ಅಕ್ತಾವು : ಕಜಕಿಸ್ತಾನದ ಅಕ್ತಾವಿನಲ್ಲಿ 72 ಪ್ರಯಾಣಿಕರನ್ನು ಹೊತ್ತ ವಿಮಾನ ಪತನಗೊಂಡಿದೆ. ಅಜರ್ಬೈಜಾನ್ ಏರ್ಲೈನ್ಸ್ ವಿಮಾನ ಬಕು ನಗರದಿಂದ ರಷ್ಯದ ಗೋಳ್ಳಿ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಕಜಕಿಸ್ತಾನದ ಅಕ್ಕಾವು ಬಳಿ ವಿಮಾನ ಏಕಾಏಕಿ ಪತನಗೊಂಡಿದೆ.
ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ. ಭೀಕರ ಘಟನೆಯ ದೃಶ್ಯ ಸೆರೆಯಾಗಿದೆ. ದಟ್ಟ ಮಂಜಿನ ಕಾರಣ ವಿಮಾನದ ಮಾರ್ಗ ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿತ್ತು. ಆದರೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ, ಅತ್ತ ಹಾರಾಡಲು ಸಾಧ್ಯವಾಗದೆ ವಿಮಾನ ನೆಲಕ್ಕೆ ಅಪ್ಪಳಿಸಿದೆ.
ಕಜಕಿಸ್ತಾನ ತುರ್ತು ಸಚಿವಾಲಯ ವಿಮಾನ ಪತನ ಮಾಹಿತಿ ನೀಡಿದೆ. ಅಜರ್ಬೈಜಾನ್ ಏರ್ಲೈನ್ಸ್ ಅಕ್ತಾವುನಲ್ಲಿ ಪತನಗೊಂಡಿದೆ. 72 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ಭೀಕರ ಪತನ ಇದಾಗಿರುವ ಕಾರಣ ಪ್ರಯಾಣಿಕರು ಸ್ಥಿತಿ ತಿಳಿದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ರಕ್ಷಣಾ ತಂಡಗಳು ಸ್ಥಳದಲ್ಲಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿದೆ ಎಂದಿದೆ.
ಇದನ್ನೂ ಓದಿ : ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಟ್ರಿಪ್ ಹೋದ ಮಗ, ಹಸಿವಿನಿಂದ ಸಾವು
ರಷ್ಯಾದ ಗೋಜಿಗೆ ಹೊರಟಿದ್ದ ವಿಮಾನಕ್ಕೆ ಮಾರ್ಗ ಬದಲಾವಣೆ ಸೂಚನೆ ನೀಡಲಾಗಿತ್ತು. ಗೋಳ್ಳಿಯಲ್ಲಿ ದಟ್ಟ ಮಂಜು ಆವರಿಸಿರುವ ಕಾರಣ ವಿಮಾನ ಹಾರಾಟ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಗ ಬದಲಾವಣೆಗೆ ಸೂಚಿಸಲಾಗಿತ್ತು. ಆದರೆ ಅಕ್ಕಾವು ಬಳಿ ವಿಮಾನ ಆಗಮಸದಲ್ಲೇ ಕೆಲ ಸುತ್ತು ಹೊಡೆದಿದೆ. ವಿಮಾನ ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ನೇರವಾಗಿ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನ ಪತನಗೊಂಡಿದೆ.
ಪತನಗೊಂಡ ಕೆಲವೇ ನಿಮಿಷಗಳಲ್ಲಿ ರಕ್ಷಣೆ ತಂಡಗಳು ಸ್ಥಳಕ್ಕೆ ದೌಡಾಯಿಸಿದ ಬೆಂಕಿ ನಂದಿಸಿ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. 52 ರಕ್ಷಣಾ ತಂಡದ ಸದಸ್ಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. 11 ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ, ಕಜಕಿಸ್ತಾನ್ ತುರ್ತು ಸಚಿವಾಲಯದ ಮಾಹಿತಿ ಪ್ರಕಾರ ಕೆಲ ಪ್ರಯಾಣಿಕರು ಬದುಕುಳಿದಿದ್ದಾರೆ. ಸದ್ಯ ಪ್ರಯಾಣಿಕರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.
ವಿಮಾನ ಪತನಕ್ಕೆ ಕಾರಣಗಳು ತಿಳಿದುಬಂದಿಲ್ಲ. ತಾಂತ್ರಿಕ ಕಾರಣ ಅಥವಾ ಮಂಜು ಮುಸುಕಿದ ವಾತಾವರಣ ವಿಮಾನ ಪತನಕ್ಕೆ ಕಾರಣವಾಯಿತಾ ಅನ್ನೋ ಮಾಹಿತಿ ಇನ್ನಷ್ಟೇ ತಳಿಯಬೇಕಿದೆ. ರಷ್ಯಾಗೆ ಹೊರಟಿರುವ ವಿಮಾನವಾಗಿದ್ದ ಕಾರಣ ಕೆಲ ಅನುಮಾನಗಳು ವ್ಯಕ್ತವಾಗತೊಡಗಿದೆ. ವಿಮಾನ ಹೈಜಾಕ್ ಮಾಡಿರುವ ಸಾಧ್ಯತೆ ಇದೆಯಾ ಅನ್ನೋ ಕುರಿತು ತನಿಖೆ ಆರಂಭಗೊಂಡಿದೆ.
ಇದನ್ನೂ ನೋಡಿ : ತುಮಕೂರು ರಸ್ತೆಯ ತಾಳೇಕೇರಿ ಬಳಿ ಭೀಕರ ಅಪಘಾತ Janashakthi Media