ತೆಲಂಗಾಣ : ದೈಹಿಕ ಶಿಕ್ಷಕರೊಬ್ಬರು ಶಾಲೆ ವಿದ್ಯಾರ್ಥಿಗಳಿಗೆ ಕ್ಲಾಸ್ ರೂಮ್ಗಳು ಬದುಕು ರೂಪಿಸಲು ಮಾತ್ರವೇ ಸೀಮಿತವಾಗಿಲ್ಲ. ಅನೇಕರು ಉದ್ಯೋಗ ಗಿಟ್ಟಿಸಿಕೊಳ್ಳಲು ಸೂಕ್ತ ತರಬೇತಿಯೊಂದಿಗೆ ಮನೋಸ್ಥೈರ್ಯ ತುಂಬುತ್ತಿದ್ದಾರೆ. ಆ ನಿಟ್ಟಿನಲ್ಲಿ ಯಶಸ್ವಿಯೂ ಆಗಿದ್ದಾರೆ. ತೆಲಂಗಾಣ
ತೆಲಂಗಾಣದ ಮಲ್ಯಾಳ ಮಂಡಲದ ಟಕ್ಕಲ್ಪಲ್ಲಿ ಗ್ರಾಮದ ಗಂಗಾಸಾಗರ್ ಎಂಬ ದೈಹಿಕ ಶಿಕ್ಷಕ ಸ್ವ -ಇಚ್ಛೆಯಿಂದ ನೂರಾರು ಯುವಕರಿಗೆ ದೈಹಿಕ ಸದೃಢತೆ ಕಾಯ್ದುಕೊಳ್ಳಲು ಸಹಾಯ ಮಾಡಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್, ಸೇನೆ ಮತ್ತು ನೌಕಾಪಡೆಯ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ಅನೇಕ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಪ್ರಯತ್ನದ ಫಲವಾಗಿ ಅನೇಕರ ಬದುಕು ಬದಲಾಗಿದೆ. ತೆಲಂಗಾಣ
ಇದನ್ನೂ ಓದಿ: ಬೆಳ್ತಂಗಡಿ | ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಡಿ.ವೈ.ಎಫ್ಐ ನೇತೃತ್ವದ ಯುವಜನ ಜಾಥಾ
ದೈನಂದಿನ ಶಾಲಾ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ, ಉದ್ಯೋಗಾಕಾಂಕ್ಷೆ ಹೊಂದಿರುವ ನೂರಾರು ಮಂದಿಗೆ ಶಾಲೆಯ ಮೈದಾನದಲ್ಲಿಯೇ ಇವರು ಉಚಿತವಾಗಿಯೇ ತರಬೇತಿ ನೀಡುತ್ತಿದ್ದಾರೆ. ತಮ್ಮ ಸ್ವಗ್ರಾಮದಿಂದ 2 ಕಿ.ಮೀ ದೂರವಿರುವ ಟಕ್ಕಲ್ಪಲ್ಲಿಯ ಜೆಡ್ಪಿ ಹೈಸ್ಕೂಲ್ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಗಂಗಾಸಾಗರ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗಂಗಾಸಾಗರ್ ಅವರು ಸರ್ಕಾರಿ ಉದ್ಯೋಗಕ್ಕೆ ಸೇರುವ ಮುಂಚಿನಿಂದಲೂ ಅಂದರೆ 2016ರಿಂದಲೇ ಸ್ವಯಂಪ್ರೇರಿತರಾಗಿ ಉದ್ಯೋಗಾಂಕ್ಷಿಗಳಿಗೆ ತರಬೇತಿ ನೀಡಲು ಆರಂಭಿಸಿದರು. ಸ್ವಾಧ್ಯಾಯ ಪರಿವಾರ್ ತರಗತಿಗಳಲ್ಲಿ ಅವರು ಕಲಿತ ಬೋಧನೆಗಳೇ ಇದಕ್ಕೆ ಪ್ರೇರಣೆ. ಯುವಜನತೆಗೆ ದೈಹಿಕ ತರಬೇತಿ ನೀಡುವ ಮೂಲಕ ಅವರ ಬದುಕಿನ ದಿಕ್ಕು ಬದಲಾಯಿಸಬಹುದು ಎಂದು ನಂಬಿರುವ ಅವರು, ಟಕ್ಕಲ್ಪಲ್ಲಿಯಲ್ಲಿರುವ ಸ್ಥಳೀಯ ಪ್ರೌಢಶಾಲಾ ಮೈದಾನವನ್ನು ತಮ್ಮ ತರಬೇತಿ ಕೇಂದ್ರವಾಗಿ ರೂಪಿಸಿಕೊಂಡಿದ್ದಾರೆ.
