ಕಠ್ಮಂಡು: ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ವರು ಸಿಬ್ಬಂದಿ ಸೇರಿದಂತೆ 72 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ಯೇತಿ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಇದಾಗಿದ್ದು, ಇಲ್ಲಿನ ಹಳೆಯ ವಿಮಾನ ನಿಲ್ದಾಣ ಹಾಗೂ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪತನಗೊಂಡಿದೆ.
ವಿಮಾನ ಪತನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಬೆಂಕಿಗೆ ವಿಮಾನ ಧಗಧಗ ಉರಿಯುತ್ತಿರುವುದನ್ನು ಕಾಣಬಹುದು, ಇದೇ ಸಮಯದಲ್ಲಿ ಸುತ್ತ ಸಾಕಷ್ಟು ಜನರು ನೆರೆದಿದ್ದು, ರಕ್ಷಣಾ ಪಡೆಗಳು ವಿಮಾನದಲ್ಲಿದ್ದವರ ಪ್ರಾಣವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ.
ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎಎನ್) ಪ್ರಕಾರ, ಯೇತಿ ಏರ್‌ಲೈನ್ಸ್‌ನ 9ಎನ್-ಎಎನ್‌ಸಿ ಎಟಿಆರ್-72 ವಿಮಾನವು ಕಠ್ಮಂಡುವಿನಿಂದ ಇಂದು ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಬಳಿಕ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಹಳೆಯ ವಿಮಾನ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ಪತನಗೊಂಡಿದೆ.
ಇದನ್ನು ಓದಿ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮನ ಪ್ರಯಾಣಿಕರಿಂದ ʻಬಳಕೆದಾರರ ಅಭಿವೃದ್ಧಿ ಶುಲ್ಕʼ ಸಂಗ್ರಹ
ವಿಮಾನದಲ್ಲಿ 5 ಮಂದಿ ಭಾರತೀಯರು ಕೂಡ ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದುವರೆಗೆ 40 ಮಂದಿಯ ಮೃತದೇಹ ಪತ್ತೆಯಾಗಿದೆ. ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಅಥವಾ ಬದುಕುಳಿದಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಸುದರ್ಶನ್ ಬರ್ತೌಲಾ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದರು.
ಈಗಾಗಲೇ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದ್ದು, ತಂಡಗಳು ಮೊದಲು ಬೆಂಕಿಯನ್ನು ನಂದಿಸಲು ಮತ್ತು ಪ್ರಯಾಣಿಕರನ್ನು ರಕ್ಷಿಸಲು ಗಮನಹರಿಸಿವೆ ಎಂದು ಸ್ಥಳೀಯ ಅಧಿಕಾರಿ ಗುರುದತ್ತ ಧಾಕಲ್ ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
72 ಜನರಿದ್ದ ವಿಮಾನ ಭಾನುವಾರ ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡಿದ್ದು, ಸದ್ಯದ ಮಾಹಿತಿ ಪ್ರಕಾರ 40 ಮಂದಿ ಸಾವಿಗೀಡಾಗಿದ್ದಾರೆ ಎಂದು ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನೇಪಾಳದ ವಿಮಾನೋದ್ಯಮವು ಇತ್ತೀಚೆಗೆ ಪ್ರಗತಿಯಾಗುತ್ತಿದೆ. ನೇಪಾಳದ ದುರ್ಗಮ ಪ್ರದೇಶಗಳಿಗೆ ಜನರು ಮತ್ತು ಸರಕುಗಳನ್ನು ಸಾಗಿಸಲು ಇಲ್ಲಿನ ವಿಮಾನಗಳು ಹೆಚ್ಚಾಗಿ ಬಳಸುತ್ತಿವೆ. ಆದರೆ, ಸೂಕ್ತ ನಿರ್ವಹಣೆ ಕೊರತೆ ಮತ್ತು ತರಬೇತಿ ಕೊರತೆಯನ್ನು ಅಲ್ಲಿನ ಅಲ್ಲಿನ ವೈಮಾನಿಕ ಕ್ಷೇತ್ರ ಎದುರಿಸುತ್ತಿದೆ.