ಬೀಚ್‌ಗಳಲ್ಲಿ ಟೆಂಟ್ ಹಾಕುವುದು ಮತ್ತು ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ

ಮಂಗಳೂರು: ಗೋವಾದ ಮಾದರಿಯಲ್ಲಿ ರಾಜ್ಯದ ಬೀಚ್‌ಗಳಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಟೆಂಟ್ ಹಾಕುವುದು ಮತ್ತು ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ ನೀಡುವ ಪುಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪುವಾಸೋದ್ಯಮ ಇಲಾಖೆ ತಿಳಿಸಿದೆ.

ಬುಧವಾರ ಮಂಗಳೂರಿನಲ್ಲಿ ನಡೆದ ‘ಕನಕ್ಸ್ 2024’ನಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆ.ವಿ, ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಾವು ಬೀಚ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ, ಬೀಚ್ ಗಳಲ್ಲಿ ಮದ್ಯ ಬಳಕೆಯ ಮೇಲೆ ಇರುವ ನಿರ್ಬಂಧಗಳನ್ನು ಸಡಿಲಿಸುವ ಅಗತ್ಯವಿದೆ ಎಂದರು.

ಬೀಚ್ ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು, ಜನರು ರಾತ್ರಿಯಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡಲು ಕಡಲತೀರಗಳಲ್ಲಿ ಹೆಚ್ಚಿನ ಲೈಟ್ ಗಳನ್ನು ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಟೆಂಟ್ ಪುವಾಸೋದ್ಯಮವನ್ನು ಉತ್ತೇಜಿಸಲು ಕಡಲತೀರಗಳ ಬಳಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಹುಡುಕುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಮೃತಪಟ್ಟ 5 ವರ್ಷದ ಮಗು

ತಡರಾತ್ರಿಯವರೆಗೂ ಬೀಚ್‌ಗಳಿಗೆ ಭೇಟಿ ನೀಡಲು ಪುವಾಸಿಗರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಕಿ ಮುಗಿಲನ್, ಮಂಗಳೂರು ನಗರದಲ್ಲಿರುವ ರೆಸ್ಟೋರೆಂಟ್‌ಗಳು ಮತ್ತು ಇತರ ಪರವಾನಗಿ ಪಡೆದ ವ್ಯಾಪಾರ ಸಂಸ್ಥೆಗಳ ವ್ಯವಹಾರದ ಸಮಯವನ್ನು ರಾತ್ರಿ 1 ಗಂಟೆಯ ವರೆಗೆ ವಿಸ್ತರಿಸಲಾಗಿದೆ.

ಹೀಗಾಗಿ ನಗರ ವ್ಯಾಪ್ತಿಯ ಬೀಚ್‌ಗಳಲ್ಲಿ ತಡರಾತ್ರಿ ವರೆಗೆ ಇರಲು ಅವಕಾಶ ಒದಗಿಸಬೇಕಾಗಿದೆ ಎಂದರು. ಪುವಾಸೋದ್ಯಮ ಯೋಜನೆಗಳಿಗೆ ಸಿಆರ್‌ಝಡ್‌ ಮತ್ತು ಇತರ ಅನುಮತಿಗಳನ್ನು ಶೀಘ್ರವಾಗಿ ಮಾಡಲ ಪ್ರವಾಸೋದ್ಯಮ ಇಲಾಖೆ ಶೀಘ್ರದಲ್ಲೇ ಸೌಲಭ್ಯ ಕೇಂದ್ರವನ್ನು ತೆರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಸ ಪುವಾಸೋದ್ಯಮ ನೀತಿಯು ಕರಾವಳಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊಂದಿರಲಿದೆ ಎಂದು ಅವರು ತಿಳಿಸಿದ್ದಾರೆ. ಪುವಾಸೋದ್ಯಮ ಅಭಿವೃದ್ಧಿ ಪ್ರಯತ್ನಗಳ ಭಾಗವಾಗಿ ಬಟಪಾಡಿ ಬೀಚ್‌ನಿಂದ ಸಸಿಹಿತ್ತು ಬೀಚ್‌ವರೆಗಿನ ಕರಾವಳಿ ಪ್ರದೇಶವನ್ನು ಅಭಿವೃದ್ಧಿಗೆ ನಕ್ಷೆ ಸಿದ್ಧಪಡಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ಇದನ್ನೂ ನೋಡಿ: Seminar| Challenges to the Independent Digital Media today in India Janashakthi Media

Donate Janashakthi Media

Leave a Reply

Your email address will not be published. Required fields are marked *