ಹೆಚ್ಚುತ್ತಲೇ ಇದೆ ಪೆಟ್ರೋಲ್, ಡಿಸೇಲ್, ಗ್ಯಾಸ್ ದರ!

ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಭಾರತದಲ್ಲಿ ಕಳೆದ 14 ದಿನಗಳಲ್ಲಿ 11 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ. ನೋಯ್ಡಾ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಇಂಧನ ದರ 100 ಪ್ಲಸ್ ರೂ ದಾಟಿದೆ.

ಇಂದು (ಅ.7) ದಂದು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 34 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳಿಂದ ಇಂಧನ ದರ ಸರಾಸರಿ 25-30 ಪೈಸೆಯಂತೆ ಏರಿಕೆಯಾಗುತ್ತಿದೆ. ಕಳೆದ 10 ದಿನಗಳಲ್ಲಿ ಪೆಟ್ರೋಲ್ 1.85 ರುಪಾಯಿ, ಡೀಸೆಲ್ 2.95 ರುಪಾಯಿಯಷ್ಟು ಬೆಲೆ ಹೆಚ್ಚಳ ಕಂಡಿದೆ.

ಕಚ್ಚಾ ತೈಲ ಬೆಲೆ ಏರಿಕೆ : ಇದೇ ಮೊದಲ ಬಾರಿಗೆ ಜಗತ್ತಿನಲ್ಲಿ ಕಚ್ಚಾ ತೈಲದ ಬೆಲೆ ಏಳು ವರ್ಷಗಳ ಬಳಿಕ ಗರಿಷ್ಠಕ್ಕೆ ಏರಿಕೆಯಾಗಿದೆ. ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳ ಒಕ್ಕೂಟ ಒಪೆಕ್‌ ಕೊರೊನಾ ಶುರುವಾಗುವುದಕ್ಕಿಂತ ಹಿಂದಿನ ಸಂದರ್ಭದಲ್ಲಿ ಮಾಡಲಾಗುತ್ತಿದ್ದ ಉತ್ಪಾದನೆಯ ಪ್ರಮಾಣಕ್ಕೇ ವಾಪಸಾಗಲು ನಿರ್ಧರಿಸಿರು ವಂತೆಯೇ ಈ ಬೆಳವಣಿಗೆ ನಡೆದಿದೆ.

ಪ್ರತೀ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ ಶೇ.3 ಅಂದರೆ ಪ್ರತೀ ಬ್ಯಾರೆಲ್‌ಗೆ 2.32 ಡಾಲರ್‌ ಏರಿಕೆ ಯಾಗಿದೆ. ಹೀಗಾಗಿ ನ್ಯೂಯಾರ್ಕ್‌ ಮರ್ಕೆಂಟೈಲ್‌ ಎಕ್ಸ್‌ಚೇಂಜ್‌ನಲ್ಲಿ 78.17 ಡಾಲರ್‌ಗೆ ತಲುಪಿದೆ. 2014ರ ಬಳಿಕ ಇದು ಗರಿಷ್ಠ ಏರಿಕೆ. ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ.2.8ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 81.48 ಡಾಲರ್‌ ಆಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ: 

ಬಾಗಲಕೋಟೆ – 106.81ರೂ. (14 ಪೈಸೆ ಇಳಿಕೆ)
ಬೆಂಗಳೂರು – 106.52 ರೂ. (31 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -106.60ರೂ. (31 ಪೈಸೆ ಏರಿಕೆ)
ಬೆಳಗಾವಿ – 106.66 ರೂ. (00)
ಬಳ್ಳಾರಿ – 107.82 ರೂ. (29 ಪೈಸೆ ಇಳಿಕೆ )
ಬೀದರ್ – 107.75 ರೂ. (99 ಪೈಸೆ ಏರಿಕೆ)
ಬಿಜಾಪುರ – 106.44 ರೂ. (31 ಪೈಸೆ ಏರಿಕೆ)
ಚಾಮರಾಜನಗರ – 106.40 ರೂ. (21 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – 106.26 ರೂ. (16 ಪೈಸೆ ಏರಿಕೆ)
ಚಿಕ್ಕಮಗಳೂರು – 107.38ರೂ. (13 ಪೈಸೆ ಇಳಿಕೆ)
ಚಿತ್ರದುರ್ಗ – 108.85 ರೂ. (42 ಪೈಸೆ ಏರಿಕೆ)
ದಕ್ಷಿಣ ಕನ್ನಡ – 105.67 ರೂ. (31 ಪೈಸೆ ಏರಿಕೆ)
ದಾವಣಗೆರೆ – 108.16 ರೂ. (18 ಪೈಸೆ ಏರಿಕೆ)
ಧಾರವಾಡ – 106.56 ರೂ. (60 ಪೈಸೆ ಏರಿಕೆ)
ಗದಗ – 107.05 ರೂ. (13 ಪೈಸೆ ಏರಿಕೆ)
ಗುಲಬರ್ಗ – 106.98 ರೂ. (1.5 ರೂ. ಏರಿಕೆ)
ಹಾಸನ – 106.81 ರೂ. (60 ಪೈಸೆ ಏರಿಕೆ)
ಹಾವೇರಿ – 106.75 ರೂ. (38 ಪೈಸೆ ಇಳಿಕೆ)
ಕೊಡಗು – 107.93 ರೂ. (46 ಪೈಸೆ ಇಳಿಕೆ)
ಕೋಲಾರ – 106.39 ರೂ. (11 ಪೈಸೆ ಏರಿಕೆ)
ಕೊಪ್ಪಳ- 107.86 ರೂ. (40 ಪೈಸೆ ಏರಿಕೆ)
ಮಂಡ್ಯ – 106.78 ರೂ. (41 ಪೈಸೆ ಏರಿಕೆ)
ಮೈಸೂರು – 106.48 ರೂ. (47 ಪೈಸೆ ಏರಿಕೆ )
ರಾಯಚೂರು – 107.16 ರೂ. (31 ಪೈಸೆ ಏರಿಕೆ)
ರಾಮನಗರ – 106.85 ರೂ. (01 ಪೈಸೆ ಇಳಿಕೆ)
ಶಿವಮೊಗ್ಗ – 107.98 ರೂ. (16 ಪೈಸೆ ಏರಿಕೆ)
ತುಮಕೂರು – 107.21 ರೂ. (46 ಪೈಸೆ ಇಳಿಕೆ)
ಉಡುಪಿ – 105.95 ರೂ. (27 ಪೈಸೆ ಏರಿಕೆ)
ಉತ್ತರಕನ್ನಡ – 108.28 ರೂ . (08 ಪೈಸೆ ಏರಿಕೆ)
ಯಾದಗಿರಿ – 107.84 ರೂ. (81 ಪೈಸೆ ಏರಿಕೆ ).

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 97.32
ಬೆಂಗಳೂರು – 97.03
ಬೆಂಗಳೂರು ಗ್ರಾಮಾಂತರ : 97.10
ಬೆಳಗಾವಿ – 97.18
ಬಳ್ಳಾರಿ – 98.24
ಬೀದರ್ -98.18
ಬಿಜಾಪುರ – 96.98
ಚಾಮರಾಜನಗರ – 96.92
ಚಿಕ್ಕಬಳ್ಳಾಪುರ – 96.79
ಚಿಕ್ಕಮಗಳೂರು – 97.70
ಚಿತ್ರದುರ್ಗ – 99.04
ದಕ್ಷಿಣ ಕನ್ನಡ – 96.22
ದಾವಣಗೆರೆ -98.41
ಧಾರವಾಡ – 97.09
ಗದಗ – 97.54
ಗುಲಬರ್ಗ – 97.47
ಹಾಸನ – 97.18
ಹಾವೇರಿ – 97.26
ಕೊಡಗು – 98.19
ಕೋಲಾರ – 96.91
ಕೊಪ್ಪಳ- 98.28
ಮಂಡ್ಯ – 97.26
ಮೈಸೂರು -96.99
ರಾಯಚೂರು – 97.28
ರಾಮನಗರ – 97.33
ಶಿವಮೊಗ್ಗ – 98.28
ತುಮಕೂರು -97.66
ಉಡುಪಿ – 96.47
ಉತ್ತರಕನ್ನಡ – 98.43
ಯಾದಗಿರಿ – 98.60

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೆ ಭಾರತದಲ್ಲಿ 100 ರೂ ಆಗಿತ್ತು. ಈಗ ಕಚ್ಚಾಬೆಲೆ ಹೆಚ್ಚಾಗಿದ್ದು ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಬಹುದು ಇದೆಲ್ಲ ಅಚ್ಚೇದಿನ್ ಎಂದು ಖುಷಿಪಡಬೇಕು ಎಂದು ಸಾರ್ವಜನಿಕರು ಟೀಕೆ ಮಾಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *