ಫಾರ್ಮಾನು ಹೊರಡಿಸಿ ಬಿಡು

ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು

ಫಾರ್ಮಾನು ಹೊರಡಿಸಿ ಬಿಡು

ನೀನೊಂದು
ಫಾರ್ಮಾನು
ಹೊರಡಿಸಿ ಬಿಡು
ಎಂದೆಂದು ನನ್ನದಾಗದ….
ಹೃದಯಕ್ಕೆ ದಕ್ಕುವ ಕವಿತೆಗೆ

ಆಗಾಗ ನನ್ನಲ್ಲೇ
ಗಿರಕಿ ಹೊಡೆಯುವ ಪದಗಳಿಗೆ
ಬರೆ ಬರೆದು
ಸವೆಯುತ್ತಿರುವ ಬೆರಳುಗಳಿಗೆ
ನೀನೊಂದು ಫಾರ್ಮಾನು ಹೊರಡಿಸಿಬಿಡು

ಸೋತ ಕಾಲಕ್ಕೆ….
ನೀ ಇಲ್ಲದ ಗಳಿಗೆಗಳಿಗೆ
ಕಾದು ಕುಳಿತಿರುವ ಮನಸ್ಸಿಗೆ
ನಿನ್ನ ಹೆಜ್ಜೆ ಸಪ್ಪಳಕ್ಕಾಗಿ, ದನಿಗಾಗಿ
ಕಾತರಿಸಿದ ಕಿವಿಗಳಿಗೆ
ನಿನ್ನ ಮೈಸುಗಂಧದ
ಅಮಲೇರಿಸುವ ಮೂಗಿಗೆ
ನಿನ್ನನ್ನೇ
ನೋಡಬೇಕೆಂದು ರೆಪ್ಪೆ ಅಲುಗಿಸದೆ ಕಾದ
ಕಣ್ಣುಗಳಿಗೆ
ಹೊರಡಿಸಿ ಬಿಡಿ ಫಾರ್ಮಾನು

ಎಂದೆಂದಿಗೂ ದಕ್ಕದ
ನಿನ್ನೊಲವಿಗೆ.

Donate Janashakthi Media

Leave a Reply

Your email address will not be published. Required fields are marked *