ಹೊಸಪೇಟೆ: ಜೂನ್ 5 ಮತ್ತು 6ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ 2024-25ನೇ ಸಾಲಿನ ಪಿಎಚ್.ಡಿ. ಪ್ರವೇಶ ಪರೀಕ್ಷೆ ನಿಗದಿಯಾಗಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚಿಸಿದ ಹೊಸ ಮಾರ್ಗಸೂಚಿಯ ಅನುಸಾರ ಸಿದ್ಧಗೊಂಡ ನಿಯಮದಂತೆ ಪರೀಕ್ಷೆ ಹಾಗೂ ಪ್ರವೇಶಾತಿ ನಡೆಯಲಿದೆ. ಹಂಪಿ
ಕನ್ನಡ ವಿಶ್ವವಿದ್ಯಾಲಯದಲ್ಲಿ 2013ರಲ್ಲಿ ಸಿದ್ಧಗೊಂಡ ಪಿಎಚ್.ಡಿ.ನಿಯಮವೇ ಕೊನೆಯ ನಿಯಮವಾಗಿತ್ತು. 2016ರಲ್ಲಿ ಯುಜಿಸಿ ಹೊಸ ನಿಯಮಾವಳಿ ರೂಪಿಸಿತ್ತು. ಆಗ ಅದರಂತೆ ಇಲ್ಲಿಯೂ ನಿಯಮಾವಳಿ ರೂಪಿಸುವುದು ಸಾಧ್ಯವಾಗಿರಲಿಲ್ಲ. ಯುಜಿಸಿ 2022ರಲ್ಲಿ ಮತ್ತೊಂದು ನಿಯಮ ರೂಪಿಸಿತ್ತು. ಬಹುತೇಕ ಅದೇ ನಿಯಮಗಳನ್ನು ಇಟ್ಟುಕೊಂಡು ಕನ್ನಡ ವಿಶ್ವವಿದ್ಯಾಲಯದಲ್ಲಿ ಇದೀಗ ಕರಡು ನಿಯಮಾವಳಿ ರೂಪಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹಂಪಿ
‘ನಿಯಮ ರೂಪಿಸುವಾಗ ಸ್ವಲ್ಪ ವಿಳಂಬವಾಗಿದೆ. ಅದಕ್ಕಾಗಿಯೇ 2024-25ನೇ ಸಾಲಿನ ಪಿಎಚ್.ಡಿ.ಪ್ರವೇಶ ಪರೀಕ್ಷೆ ಮತ್ತು ಇತರ ಪ್ರವೇಶ ಪ್ರಕ್ರಿಯೆ ಸಹ ವಿಳಂಬವಾಗಿದೆ. ಯುಜಿಸಿಯ ನಿಯಮಗಳನ್ನೇ ಪ್ರಧಾನವಾಗಿ ಇಟ್ಟುಕೊಂಡು ಅದರಂತೆಯೇ ನಮ್ಮ ನಿಯಮಾವಳಿಗಳನ್ಣೂ ರೂಪಿಸಿದ್ದೇವೆ. ಜೂನ್ ಅಥವಾ ಜುಲೈ ತಿಂಗಳಲ್ಲಿ 2025-26ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇದನ್ನೂ ಓದಿ: ನವೆಂಬರ್ 1 ರೊಳಗೆ ಕೇರಳ ಬಡತನ ಮುಕ್ತ ರಾಜ್ಯವಾಗಲಿದೆ – ಪಿಣರಾಯಿ ವಿಜಯನ್
‘ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆಗಳ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೇ 50ಕ್ಕಿಂತ ಅಧಿಕ ಅಂಕ ಗಳಿಸಿದವರು ಮಾತ್ರ ಸಂದರ್ಶನಕ್ಕೆ ಅರ್ಹರಾಗುತ್ತಾರೆ. ಆಲ್ಲೂ ಅಷ್ಟೇ, ಮೀಸಲಾತಿ ಹಾಗೂ ಇತರ ಷರತ್ತುಗಳಿಗೆ ಒಳಪಟ್ಟು ಅಧಿಕ ಅಂಕ ಗಳಿಸಿದವರಷ್ಟೇ ಆಯ್ಕೆಯಾಗುತ್ತಾರೆ’ ಎಂದರು. ಹಂಪಿ
ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿಯುಜಿಸಿ ನಿಯುಮದಂತೆಯೇ ನಡೆದುಕೊಳ್ಳಲಾಗುತ್ತಿದೆ. ಈ ಬಾರಿ 240 ಪಿಎಚ್‌ಡಿ ಸೀಟು ಲಭ್ಯವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಅಷ್ಟೇ ಪ್ರಮಾಣದಲ್ಲಿ ಸೀಟು ಲಭ್ಯವಾಗಲಿದೆ.’ಯುಯುಸಿಎಂಎಸ್ ಸಾಫ್ಟ್‌ವೇರ್‌ನಲ್ಲಿ ಹಾಲ್ ಟಿಕೆಟ್ ಅಳವಡಿಸುವ ಪ್ರಕ್ರಿಯೆ ಕೆಲವು ತಾಂತ್ರಿಕ ಕಾರಣಗಳಿಂದ ನಡೆದಿಲ್ಲ. ಹೀಗಾಗಿ ಈ ಬಾರಿ ಹಾಲ್‌ಟೆಕೆಟ್ ಅನ್ನು ಪರೀಕ್ಷೆ ಸಮಯಕ್ಕಿಂತ ಹತ್ತು ನಿಮಿಷ ಮೊದಲು ನೀಡಲಾಗುತ್ತದೆ. ಸಮೀಪದಲ್ಲಿ ಇದ್ದವರು ಮೊದಲು ಬಂದೂ ತೆಗೆದುಕೊಂಡು ಹೋಗಬಹುದು. ಫೋಟೊ ಇರುವ ಗುರುತಿನ ಚೀಟಿ ತರುವುದು ಕಡ್ಡಾಯ. ಇದೀಗ ವಿಶ್ವವಿದ್ಯಾಲಯಕ್ಕೆ ಪರಿಪೂರ್ಣವಾಗಿ, ಪಾರದರ್ಶಕವಾಗಿ ಪಿಎಚ್.ಡಿ.ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಧ್ಯವಾಗಲಿದೆ’ ಎಂದು ಹೇಳಿದರು.
