ನವದೆಹಲಿ ಜ.14– ಅಂತರಾಷ್ಟ್ರೀಯ ತೈಲ ದರಗಳಲ್ಲಿ ಹೆಚ್ಚಳವಾಗುವ ಮೂಲಕ ವಾರದಲ್ಲಿ ಎರಡನೇ ಬಾರಿ ಪ್ರತಿ ಲೀಟರ್ ಪೇಟ್ರೋಲ್-ಡೀಸೆಲ್ ಬೆಲೆಯಲ್ಲಿ ನೇರವಾಗಿ 0.25 ಪೈಸೆ ಹೆಚ್ಚಳ ಮಾಡುವ ಮೂಲಕ ಸಂಕ್ರಾಂತಿ ಸಂಭ್ರಮದಲ್ಲಿರುವ ಜನರಿಗೆ ಕೇಂದ್ರ ಸರ್ಕಾರವು ಬೆಲೆ ಹೆಚ್ಚಳ ಮಾಡುವ ಮೂಲಕ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಗುರುವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್
ಪೆಟ್ರೋಲ್ ಬೆಲೆ 87.30 ರೂ,
ಡಿಸೇಲ್ ಬೆಲೆ 79.40 ರೂ.
ದೆಹಲಿಯಲ್ಲಿ ಪ್ರತಿ ಲೀಟರ್
ಪೇಟ್ರೋಲ್ ಬೆಲೆ 85.70 ರೂ.
ಡಿಸೇಲ್ ಬೆಲೆ 74.88 ರೂ. ಆಗಿದೆ
ಮುಂಬೈನಲ್ಲಿ ಪ್ರತಿ ಲೀಟರ್
ಪೇಟ್ರೋಲ್ ಬೆಲೆ 91.32 ರೂ.
ಡಿಸೇಲ್ ಬೆಲೆ 81.34 ರೂ. ಆಗಿದೆ.
ಕಳೆದ ಎರಡು ತಿಂಗಳಿಂದ ಪೆಟ್ರೋಲ್, ಡಿಸೈಲ್ ದರಗಳಲ್ಲಿ ಹೆಚ್ಚಳವಾಗುತ್ತಿದೆ. ಹಿಂದೆ UPA ಸರಕಾರ ಇದ್ದಾಗ ಬೆಲೆ ಹೆಚ್ಚಳವಾದರೆ ಬೀದಿಗೆ ಇಳಿಯುತ್ತಿದ್ದ ಬಿಜೆಪಿ, ಈಗ ತಾನೇ ಸರಕಾರ ನಡೆಸುತ್ತಿದ್ದರೂ ನಿಯಂತ್ರಣಕ್ಕೆ ತರುತ್ತಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಭಾರತ ಸರಕಾರ ಮಾತ್ರ ದರ ಹೆಚ್ಚಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ತಕ್ತಪಡಿಸಿದ್ದಾರೆ.