ʻಪ್ಲಾಸ್ಟಿಕ್ ಬಂಧನ-ಪರಿಸರ ಸ್ಪಂದನ ಜಾಗೃತಿ ಜಾಥಾʼ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ

ಹಾಸನ: ಪ್ಲಾಸ್ಟಿಕ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ ನಿಜ. ಅದರ ಮೇಲಿನ ಅತಿಯಾದ ಅವಲಂಬನೆ ನಮಗರಿವಿಲ್ಲದೆ ಹಲವಾರು ಆರೋಗ್ಯದ, ನೈರ್ಮಲ್ಯದ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ನಮ್ಮೊಳಗೇ ಸೃಷ್ಟಿಸಿದೆ. ಇದರ ವೈಜ್ಞಾನಿಕ ನಿರ್ವಹಣೆಯಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನಮಗೆ ನಾವೇ ಕಂಡುಕೊಳ್ಳಬಹುದು ಎಂದು ಸ್ವಚ್ಛ ಭಾರತ ಆಂದೋಲನದ ನೋಡಲ್ ಅಧಿಕಾರಿ ಎಚ್.ಎಸ್.ರವಿ ಹೇಳಿದರು.

ಹಾಸನ ಜಿಲ್ಲೆಯ ಹನುಮಂತಪುರ ಗ್ರಾಮ ಪಂಚಾಯಿತಿ , ಸರ್ಕಾರಿ ಪ್ರೌಢಶಾಲೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್‌) ಹಾಸನ ತಾಲ್ಲೂಕಿನ ಸಂಯುಕ್ತಾಶ್ರಯದಲ್ಲಿ ಹನುಮಂತಪುರದಲ್ಲಿ ಆಯೋಜಿಸಿದ್ದ ಕಸದಿಂದ ರಸ ಜಾಥಾ ಹಾಗೂ ಪ್ಲಾಸ್ಟಿಕ್ ಬಂಧನ ಪರಿಸರ-ಸ್ಪಂದನ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ಮಾಲಿನ್ಯದ ಅಪಾಯಗಳನ್ನು ತಿಳಿಸಿ ಅವುಗಳಲ್ಲಿ ನವೀಕರಸಲಾಗದ ಪ್ಲಾಸ್ಟಿಕ್‌ ಗಳನ್ನು ವಿಂಗಡಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿ ಹೇಳಿದ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ.ಎಚ್.ಜಿ.ಮಂಜುನಾಥ್, ಬಳಸಿದ ಪ್ಲಾಸ್ಟಿಕ್ ಗಳನ್ನು ನಿಷ್ಪ್ರಯೋಜಕ ಬಾಟಲುಗಳ ಬಳಸಿಕೊಂಡು ಶಾಲಾ ಆವರಣದಲ್ಲಿ ಕಾಂಪೌಂಡ್ ಅಥವ ಇನ್ನಾವುದೇ ನಿರ್ಮಾಣ ಚಟುವಟಿಕೆಗಳಿಗೆ ಇಟ್ಟಿಗೆಯಂತೆ ಬಳಸಿಕೊಳ್ಳುವ ಬಗೆಯನ್ನು ತಿಳಿಸಿದರು.

ಇದನ್ನು ಓದಿ: ದೇಶದಲ್ಲಿ ವಿಜ್ಞಾನಕ್ಕಿಂತ ಮೌಢ್ಯಾಚರಣೆ ಹೆಚ್ಚು ಬೆಳೆಯುತ್ತಿವೆ: ಪ್ರೊ.ಪಾಲಹಳ್ಳಿ ವಿಶ್ವನಾಥ್‌

ಬಿಜಿವಿಎಸ್ ಹಾಸನ ತಾಲ್ಲೂಕು ಸಮಿತಿ ಸದಸ್ಯರುಗಳಾದ ಮೋನಿಕಾ ಹಾಗೂ ಶಾರದಾ ಜಾಥಾದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ಕಸವನ್ನು ಬಾಟಲಿಗೆ‌ ತುಂಬಿಸುವ ಚಟುವಟಿಕೆ ನಡೆಸಿದರು. ಬಿಜಿವಿಎಸ್ ಜಿಲ್ಲಾ ಸಹ ಕಾರ್ಯದರ್ಶಿ ಹಾಗೂ ಎನ್.ಆರ್.ಎಲ್.ಎಂ. ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ವೇಣುಗೋಪಾಲ್ ಜಾಥಾ ಸಂಚಾಲನೆ ಮಾಡಿದರು.

ಹನುಮಂತಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವ್ಯ ಎಲ್ಲರನ್ನು ಸ್ವಾಗತಿಸಿದರು, ಇಕೋ ಕ್ಲಬ್ ಸಂಚಾಲಕ ಶಕೀಲ್ ಅಹ್ಮದ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು, ಶಿಕ್ಷಕ ಗಿರೀಶ್ ವಂದಿಸಿದರು.

ಈ ಸಂದರ್ಭದಲ್ಲಿ ಹನುಮಂತಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್.ನೀಲಕಂಠಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಮೇಶ್, ಪ್ರೌಢಶಾಲೆಯ ಎಲ್ಲಾ ಶಿಕ್ಷಕರುಗಳು, ಬಿಲ್ ಕಲ್ಟೆಕ್ಟರ್ ಶ್ರೀನಿವಾಸ್, ವಾಟರ್ ಮನ್ ಗಳು, ಎಂಬಿಕೆ. ಎಲ್‌ಸಿಆರ್‌ಪಿ ಸದಸ್ಯರು, ಪಶುಸಖಿ‌, ಕೃಷಿಸಖಿ ಯೋಜನೆಗಳ ಕಾರ್ಯಕರ್ತರು‌, ಗ್ರಾಮದ ಮುಖಂಡರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *