ಪೆಟ್ರೋಲ್, ಡಿಸೈಲ್ ಶತಕದತ್ತ..!?

ಕಚ್ಚಾ ತೈಲ ದರ ಬ್ಯಾರಲ್‌ಗೆ 120 ಡಾಲರ್‌ ಇದ್ದಾಗ ಪೆಟ್ರೋಲ್‌ ಒಂದು ಲೀಟರ್‌ಗೆ 48 ರೂ ಗೆ ಸಿಗುತ್ತಿತ್ತು. ಈಗ ಕಚ್ಚಾ ತೈಲ ದರ ಬ್ಯಾರಲ್‌ಗೆ 60 ಡಾಲರ್‌ ಇದೆ, ಪೆಟ್ರೋಲ್‌ ದರ 90 ರೂ ಯನ್ನು ದಾಟಿದೆ’ ಇದಕ್ಕೆ ಕಾರಣವಾದರೂ ಏನು? ಹೇಗೆ ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಕೆಲ ದಿನಗಳಿಂದ ದಿನೇದಿನೆ ಹೆಚ್ಚಾಗ್ತಾನೇ ಇದೆ. ಪೆಟ್ರೋಲ್, ಡಿಸೈಲ್ ಬೆಲೆ ಹೆಚ್ಚಳಕ್ಕೆ ಹೆಚ್ಚಾಗುತ್ತಿದೆ ಜನಾಕ್ರೋಶ. ಮೋದಿ ಸರಕಾರದಲ್ಲಿ ಸೆಂಚುರಿಯತ್ತ  ಪೆಟ್ರೋಲ್, ಡಿಸೈಲ್ ದಾಪುಗಾಲಿಡುತ್ತಿದೆ.

ಪೆಟ್ರೋಲ್,  ಮತ್ತು ಡೀಸೆಲ್ ದರದಲ್ಲಿ  ಇವತ್ತು ಮತ್ತೆ ಏರಿಕೆಯಾಗಿದ್ದು, ಗ್ರಾಹಕರು ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ದರದಲ್ಲಿ 27 ಪೈಸ್ ಹಾಗೂ ಡಿಸೇಲ್ ದರದಲ್ಲಿ 34 ಪೈಸೆ ದಾಖಲೆಯ ಏರಿಕೆಯನ್ನು ಕಂಡಿದೆ. ಈ ಏರಿಕೆಯಿಂದಾಗಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.85 ರೂ, ಹಾಗೂ ಡೀಸೆಲ್ ಬೆಲೆ 78.03 ರೂ. ಗೆ, ತಲುಪಿದೆ. ಇನ್ನೂ ಮುಂಬೈನಲ್ಲಿ ಪೆಟ್ರೋಲ್  ದರ 94.39ರೂ ಗೆ ಬಂದು ತಲುಪಿದೆ. ಇನ್ನೂ ಡಿಸೇಲ್ ಬೆಲೆ  84.97 ರೂ. ಆಗಿದೆ. ಬೆಂಗಳೂರಿನಲ್ಲೂ ಪೆಟ್ರೋಲ್ ಲೀಟರ್ ಗೆ 90.63 ರೂ. ಆಗಿದೆ. ಡಿಸೇಲ್ ನ ಬೆಲೆಯೂ 82.58 ರೂ ಗೆ ತಲುಪಿದೆ. ತೆಲಂಗಾಣದಲ್ಲಿ 1 ಲೀಟರ್ ಪೆಟ್ರೋಲ್ ದರ 93.37 ಆಗಿದೆ.

ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ₹20ರಷ್ಟು ಹೆಚ್ಚಳ ಆಗಿದೆ. ಇದೇ ಅವಧಿಯಲ್ಲಿ ಡೀಸೆಲ್ ಬೆಲೆಯು ಸರಿಸುಮಾರು ₹16ರಷ್ಟು ಹೆಚ್ಚಳ ಕಂಡಿದೆ. ‘ಬೆಲೆ ಹೆಚ್ಚಳದ ಕಾರಣ ದಿಂದಾಗಿ ಗ್ರಾಹಕರು ತಮ್ಮ ವಾಹನಗ ಳಿಗೆ ಇಂಧನ ತುಂಬಿಸಿಕೊಳ್ಳುವ ಪ್ರಮಾಣ ತಗ್ಗಿದೆ. ಬೆಂಗಳೂರಿನಲ್ಲಿ ಎರಡು ತಿಂಗಳ ಹಿಂದೆ ಆಗುತ್ತಿದ್ದ ವಹಿವಾಟಿಗೆ ಹೋಲಿಸಿದರೆ ಪೆಟ್ರೋಲ್ ಮಾರಾಟ ದಲ್ಲಿ ಶೇಕಡ 30ರಷ್ಟು ಇಳಿಕೆ ಕಂಡು ಬಂದಿದೆ ಎಂಬೆಲ್ಲಾ ಮಾಹಿತಿಗಳು ಹೊರಬೀಳುತ್ತಿವೆ.

ಕಚ್ಚಾ ತೈಲ ದರ ಬ್ಯಾರಲ್‌ಗೆ 120 ಡಾಲರ್‌ ಇದ್ದಾಗ ಪೆಟ್ರೋಲ್‌ ಒಂದು ಲೀಟರ್‌ಗೆ 48 ರೂ ಗೆ ಸಿಗುತ್ತಿತ್ತು. ಈಗ ಕಚ್ಚಾ ತೈಲ ದರ ಬ್ಯಾರಲ್‌ಗೆ 60 ಡಾಲರ್‌ ಇದೆ, ಪೆಟ್ರೋಲ್‌ ದರ 90 ರೂ ಯನ್ನು ದಾಟಿದೆ’ ಇದಕ್ಕೆ ಕಾರಣವಾದರೂ ಏನು? ಹೇಗೆ ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತಿವೆ.

2014 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಕ ಸೆಂಟ್ರಲ್ ಟ್ಯಾಕ್ಸ್  10. ರೂ 39 ಪೈಸೆ ಇದ್ರೆ, ಸ್ಟೇಟ್ ಟ್ಯಾಕ್ಸ್ 11. ರೂ, 90 ಪೈಸೆ ಇತ್ತು. 2021 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 32 ರೂ 98  ಪೈಸೆ ಸೆಂಟ್ರಲ್ ಟ್ಯಾಕ್ಸ್ ಕಟ್ಟಲಾಗುತ್ತಿದೆ. ಸ್ಟೇಟ್ ಟ್ಯಾಕ್ಸ್ ಗೆ 19 ರೂ 92 ಪೈಸೆ ಕಟ್ಟಲಾಗುತ್ತಿದೆ. ಅಂದ್ರೆ 217.42 ರಷ್ಟು ಸೆಂಟ್ರಲ್ ಟ್ಯಾಕ್ಸ್ ಹೆಚ್ಚಳವಾಗಿದೆ. 67.39 % ಸ್ಟೇಟ್ ಟ್ಯಾಕ್ಸ್ ಹೆಚ್ಚಳವಾಗಿದೆ.  ಡಿಸೈಲ್ ಮೇಲಿನ ಸೆಂಟ್ರಲ್ ಟ್ಯಾಕ್ಸ್ 2014 ರಲ್ಲಿ 4 ರೂ 50 ಪೈಸೆ ಇದ್ದರೆ 2021 ರಲ್ಲಿ 31 ರೂ 83 ಪೈಸೆ ಹೆಚ್ಚಳವಾಗಿದೆ. ಅಂದರೆ ಶೆ, 607,33% ಏರಿಕೆ ಕಂಡಿದೆ. ಸ್ಟೇಟ್ ಟ್ಯಾಕ್ಸ್ 2014 ರಲ್ಲಿ6 ರೂ 61 ಪೈಸೆ ಇದ್ರೆ 2021 ರಲ್ಲಿ 11. 22 ರಷ್ಟು ಹೆಚ್ಚಾಗಿದೆ. ಅಂದರೆ ಶೆ, 69.74 ರಷ್ಟು ಹೆಚ್ಚಾಗಿದೆ. ಮೋದಿ ಸರಕಾರದ ಕಾಲಾವಧಿಯಲ್ಲಿ ಸಾರ್ವಕಾಲಿಕ ಏರಿಕೆಯನ್ನು ಪೆಟ್ರೋಲ್ ಮತ್ತು ಡಿಸೇಲ್ ಕಂಡಿವೆ ಎಂಬುದಕ್ಕೆ ಇದಕ್ಕಿಂತ ಬೆರೆ ಪುರಾವೆಗಳ ಅಗತ್ಯವಿಲ್ಲ ಎಂದು ತಜ್ಞರು ವಾದ ಮಾಡುತ್ತಿದ್ದಾರೆ.

ದೇಶದ ಕೆಲ ರಾಜ್ಯಗಳಲ್ಲನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ. ಮತ್ತು ರಾಜ್ಯ  ತೆರಿಗೆಗಳು ಎಷ್ಟಿವೆ ಎಂಬುದನ್ನು ನೋಡ್ತಾ ಹೋಗೋಣ, ಕರ್ನಾಟಕ ದಲ್ಲಿ ಪೆಟ್ರೋಲ್ ಬೆಲೆ  90 ರೂ 75 ಪೈಸೆ, ಡೀಸೆಲ್ ಬೆಲೆ  82 ರೂ 72 ಪೈಸೆ, ರೂಪಾಯಿ ಇದೆ. ಕರ್ನಾಟಕ ರಾಜ್ಯದಲ್ಲಿ  ಪೆಟ್ರೋಲ್  ಮತ್ತು ಡೀಸೆಲ್ ಮೇಲಿನ ತೆರಿಗೆ ನೋಡುವುದಾದರೆ, ಪೆಟ್ರೋಲ್ ಮೇಲೆ 32 ರಿಂದ 35% ರಾಜ್ಯ ತೆರಿಗೆ ಹಾಕಲಾಗುತ್ತಿದೆ. ಡೀಸೆಲ್ ಮೇಲೆ 21 % ರಿಂದ 24 % ತೆರಿಗೆಯನ್ನು ಏರಿಕೆ ಮಾಡಲಾಗಿದೆ.

ಮಹಾರಾಷ್ಟ ದಲ್ಲಿ   ಪೆಟ್ರೋಲ್ ಬೆಲೆ  94 ರೂ 36 ಪೂಸೆ  ಡೀಸೆಲ್ ಬೆಲೆ 84 ರೂ 94 ಪೈಸೆ ಇದೆ. ಮಹಾರಾಷ್ಟ್ರ ರಾಜ್ಯದಲ್ಲಿ  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ನೋಡುವುದಾದರೆ ಪೆಟ್ರೋಲ್ ಮೇಲೆ 26% ಮತ್ತು ಡೀಸೆಲ್ ಮೇಲೆ 24% ತೆರಿಗೆಯಲ್ಲಿ  ಹೇರಲಾಗಿದೆ.  ಮಹಾರಾಷ್ರ ದೇಶದಲ್ಲಿ ಅತಿ ಹೆಚ್ಚು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆಗಿರುವ ರಾಜ್ಯವಾಗಿದೆ. ಮಧ್ಯ ಪ್ರದೇಶ್ ದಲ್ಲಿ  ಪೆಟ್ರೋಲ್ ಬೆಲೆ  95 ರೂ 82 ಪೈಸೆ ಇದೆ, ಡಿಸೈಲ್ ಬೆಲೆ 95.82 ರೂ ಇದೆ. ಮಧ್ಯ ಪ್ರದೇಶ್ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ನೋಡುವುದಾದರೆ ಪೆಟ್ರೋಲ್ ಮೇಲೆ  28 % ರಿಂದ 33% ವರೆಗೂ ಡೀಸೆಲ್ ಮೇಲೆ 18% ರಿಂದ 23% ಏರಿಸಲಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿರುವ ರಾಜ್ಯ ಇದಾಗಿದೆ.

ರಾಜಸ್ಥಾನ್ ದಲ್ಲಿ  ಪೆಟ್ರೋಲ್ ಬೆಲೆ 94 ರೂ 25 ಪೈಸೆ  ಡೀಸೆಲ್  86.27  ರೂಪಾಯಿ ಇದೆ. ರಾಜಸ್ಥಾನ್ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ನೋಡುವುದಾದರೆ ಪೆಟ್ರೋಲ್ ಮೇಲೆ  36% ಡೀಸೆಲ್ ಮೇಲೆ 26% ನಿಗದಿ ಮಾಡಲಾಗಿದೆ. ತೆಲಂಗಾಣದಲ್ಲಿ ಪೆಟ್ರೋಲ್ ಬೆಲೆ  91.34  ಡೀಸೆಲ್ ಬೆಲೆ  83.18 ರೂಪಾಯಿ.  ತೆಲಂಗಾಣ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ನೋಡುವುದಾದರೆ ಪೆಟ್ರೋಲ್ ಮೇಲೆ 35.20% ಡೀಸೆಲ್ ಮೇಲೆ 27% ತೆರಿಗೆ ವಹಿಸಲಾಗಿದೆ.

ಪೆಟ್ರೋಲ್ ದರ ಹೆಚ್ಚಳವೂ ನಮ್ಮ ನಿತ್ಯ ಬಳಕೆಯ ವಸ್ತುಗಳ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ವಾಣಿಜ್ಯೋಧ್ಯಮದ ಮೇಲೂ ಸಾಕಷ್ಟು ಪರಿಣಾಮ ಬೀರಲಿದೆ. ಸರಕು ಸಾಗಾಣಿಕೆ ವೆಚ್ಚ ಹೆಚ್ಚಾದಗ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ.  ಬಡವರು, ರೈತರು ಮತ್ತು ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ರೈತರು ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ  ಟ್ರ್ಯಾಕ್ಟರ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಡೀಸೆಲ್ ಬಳಕೆ ಹೆಚ್ಚಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಹೊಡೆತ ಬಿಳಲಿದೆ.

