ಪಿಂಚಣಿ ಸೌಲಭ್ಯಕ್ಕಾಗಿ ಶಾಲಾ-ಕಾಲೇಜು ನೌಕರರ ಪ್ರತಿಭಟನೆ

ಬೆಂಗಳೂರು: ಅನುದಾನಕ್ಕೆ ಒಳಪಟ್ಟ ನೌಕರರ ಸೇವೆಯನ್ನು ಪಿಂಚಣಿಗೆ ಪರಿಗಣಿಸಿ ‘ಹಳೆಯ ನಿಶ್ಚಿತ ಪಿಂಚಣಿ’ ನೀಡಬೇಕು. ರಾಜ್ಯದ ಪ್ರತಿಯೊಬ್ಬ ಅನುದಾನಿತ ನೌಕರರಿಗೂ ಇದೇ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ನಗರದ ಸ್ವಾತಂತ್ರ್ಯ ‌ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

‘2006ರ ಏಪ್ರಿಲ್ 1ರ ಪೂರ್ವದಲ್ಲಿ ನೇಮಕವಾಗಿ ನಂತರದಲ್ಲಿ ಅನುದಾನಕ್ಕೆ ಒಳಪಟ್ಟ ಎಲ್ಲರಿಗೂ ಹಳೆಯ ನಿಶ್ಚಿತ ಪಿಂಚಣಿಯನ್ನು ನೀಡಬೇಕೆಂದು ಆಗ್ರಹಿಸಿರುವ ನೌಕರರು ಸರ್ಕಾರಿ ಹಾಗೂ ಅನುದಾನಿತ ನೌಕರರ ಮಧ್ಯೆ ಯಾವುದೇ ತಾರತಮ್ಯ ಮಾಡದೇ ಆರೋಗ್ಯ ಸೌಲಭ್ಯ ನೀಡಬೇಕು ಎಂದಿದ್ದಾರೆ.

ಈಗಾಗಲೇ ನಿವೃತ್ತರಾಗಿರುವ ಎಷ್ಟೋ ಶಿಕ್ಷಕರು ಸೌಲಭ್ಯ ವಂಚಿತರಾಗಿದ್ದು, ಪಿಂಚಣಿಯೂ ಇಲ್ಲವಾಗಿದೆ. ಸರ್ಕಾರ ಕೂಡಲೇ ನೌಕರರ ನ್ಯಾಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಲಾಗಿದೆ. ಮುಖ್ಯಮಂತ್ರಿಗಳಿಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ, ಎಲ್ಲ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಿಗೆ ಈಗಾಗಲೇ ಈ ಕುರಿತು ಮನವಿ ಮಾಡಲಾಗಿದ್ದರೂ ಬೇಡಿಕೆಗಳನ್ನು ಪರಿಗಣಿಸಿಲ್ಲ ಎಂದು ದೂರಿದ್ದಾರೆ.

ಸರ್ಕಾರಿ ನೌಕರಿ ಆದರೆ ಈಗಿನ ಬೆಲೆ ಏರಿಕೆಯ ದಿನಮಾನಗಳಲ್ಲಿ ವೇತನಗಳು ಪರಿಷ್ಕರಣೆಯಾಗುತ್ತವೆ. ಆದರೆ, ನಮಗೆ ಪಿಂಚಣಿ ನೀಡದೇ ಇರುವುದು. ಆರೋಗ್ಯ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ಥೈರ್ಯ ಕುಂದಿದೆ. ವಯೋ ವೃದ್ಧಾಪ್ಯದ ಸಮಯದಲ್ಲಿ ನಿವೃತ್ತ ನೌಕರರ ಚಿಕಿತ್ಸೆಗೆ ಕೂಡ ಕಷ್ಟಕರವಾಗಿದೆ. ಸರ್ಕಾರದ ಸೌಲಭ್ಯಗಳು, ಪಿಂಚಣಿಯಾಗಲಿ ಇಲ್ಲಿಯವರೆಗೂ ದೊರಕಿಲ್ಲ. ಹೀಗಾಗಿ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿರುವ ನೌಕರರು, ‘ಪ್ರಾಣಾನೂ ಬಿಡಲ್ಲ. ಪಿಂಚಣಿಯೂ ಬಿಡಲ್ಲ’ ಎಂಬ ಘೋಷಣಾ ಫಲಕ ಪ್ರದರ್ಶಿಸುತ್ತಿದ್ದಾರೆ. ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *