ಸಿಂದಗಿ: ಶಾಲಾ ಕಾಲೇಜುಗಳಲ್ಲಿ ದುಡಿಯುತ್ತಿರುವ ಅನುದಾನಿತ ನೌಕರರಿಗೆ ಪಿಂಚಣಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಕಾರ್ಯಕರ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಸಕ್ತ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರದ ಗಮನವನ್ನು ಸೆಳೆಯಲು ಬೆಳಗಾವಿ ಚಲೋ ನಡೆಸಿದ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾ ಧರಣಿಯಲ್ಲಿ ಸಾವಿರಾರು ನೌಕರರ ಭಾಗಿಯಾಗಿದ್ದರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಹೇಳಿದರು.
ಇದನ್ನು ಓದಿ: ಪಿಂಚಣಿ ಸೌಲಭ್ಯಕ್ಕಾಗಿ ಶಾಲಾ-ಕಾಲೇಜು ನೌಕರರ ಪ್ರತಿಭಟನೆ
ಸಂಘದ ಅಧ್ಯಕ್ಷ ಬುಳ್ಳಪ್ಪ ಡಿ. ಮಾತನಾಡಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಿಂದ ಸುಮಾರು 500ಕ್ಕಿಂತ ಹೆಚ್ಚಿನ ನೌಕರರು ಭಾಗಿಯಾಗಿದ್ದರು ಎಂದು ತಿಳಿಸಿದರು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಬರುವ ದಿನಗಳಲ್ಲಿ ಶಾಲಾ ಕಾಲೇಜುಗಳನ್ನು ಬಂದು ಮಾಡಿ ಅಹೋರಾತ್ರಿ ಹೋರಾಟ ಮುಂದುವರೆಸುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅನುದಾನಿತ ನೌಕರರು ಕಳೆದ 80 ದಿನಗಳಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಹೋರಾಟ ಮಾಡುತ್ತಿದ್ದರು. ಆದರೂ ಸಹ ಸರಕಾರ ನಿರ್ಲಕ್ಷ್ಯ ವಹಿಸಿತು. ಹಾಗಾಗಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂದು ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಪಿಂಚಣಿ ನಮ್ಮ ಹಕ್ಕು ಹಾಗಾಗಿ ಅದನ್ನು ಸುಪ್ರೀಂ ಕೋರ್ಟ್ ಸಹ ಆದೇಶಿಸಿದೆ. ಸರಕಾರದ ಮಲತಾಯಿ ಧೋರಣೆಯನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಪಿಂಚಣಿ ಸಂಘದ ಅಧ್ಯಕ್ಷ ಅರುಣ ನಾಯ್ಕೋಡಿ ಹಾಗೂ ಉಪಾಧ್ಯಕ್ಷರು ಬಾಬನಗೌಡ ಪಾಟೀಲ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿವಲಿಂಗ ಉಮ್ಮರಗಿ, ವ್ಹಿ.ಜಿ.ಕಡಿ, ಮಾಳಪ್ಪ ಹೋಸೂರ, ಎಮ್.ರಂಗಪ್ಪ, ಮುಂತಾದ ನೌಕರರು ಉಪಸ್ಥಿತರಿದ್ದರು.