ಪ್ರತಿನಿತ್ಯ ಮುಂಜಾನೆಯಿಂದ ಪುರುಷರು ಮತ್ತು ಮಹಿಳೆಯರಿಗೆ ಎರಡು ಗಂಟೆ ತರಬೇತಿ ನೀಡುತ್ತಾರೆ. ಸೇನಾಕಾಂಕ್ಷಿಗಳಿಗೆ ಪುಲ್‌ಅಪ್‌ಗಳು ಮತ್ತು 1,600 ಮೀಟರ್ ಓಟವನ್ನು ಕೇವಲ 5.30 ನಿಮಿಷಗಳಲ್ಲಿ ಪೂರ್ಣಗೊಳಿಸುವುದಕ್ಕಾಗಿ ತರಬೇತಿ ನೀಡಲಾಗುತ್ತಿದೆ.
ಹರ್ಡಲ್ಸ್, ಏಣಿ ಮತ್ತು ಡಂಬ್ಬೆಲ್ಸ್ನಂತಹ ಅಗತ್ಯ ತರಬೇತಿ ಸಲಕರಣೆಗಳನ್ನೂ ಕೂಡ ಅಭ್ಯರ್ಥಿಗಳಿಗೆ ನೀಡುತ್ತಾರೆ. ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಗಳು ಬಿಡುಗಡೆ ಆದಾಗಲೆಲ್ಲ, ಸುತ್ತಮುತ್ತಲಿನ ಅನೇಕ ಉದ್ಯೋಗಾಕಾಂಕ್ಷಿಗಳು ಇವರ ಬಳಿ ತರಬೇತಿ ಪಡೆಯಲು ಟಕ್ಕಲ್ಪಲ್ಲಿಗೆ ಆಗಮಿಸುತ್ತಾರೆ.
ಹಾನಿಕಾರಕ ಅಭ್ಯಾಸಗಳಿಗೆ ಒಳಗಾಗುವ ಬದಲಾಗಿ ಯುವಜನರು ಉದ್ಯೋಗ ಪಡೆಯಬೇಕು ಎಂಬ ಉದ್ದೇಶದೊಂದಿಗೆ ಈ ತರಬೇತಿ ಆರಂಭಿಸಿದೆ. ಸದ್ಯ ನಾನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಮುಂಜಾನೆ ಎರಡು ಗಂಟೆಗಳ ಕಾಲ ಗ್ರಾಮದ ಮೈದಾನದಲ್ಲಿ ತರಬೇತಿ ನೀಡುತ್ತೇನೆ. ನಮ್ಮ ಯುವಕರು ದುಶ್ಚಟಗಳಿಂದ ದೂರವಿದ್ದು ಉದ್ಯೋಗ ಕಂಡುಕೊಂಡರೆ, ಸಮಾಜ ಶಾಂತಿಯುತವಾಗಿರುತ್ತದೆ ಅಂತಾರೆ ಗಂಗಾಸಾಗರ್.
ಇದನ್ನೂ ನೋಡಿ: FRS ಗೆ ಯಾಕೆ ವಿರೋಧ? ಐಸಿಡಿಎಸ್ ಯೋಜನೆಯ ಆಶಯಕ್ಕೆ ಕತ್ತರಿ! Janashakthi Media #anganwadiworkers
