 19 ಎರಡನೆಯ ಅಲೆಯ ಸಂದರ್ಭದಲ್ಲಿ ಅತ್ಯಂತ ಮಹತ್ವವಾಗಿರುವ ಲಸಿಕೆಗಳು, ಆಕ್ಸಿಜನ್ ಮತ್ತು ಇತರೆ ವೈದ್ಯಕೀಯ ಸವಲತ್ತುಗಳ ಕೊರತೆಗೆ ಸಂಬಂಧಿಸಿದಂತೆ ಆಗುತ್ತಿರುವ ಲೋಪಗಳನ್ನು ಎತ್ತಿ ತೋರಿಸುತ್ತಿದ್ದಾರೆ.
ಕೋವಿಡ್–19ರ ಎರಡನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದ್ದಾರೆ.