ಗಜೇಂದ್ರಗಡ: ಗಜೇದ್ರಗಡ ನಗರದಲ್ಲಿ ಸರ್ಕಾರಿ ಸ್ನಾತಕೋತ್ತರ ಪದವಿ ಕೇಂದ್ರ ಸ್ಥಾಪಿಸಲು ಹಾಗೂ ನಗರದಲ್ಲಿ ಸರಕಾರಿ ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭಿಸಲು ಮತ್ತು ಇತರ ಶೈಕ್ಷಣಿಕ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ SFI ಗಜೇದ್ರಗಡ ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ರೋಣ ಶಾಸಕ ಕೆ.ಜಿ ಬಂಡಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ SFI ರಾಜ್ಯ ಸಮಿತಿ ಸದಸ್ಯ ಗಣೇಶ ರಾಠೋಡ ಮಾತನಾಡಿ ಗಜೇದ್ರಗಡ ನಗರವು ತಾಲೂಕಾಗಿ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಸಾವಿರಾರು ವಿದ್ಯಾರ್ಥಿಗಳು ತಮ್ಮ ಪದವಿ ಪಡೆದು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಗದಗ ಆಥವಾ ಧಾರವಾಡ ನಗರಗಳ ಮೇಲೆ ಅವಲಂಬಿಸಿದ್ದಾರೆ. ನಗರದಲ್ಲಿ 4-5 ಡಿಗ್ರಿ ಕಾಲೇಜುಗಳು 6 ಪಿಯು ಕಾಲೇಜ ತಾಲೂಕಿನ ವ್ಯಾಪ್ತಿಯಲ್ಲಿ ಇನ್ನೂ ಅನೇಕ ಕಾಲೇಜುಗಳು ಮತ್ತು ಹತ್ತು ಹಲವಾರು ಹೈಸ್ಕೂಲ್‌ಗಳು ಬರುತ್ತವೆ ಅವರ ವ್ಯಾಸಂಗ ಮುಗಿದ ಮೇಲೆ ಉನ್ನತ ಶಿಕ್ಷಣ ಪಡೆಯಲು ದೂರದ ನಗರಗಳಿಗೆ ಹೋಗುವ ಅನಿವಾರ್ಯತೆ ಇದೆ ಆದ್ದರಿಂದ ಅವರಿಗೆ ಹಲವಾರು ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೂರದ ನಗರ ಪ್ರದೇಶಗಳಲ್ಲಿ ಹಾಸ್ಟೆಲ್ ಸಿಗದೇ ಉನ್ನತ ಶಿಕ್ಷಣ ಒಂದು ರೀತಿಯಲ್ಲಿ ಹೊರೆಯಾಗಿ ಪರಿಣಿಮಿಸಿದೆ. ಆದ ಕಾರಣ ತಾವುಗಳು ಸರ್ಕಾರದ ಜೊತೆಗೆ ಮಾತನಾಡಿ ಒಂದು ಸರ್ಕಾರಿ PG ಸೆಂಟರ್ ಸ್ಥಾಪಿಸಲು ಮುಂದಾಗಬೇಕೇಂದು ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಗಜೇದ್ರಗಡ ತಾಲ್ಲೂಕು ಸಮಿತಿ ಈ ಮೂಲಕ ಒತ್ತಾಯಿಸುತ್ತದೆ ಎಂದರು.
ನಂತರ ಜಿಲ್ಲಾಧ್ಯಕ್ಷ ಶಿವಾನಂದ ಬೊಸ್ಲೆ ಮಾತನಾಡಿ ಗಜೇದ್ರಗಡದಲ್ಲಿ ಮೆಟ್ರಿಕ್ ನಂತರದ ಹಾಸ್ಟೆಲ್ ತೆರೆಯಲು ಒತ್ತಾಯ: ನಗರದಲ್ಲಿ ಸುಮಾರು 6 ಪಿಯು ಕಾಲೇಜಗಳು ಮತ್ತು 4-5 ಡಿಗ್ರಿ ಕಾಲೇಜಗಳು ಇವೆ ಇಲ್ಲಿ ಅನೇಕ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ ಆದರೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲಾ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುತ್ತದೆ ಆದ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಗರದಲ್ಲಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ತೆರೆಯಲು ಸರ್ಕಾರದ ಜೊತೆಗೆ ಮಾತನಾಡಿ ಹಾಸ್ಟೆಲ್ ತೆರೆಯಲು ಒತ್ತಡ ಹಾಕಬೇಕು ಈ ಹಿಂದೆಯು ಈ ಕುರಿತು ಸಹಿ ಸಂಗ್ರಹ ಚಳುವಳಿ ಮಾಡಿ ಸರ್ಕಾರದ ಗಮನಕ್ಕೆ ತರಲಾಗಿದೆ ಹಾಗಾಗಿ ತಾವುಗಳು ಈ ಕುರಿತು ಗಮನ ಹರಿಸಬೇಕು ಎಂದರು.
SFI ಜಿಲ್ಲಾ ಮುಖಂಡ ವಿರೇಶ ಬೆನಹಾಳ ಮಾತನಾಡಿ ವಿದ್ಯಾರ್ಥಿ ವೇತನ ಬಿಡುಗಡೆಗೆ ಕ್ರಮ ವಹಿಸಿ: ಎಲ್ಲಾ ವಿದ್ಯಾರ್ಥಿಗಳಿಗೆ ತಕ್ಷಣವೇ ಅವರ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಕೊವಿಡ್ ಕಾಲದಲ್ಲಿ ಕಾಲೇಜುಗಳು ಬಂದ ಮಾಡಿರುವದರಿಂದ ಈ ವರ್ಷದ ವಿದ್ಯಾರ್ಥಿ ವೇತನ ಇನ್ನೂ ಬಿಡುಗಡೆ ಮಾಡಿಲ್ಲ. ಕುಟುಂಬಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿರುವಾಗ ವಿದ್ಯಾರ್ಥಿಗಳು ಕುಟುಂಬಕ್ಕೆ ಹೊರೆ ಆಗುತ್ತಿದ್ದಾರೆ ಆದ್ದರಿಂದ ವಿದ್ಯಾರ್ಥಿ ವೇತನ ತಕ್ಷಣ ಬಿಡುಗಡೆ ಮಾಡಿಸಲು ಕ್ರಮ ವಹಿಸಬೇಕು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಡೇ ಕಾಲರ್ ಶೀಫ್ ನೀಡಿ: ಕೊವಿಡ್ ಕಾಲದಲ್ಲಿ ಎಲ್ಲಾ ಹಾಸ್ಟೆಲ್ ಗಳು ಬಂದ್ ಇರುವುದರಿಂದ ಹಾಸ್ಟೆಲ್ ನಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಡೇ ಕಾಲರ್ ಶೀಫ್ ನೀಡಬೇಕು ಅವರ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿ ಇದ್ದು ಇದೇ ಕಾಲದಲ್ಲಿ ಅತೀವೃಷ್ಟಿಯಿಂದ ಅನೇಕ ರೈತ ಕಾರ್ಮಿಕ ಕುಟುಂಬಗಳು ಬೆಳೆ ಹಾನಿಯಾಗಿ ನೆರೆ ಬಂದು ರೈತರ ಕಾರ್ಮಿಕರ ಮೇಲೆ ಬರೆ ಎಳೆದಂತಾಗಿದೆ ಹಾಗಾಗಿ ಅಂತಹ ರೈತ ಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರಿಗೂ ಡೇ ಕಾಲರ್ ಶೀಫ್ ನೀಡಬೇಕು.
ಶುಲ್ಕವನ್ನು ಸರ್ಕಾರವೇ ಭರಿಸಬೇಕು ಮತ್ತು ಶೈಕ್ಷಣಿಕ ತುರ್ತು ಪರಿಸ್ಥಿತಿ ಘೋಷಿಸಿ ಶೈಕ್ಷಣಿಕ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ ಎಲ್ಲಾ ರೀತಿಯ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಮತ್ತು ಶಿಕ್ಷಣ ವಲಯವನ್ನು ಅಭಿವೃದ್ಧಿ ಮಾಡಲು ಶೈಕ್ಷಣಿಕ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿ ಶೈಕ್ಷಣಿಕ ವಲಯಕ್ಕೆ ವಿಶೇಷ ಪ್ಯಾಕ್ ಘೋಷಿಸಬೇಕು ಆ ಮೂಲಕ ಅತಿಥಿ ಉಪನ್ಯಾಸಕರ, ಶಿಕ್ಷಕರ ಮತ್ತು ಶೈಕ್ಷಣಿಕ ವಲಯದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಎಲ್ಲರ ಹಿತ ಕಾಯಬೇಕು ಅದಕ್ಕಾಗಿ ಶೈಕ್ಷಣಿಕ ತುರ್ತು ಪರಸ್ಥಿತಿ ಅಂತಾ ಘೋಷಿಸಿ ಮತ್ತು ಶೈಕ್ಷಣಿಕ ವಲಯಕ್ಕೆ ವಿಶೇಷ ಪ್ಯಾಕೇಜ್‌ನ್ನು ಸರ್ಕಾರ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕು ಎಗ್ಗಿಲ್ಲದೇ ಶುಲ್ಕ ವಸೂಲಿ ಮಾಡಿತ್ತಿರುವ ಸಂಸ್ಥೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
SFI ತಾಲ್ಲೂಕ ಮುಖಂಡ ಚಂದ್ರು ರಾಠೋಡ ಮಾತನಾಡಿ ಕ್ಯಾಂಪಸ್ ಹತ್ಯೆ ತಡೆಯಲು ರೋಹಿತ ಕಾನೂನು ರೂಪಿಸಿ ಜಾರಿ ಮಾಡಿ: ವಿದ್ಯಾರ್ಥಿ ವೇತನ ಬಾರದೇ ಇರುವುದರಿಂದ, ಶುಲ್ಕ ಕಟ್ಟಲು ಆಗದೇ ಇರುವರಿಂದ, ಆನ್ ಲೈನ್ ಕ್ಲಾಸ್ ಕೇಳಲು ಪೋನ್, ಲ್ಯಾಪ್‌ಟಾಪ್, ಟ್ಯಾಬ್ ಗಳನ್ನು ಖರೀದಿಸಲು ಆಗದೇ, ಶಿಕ್ಷಣ ಸಂಸ್ಥೆಗಳು ನೀಡುವ ಕಿರುಕುಳ ತಾಳಲಾಗದೇ ನಡೆಯುತ್ತಿರುವ ಆತ್ಮಹತ್ಯೆಗಳನ್ನು ತಕ್ಷಣವೇ ತಡೆಯಬೇಕು. ಅಂತಹ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು. ಈ ರೀತಿಯ ಆತ್ಮಹತ್ಯೆ ತಡೆಯಲು ರೋಹಿತ ಕಾನೂನನ್ನು ರೂಪಿಸಿ ಜಾರಿ ಮಾಡಬೇಕು ಎಂದರು.
ಮುಖ್ಯ ಬೇಡಿಕೆಗಳು :
1) ಎಲ್ಲಾ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ತಕ್ಷಣವೇ ಬಿಡುಗಡೆ ಮಾಡಿ.
2) ಕೋವಿಡ್ ಕಾಲದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಡೇ ಕಾಲರ್ ಶೀಫ್ ನೀಡಬೇಕೆಂದು ಒತ್ತಾಯಿಸಿ.
3) ರೋಹಿತ ಕಾಯ್ದೆ ರೂಪಿಸಿ ಜಾರಿ ಮಾಡಿ.
4) ಖಾಸಗಿ ಶಿಕ್ಷಣ ಸಂಸ್ಥೆಗಳು ಏಗ್ಗಿಲ್ಲದೆ ನಡೆಸುತ್ತಿರುವ ಶುಲ್ಕ ವಸೂಲಾತಿಯನ್ನು ತಡೆಗಟ್ಟಿ.
5) ಗಜೇಂದ್ರಗಡದಲ್ಲಿ ಸರ್ಕಾರಿ ಪಿಜಿ ಸೆಂಟರ್ ಪ್ರಾರಂಭಿಸಿ.
6) ಗಜೇಂದ್ರಗಡದಲ್ಲಿ ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ ಪ್ರಾರಂಭಿಸಲು ಒತ್ತಾಯಿಸಿ.
ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಗಜೇಂದ್ರಗಡ ತಾಲ್ಲೂಕು ಸಮಿತಿಯು ಮಾನ್ಯ ಶಾಸಕರಿಗೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ವೀರೇಶ ಬೆನಹಾಳ, ಶಿವಾನಂದ ಬೊಸ್ಲೆ, ಚಂದ್ರು ರಾಠೋಡ, ಗಣೇಶ ರಾಠೋಡ, ಅರ್ಜುನ್ ರಾಠೋಡ, ರಾಜೇಶ ಕದಡಿ, ಆಸೀಫ್ ನದಾಫ್, ವಿರೇಶ ರಾಠೋಡ, ಕನಕಮ್ಮ ಮಾದರ, ಬಿಮೇಶ ರಾಠೋಡ, ನಜೀರ ಪಿಂಜಾರ, ಶರಣಪ್ಪ ರಾಠೋಡ, ರಾಜು ರಾಠೋಡ, ಕನಕಪ್ಪ ಮಾದರ ಇತರರು ಹಾಜರಿದ್ದರು.