ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶ್ವಸಂಸ್ಥೆಯಲ್ಲಿ ನಡೆದ 76ನೇ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಿಂದಿ ಭಾಷೆಯಲ್ಲಿ ಮಾತನಾಡಿದ ಮೋದಿ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಭಯೋತ್ಪಾದನೆ ನಿಯಂತ್ರಣಕ್ಕೆ ಎಲ್ಲಾ ದೇಶಗಳು ಮುಂದಾಗಬೇಕು ಎಂದರು
ಭಾರತ ಸ್ವಾತಂತ್ರ್ಯದ 75ನೇ ವರ್ಷ ಪ್ರವೇಶಿಸಿದೆ. ಕೊರೊನಾದಿಂದ ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಭಾರತ ಉಜ್ವಲ ಪ್ರಜಾಪ್ರಭುತ್ವಕ್ಕೆ ಒಂದು ಉದಾಹರಣೆ ಆಗಿದೆ. ಭಾರತದ ಪ್ರಧಾನಿ ಆಗಿ 4ನೇ ಬಾರಿಗೆ UNGAಯಲ್ಲಿ ಭಾಷಣ ಮಾಡುತ್ತಿದ್ದೇನೆ. ದೇಶದ ಜನರ ಸೇವೆ ಮಾಡುತ್ತಾ 20 ವರ್ಷ ಕಳೆದಿದ್ದೇನೆ. ಪ್ರಜಾಪ್ರಭುತ್ವದಿಂದ ಮಾತ್ರ ಉತ್ತಮ ಆಳ್ವಿಕೆ ಸಾಧ್ಯ. ಅಭಿವೃದ್ಧಿಯಿಂದ ಯಾರನ್ನೂ ಹೊರಗಿಡುವುದಿಲ್ಲ. ಮೊದಲು ಮುಖ್ಯಮಂತ್ರಿಯಾಗು, ಈಗ ಪ್ರಧಾನಮಂತ್ರಿಯಾಗಿ ಜನರ ಕೆಲಸ ಮಾಡ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
Addressing the @UN General Assembly. https://t.co/v9RtYcGwjX
— Narendra Modi (@narendramodi) September 25, 2021
ಸೇವಾ ಪರಮೋಧರ್ಮ ಎಂಬುದರಲ್ಲಿ ಭಾರತ ನಂಬಿಕೆಯಿಟ್ಟಿದೆ. ಭಾರತದ ವಿಶ್ವದ ಮೊದಲ ಡಿಎನ್‌ಎ ಲಸಿಕೆ ಸಂಶೋಧನೆ ಮಾಡಲಾಗಿದೆ. ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು. ಎಂಆರ್‌ಎನ್‌ಎ ಲಸಿಕೆ ಸಂಶೋಧನೆ ಹಂತಿಮ ಅಂತದಲ್ಲಿದೆ. 43 ಕೋಟಿ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆ ನೀಡಿದ್ದೇವೆ. 36 ಕೋಟಿ ಜನರಿಗೆ ವಿಮೆಯನ್ನು ನೀಡಿದ್ದೇವೆ. 50 ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆ ನೀಡ್ತಿದ್ದೇವೆ. 3 ಕೋಟಿ ಜನರಿಗೆ ಪಕ್ಕಾ ಮನೆ ನಿರ್ಮಿಸಿದ್ದೇವೆ.