ನವದೆಹಲಿ: ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ಪುನರ್ವಸತಿಗಾಗಿ ಕೇಂದ್ರದಿಂದ ನೆರವು ಕೋರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದರು.ವಯನಾಡು
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು ಎಂದು ಪಿಎಂಒ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ತಿರುವನಂತಪುರದಲ್ಲಿರುವ ಮುಖ್ಯಮಂತ್ರಿ ಕಚೇರಿ ಕೂಡ ಪೋಸ್ಟ್ ಹಂಚಿಕೊಂಡಿದೆ. ಸಿಎಂ ಅವರು ಪದ್ಮನಾಭ ಸ್ವಾಮಿಯ ವಿಗ್ರಹವನ್ನು ಪ್ರಧಾನ ಮಂತ್ರಿಗೆ ಕಾಣಿಕೆಯಾಗಿ ನೀಡುತ್ತಿರುವುದನ್ನು ಪೋಸ್ಟ್‌ನಲ್ಲಿ ಕಾಣಬಹುದಾಗಿದೆ. ವಯನಾಡು
ಇದನ್ನು ಓದಿ : ಉಡುಪಿ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಅರೆಸ್ಟ್!
ಭೇಟಿಯ ವೇಳೆ ಸಿಎಂ ಅವರು ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ಪುನರ್ವಸತಿಗಾಗಿ ಕೇಂದ್ರದಿಂದ ನೆರವು ಕೋರಲಿದ್ದಾರೆ ಎಂದು ಮೂಲಗಳು ಹೇಳಿವೆ. ಆಗಸ್ಟ್ 10ರಂದು ಭೂಕುಸಿತ ಪೀಡಿತ ವಯನಾಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿಗೆ ಕೇಂದ್ರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದರು.
ವಯನಾಡ್ ಭೂಕುಸಿತದಿಂದಾಗಿ ಸಂತ್ರಸ್ತರಾಗಿರುವ 778 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಕೇರಳ ಸರ್ಕಾರ ಹೇಳಿದೆ. ಅಲ್ಲದೇ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳ ಪುನರ್ವಸತಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಆಗಸ್ಟ್ 29 ರಂದು ಸರ್ವಪಕ್ಷ ಸಭೆ ನಡೆಸಲಿದ್ದಾರೆ. ವಯನಾಡು
ಇದನ್ನು ನೋಡಿ : ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೂ ಮತ್ತು ಹೊರಗೂ ಹೋರಾಟಗಾರರಾಗಿದ್ದರು -ಸಿಎಂ ಸಿದ್ದರಾಮಯ್ಯ Janashakthi Media