ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದು, ಕೋಯಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಏಪ್ರಿಲ್ 8ರಂದು ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
Kerala Chief Minister Pinarayi Vijayan was discharged from Government Medical College, Kozhikode today.
He was admitted to the hospital on 8th April after he tested positive for #COVID19. pic.twitter.com/SGrqDxjbW9
— The Times Of India (@timesofindia) April 14, 2021
ಆಸ್ಪತ್ರೆಗೆ ದಾಖಲಾದ ಏಳು ದಿನಗಳ ಬಳಿಕ ವಿಜಯನ್ ಅವರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದ್ದು, ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ವೈದ್ಯರು ತಿಳಿಸಿದರು.
ಮಾರ್ಚ್ 3 ರಂದು ಕೋಯಿಕ್ಕೋಡ್ ಜಿಲ್ಲಾಸ್ಪತ್ರೆಯಲ್ಲಿ ಪಿಣರಾಯಿ ವಿಜಯನ್ ಅವರು ಲಸಿಕೆ ಹಾಕಿಕೊಂಡಿದ್ದರು. ಆದರೆ, ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಫಲಿತಾಂಶ ಮೇ 2ರಂದು ಹೊರಬೀಳಲಿದೆ.