ಅಂತಿಮ ಅಧಿಸೂಚನೆ
ಪಿಎಚ್.ಡಿ ನಿಯಮಗಳ ಅಂತಿಮ ಅಧಿಸೂಚನೆ ಶೀಘ್ರ ಹೊರಡಿಸಿ ಕಾಯಂಗೊಳಿಸಬೇಕು, ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಸಹ ಪ್ರಕಟಿಸಬೇಕು, ಯಾವ ವಿದ್ಯಾರ್ಥಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಹಲವು ಆಕಾಂಕ್ಷಿಗಳು ಒತ್ತಾಯಿಸಿದ್ದು, ಕುಲಪತಿ ಅವರು ಇದೆಲ್ಲವನ್ನು ಪರಿಶೀಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಲಿತಕಲಾ ವಿಭಾಗದ ಡೀನ್ ಪ್ರೊ.ಶಿವಾನಂದ ಎಸ್.ವಿರಕ್ತಮಠ ಅವರ ಅಧ್ಯಕ್ಷತೆಯಲ್ಲಿ ಪಿಎಚ್.ಡಿ. ಪದವಿ ನಿಯಮಾವಳಿ ರೂಪಣಾ ಸಮಿತಿ ರಚಿಸಲಾಗಿತ್ತು. ಪ್ರೊ.ಎಸ್.ವೈ.ಸೋಮಶೇಖರ್ ಸದಸ್ಯ ಸಂಚಾಲಕರಾಗಿದ್ದರು. ಉಳಿದಂತೆ ಪ್ರೊ.ಕೆ.ಮೋಹನಕೃಷ್ಣ ರೈ ಪ್ರೊ.ಪಿ.ಮಹಾದೇವಯ್ಯ ಪ್ರೊ.ಅಶೋಕ್ ಕುಮಾರ್ ರಂಜೇರೆ ಪ್ರೊ.ಎ.ಶ್ರೀಧರ ಪ್ರೊ.ವೆಂಕಟಗಿರಿ ದಳವಾಯಿ ಪ್ರೊ.ಅಮರೇಶ್ ಯತಗಲ್ ಪ್ರೊ.ಇ.ಯರ್ರಿಸ್ವಾಮಿ ಪ್ರಭಾ ಡಿ. ಅವರು ಸದಸ್ಯರಾಗಿದ್ದರು.
ಹೊಸ ನಿಯಮದಲ್ಲೇನಿದೆ?
ಎನ್‌ಇಪಿ ಅನ್ವಯ ನಾಲ್ಕು ವರ್ಷ ಪದವಿ ಪೂರೈಸಿದವರು ಸಹ ಪಿಎಚ್.ಡಿ. ಅರ್ಹತಾ ಪರೀಕ್ಷೆ ಬರೆಯಬಹುದು ಎಂಬುದು ಈ ಬಾರಿಯ ಪ್ರಮುಖ ನಿಯಮಗಳಲ್ಲಿ ಒಂದು. ನಿವೃತ್ತಿಯಾಗಲು ಇನ್ನು ಮೂರು ವರ್ಷ ಬಾಕಿ ಇರುವ ಪ್ರಾಧ್ಯಾಪಕರಿಗೆ ಗೈಡ್‌ಶಿಪ್ ಕೊಡುವಂತಿಲ್ಲ ಎಂಬುದು ಇನ್ನೊಂದು ಪ್ರಮುಖ ನಿಯಮ. ಪ್ರವೇಶ ಪರೀಕ್ಷೆಯಲ್ಲಿ ನೀಡುವ ಲಿಖಿತ ಪರೀಕ್ಷೆಯಲ್ಲಿ ಶೇ 50 ರಷ್ಟು ಅಂಕ ಸಂಶೋಧನಾ ವೈಜ್ಞಾನಿಕತೆಗೆ ಹಾಗೂ ಶೇ 50ರಷ್ಟು ಅಂಕ ಆಯಾ ವಿಷಯದ ಮೇಲೆ ಇರುತ್ತದೆ.
ಇದನ್ನೂ ನೋಡಿ: ಗಾಂಧೀ ಸೆಂಟರ್ ಅಫ್ ಸೈನ್ಸ್‌ಗೆ ಆಹ್ವಾನ ನೀಡಿದ್ದೇ ಡಾ. ಎಸ್. ಬಾಲಚಂದ್ರನ್ – ಪಾಲಹಳ್ಳಿ ವಿಶ್ವನಾಥ್