ಪಿಎಂ- ಕೇರ್ಸ್ : ಆರ್ ಟಿ ಐ ಗೆ ಅನ್ವಯವಿಲ್ಲ !!?
ನವದೆಹಲಿ : ಕೊರೊನಾ ವೈರಸ್ ಹಾಗೂ ಲಾಕ್ಡೌನ್ ನಿಂದ ಉಂಟಾದ ಸಮಸ್ಯೆಗಳ ಪರಿಹಾರಕ್ಕೆ ದೇಣಿಗೆಗಳನ್ನು ಸ್ವೀಕರಿಸಲು ಸರ್ಕಾರವೇ ರಚಿಸಿದ ನಿಧಿಯಾಗಿರುವ ಪಿಎಂ-ಕೇರ್ಸ್ ನಿಧಿಯು ಸಾರ್ವಜನಿಕ ಘಟಕವಾಗಿದೆ. ಅದರ ನಿಯಂತ್ರಣ, ಮಾಲೀಕತ್ವ ಕೇಂದ್ರ ಸರ್ಕಾರದ ಬಳಿ ಇದೆ. ಆದರೆ, ಇದು ಖಾಸಗಿಯವರಿಂದ ದೇಣಿಗೆ ಸಂಗ್ರಹಿಸು ತ್ತಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿರುವುದು ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ.
ಕೋರೊನಾ ವೈರಸ್ ವಿರುದ್ಧ ಹೋರಾಟಕ್ಕೆ ದೇಣಿಗೆಗಳನ್ನು ಸಂಗ್ರಹಿಸಿ ಪರಿಹಾರಕ್ಕೆಂದೇ ಸ್ಥಾಪಿಸಿರುವ ಪಿಎಂ-ಕೇರ್ಸ್ ನಿಧಿಯು ಸಾರ್ವಜನಿಕ ಸಂಸ್ಥೆಯಾಗಿದೆ ಎಂದು ಕೇಂದ್ರ ಸರಕಾರ ನೂತನ ಆರ್ ಟಿಐ ಉತ್ತರ ವೊಂದರಲ್ಲಿ ಹೇಳಿತ್ತು. ಆದರೆ ಈಗ ಈ ನಿಧಿಯು ಮಾಹಿತಿ ಹಕ್ಕು ಕಾಯ್ದೆಗೆ ಬರುವುದಿಲ್ಲ ಎಂದು ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ತಾನು ಕೊಟ್ಟ ಹೇಳಿಕೆಗೆ ಉಲ್ಟಾ ಹೊಡೆದ ಸರ್ಕಾರದ ಈ ನಡೆ ಸಾಕಷ್ಟು ಗೊಂದಲಗಳು ಸೃಷ್ಟಿಮಾಡಿದೆ.
ಕೊರೋನಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ದೇಣಿಗೆ ನೀಡಲು ಇಚ್ಛಿಸುವ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮಾ.27 ರಂದು ಪಿಎಂ ಕೇರ್ಸ್ ನ್ನು ಪ್ರಾರಂಭಿಸಿದ್ದರು. ಪಿಎಂ-ಕೇರ್ಸ್ ನಿಧಿಯು ದಾನಿಗಳಿಂದ ಸಾವಿರಾರು ಕೋಟಿ ರೂಗಳನ್ನು ಸ್ವೀಕರಿಸಿದ್ದು, ಸಿನಿಮಾ ನಟರು, ಕಾರ್ಪೊರೇಟ್ ಕಂಪನಿಗಳು, ರಾಜಕಾರಣಿಗಳು, ವಾಣಿಜ್ಯ ಸಂಸ್ಥೆಗಳು ಭರಪೂರ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಅದನ್ನು ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಕಳುಹಿಸುವುದಾಗಿ ಕೇಂದ್ರ ಸರಕಾರ ಹೇಳಿತ್ತು. ಈ ನಿಧಿಯು ಸರ್ಕಾರಿದ ಒಡೆತನದಲ್ಲಿಲ್ಲ ಮತ್ತು ಅದರಿಂದ ನಿಯಂತ್ರಿಸಲ್ಪಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿರುವುದನ್ನು ನೋಡಿದರೆ ಇಲ್ಲಿ ಭ್ರಷ್ಟಾಚಾರದ ವಾಸನೆ ಎದ್ದು ಕಾಣುತ್ತಿದೆ.
ಜನಶಕ್ತಿ ಮೀಡಿಯಾ ಈ ಎಲ್ಲಾ ಬೆಳವಣಿಗೆಳ ಕುರಿತು ಮಾರ್ಚ್ 31 ರಂದು “ಪಿಎಂ ಕೇರ್ಸ್ ( PM Cares Fund) ಹೆಸರಲ್ಲಿ ನಡೆಯುತ್ತಿದೆಯಾ ಬ್ರಷ್ಟಾಚಾರ !!?” ಎಂದು ವಿಡಿಯೋ ವರದಿ ಮಾಡಿತ್ತು.
ಈ ವಿಡಿಯೋ ತಪ್ಪದೆ ನೋಡಿ