ಬಹುತೇಕರು ಟ್ಯಾಕ್ಸಿ, ಲಾರಿ, ಅಟೋ  ನಡಿಸಿಯೇ ಜೀವನ ಮಾಡುತ್ತಿದ್ದಾರೆ, ಪೆಡ್ರೋಲ್ ದರ ಹೆಚ್ಚಳದಿಂದ ಸಾಕಷ್ಟು ಸಂಕಷ್ಟವನ್ನು ಅವರು ಎದುರಿಸುವಂತಾಗಿದೆ. ಹೆಚ್ಚು ಬಾಡಿಗೆಯನ್ನು ಪಡೆಯಲಾಗಿದೆ, ಪೆಟ್ರೋಲ್, ಡಿಸಯಲ್ ಗೆ ಹಾಕದ ಹಣವನ್ನು ವಾಪಸ್ಸ ಪಡೆಯಲು ಪರದಾಡುವ ಸ್ತಿತಿ ಈಗ ನಿರ್ಮಾಣವಾಗಿದೆ.

ನಷ್ಟದಲ್ಲಿ ಮುಳುಗಿರುವ ಸಾರಿಗೆ ಸಂಸ್ಥೆಗಳ ಮೇಲೆ ಡೀಸೆಲ್‌ ದರ ಹೆಚ್ಚಳದ ಬರೆ ಬೀಳಲಿದೆ. ಕೆ.ಎಸ್.ಆರ್.ಟಿ.ಸಿ ಮತ್ತು  ಬಿಎಂಟಿಸಿ ಸಾರಿಗೆ ಸಂಸ್ಥೆಗಳು ತೈಲ ಕಂಪನಿಗಳಿಂದ ಸಗಟು ಡೀಸೆಲ್‌ ಖರೀದಿಸುತ್ತವೆ. 15 ದಿನಗಳಿಗೊಮ್ಮೆ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಈಗಾಗಲೆ ನಷ್ಟದಲ್ಲಿರುವ ಕಾರಣ ಹೆಚ್ಚುವರು ಹಣದ ಹೊರೆಯನ್ನು ಗ್ರಾಹಕರ ಮೇಲೆ ಹಾಕುವ ಸಾಧ್ಯತೆ ಇದೆ.

ಇನ್ನು ಮೊನ್ನೆ ಮಂಡಿಸಿರುವ ಕೇಂದ್ರ ಬಜೆಟ್ ನಲ್ಲಿ ಕೃಷಿಯ ಹೆಸರಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಒಂದು ಸೆಸ್ ಹಾಕಲಾಗಿದೆ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮತ್ತಷ್ಟು  ಏರುತ್ತವೆ. ಆದರೆ ಪ್ರಧಾನಿಗಳು  ಅಬಕಾರಿ ಸುಂಕವನ್ನು ಇಳಿಸಲಾಗುತ್ತದೆ ಎಂದು ಹೇಳುತ್ತಾರೆ, ಆದರೆ ಹೇಗೆ ಎಂಬುದನ್ನು ಅವರು ವಿವರಿಸುತ್ತಿಲ್ಲ. ಬಿಜೆಪಿ ತಾನು ವಿರೋಧ ಪಕ್ಷವಾಗಿದ್ದಾಗ ನಡೆಸುತ್ತಿದ್ದ ಹಾರಾಟ, ಚೀರಾಟಗಳನ್ನು ಜನ ಯಾರೂ ಮರೆತಿಲ್ಲ ಎಂಬುದನ್ನು ಬಿಜೆಪಿ ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಪೆಟ್ರೋಲ್ ಮತ್ತು ಡಿಸೈಲ್ ಮೇಲೆ ವಿಧಿಸಿರುವ ಅಬಕಾರಿ ಸುಂಕವನ್ನು ಕಡಿತ ಮಾಡುವುದರ ಜೊತೆಗೆ ಪೆಟ್ರೋಲ್, ಡಿಸೈಲ್ ದರಗಳನ್ನು ಕಡಿಮೆ ಮಾಡಿ ಜನರ ನೆಮ್ಮದಿಯನ್ನು ಕಾಪಾಡಲು ಮುಂದೆ ಬರಬೇಕಿದೆ.

Donate Janashakthi Media

Leave a Reply

Your email address will not be published. Required fields are marked *