ಚೆನ್ನೈ: ರಾಜಭವನದ ಮೇಲಿನ ಪೆಟ್ರೋಲ್ ಬಾಂಬ್ ದಾಳಿಗೆ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳೇ ಕಾರಣ ಎಂದು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಆರೋಪಿಸಿದ ದಿನದ ನಂತರ, ಡಿಎಂಕೆ ತಿರುಗೇಟು ನೀಡಿದ್ದು, ದಾಳಿಯ ಆರೋಪಿ ಕರುಕ್ಕ ವಿನೋದ್ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಿದೆ.
ವಿನೋದ್ ಅವರನ್ನು ಪ್ರತಿನಿಧಿಸಿ ಜಾಮೀನು ಪಡೆಯಲು ಸಹಾಯ ಮಾಡಿದ ವಕೀಲರು ಬಿಜೆಪಿಯ ಕಾನೂನು ವಿಭಾಗದ ಭಾಗವಾಗಿದ್ದರು ಎಂದು ತಮಿಳುನಾಡು ಕಾನೂನು ಸಚಿವ ರಘುಪತಿ ಆರೋಪಿಸಿದ್ದಾರೆ. ಆದರೆ ಬಿಜೆಪಿ ಈ ಆರೋಪವನ್ನು ಆರೋಪಿ ಪರ ವಕೀಲ ಅಲ್ಲಗೆಳೆದಿದ್ದಾರೆ. ಪೆಟ್ರೋಲ್ ಬಾಂಬ್
ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ | ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಕತಾರ್‌ನಲ್ಲಿ ಮರಣದಂಡನೆ
ಕರುಕ್ಕ ವಿನೋದ್ ಅವರ ವಕೀಲ ಮುತಮಿಜ್ ಸೆಲ್ವಕುಮಾರ್ ಅವರು ಬಿಜೆಪಿಯ ತಿರುವರೂರು ಜಿಲ್ಲಾ ಕಾನೂನು ವಿಭಾಗದ ಭಾಗವಾಗಿದ್ದರು. ರಾಜಭವನದ ಮೇಲಿನ ದಾಳಿಯ ಹಿಂದೆ ಅವರ ಪಕ್ಷದ ಕೈವಾಡವಿದೆ ಎಂದು ಡಿಎಂಕೆ ಸಚಿವ ರಘುಪತಿ ಆರೋಪಿಸಿದ್ದಾರೆ.
ಆರೋಪಿ ಪರ ವಕೀಲ ಮುತಮಿಜ್ ಸೆಲ್ವಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಾನು ಬಿಜೆಪಿಯ ಭಾಗವಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ 2023ರ ಜುಲೈನಲ್ಲಿ ಜಾಮೀನು ಪಡೆಯಲಾಗಿರುವ ಪ್ರಕರಣದಲ್ಲಿ ಆರೋಪಿ ವಿನೋದ್ ಅವರಿಗೆ ತಾನೆ ವಕೀಲ ಎಂದು ಅವರು ಒಪ್ಪಿಕೊಂಡಿದ್ದಾರೆ.
“ಅವರು ಸುದೀರ್ಘ ಸೆರೆವಾಸದಲ್ಲಿದ್ದಾರೆ ಎಂದು ಅವರು ನನ್ನ ಜೂನಿಯರ್ ಅನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ನಾವು ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದೆವು. ಆದರೆ ಪುನರಾವರ್ತಿತ ಮನವಿಯ ನಂತರ ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ” ಎಂದು ಮುತಮಿಜ್ ಸೆಲ್ವಕುಮಾರ್ ಹೇಳಿದ್ದಾರೆ.
ತಾನು ಬಿಜೆಪಿಯ ಸದಸ್ಯನಲ್ಲ ಎಂದು ಹೇಳಿರುವ ಅವರು, ಬಿಜೆಪಿಯ ಲೆಟರ್‌ಹೆಡ್‌ನಲ್ಲಿ ತನಗೆ ಗೊತ್ತಿಲ್ಲದೆ ತನ್ನ ಹೆಸರನ್ನು ಮುದ್ರಿಸಲಾಗಿದೆ ಎಂದು ಸೆಲ್ವಕುಮಾರ್ ಹೇಳಿದ್ದಾರೆ. 2020 ರಲ್ಲಿ ಬಿಜೆಪಿ ತಿರುವರೂರ್ ಘಟಕದ ಲೆಟರ್‌ಹೆಡ್‌ನಲ್ಲಿ ಮುತಮಿಜ್ ಸೆಲ್ವಕುಮಾರ್ ಅವರನ್ನು ಕಾನೂನು ವಿಭಾಗದ ಮುಖ್ಯಸ್ಥರನ್ನಾಗಿ ಹೆಸರಿಸಲಾಯಿತು.
ಇದನ್ನೂ ಓದಿ: ರಾಜಸ್ಥಾನ | ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ಸಿಂಗ್ ದೋಸ್ತಾರಾ ಮನೆಗಳ ಮೇಲೆ ಇ.ಡಿ. ದಾಳಿ
“ನಾನು ಬಿಜೆಪಿಯ ಭಾಗವಲ್ಲ, ನಾನು ಪಕ್ಷದೊಂದಿ ಇಲ್ಲ. 2020 ರಲ್ಲಿ ನನ್ನ ಹೆಸರಿನ ನೇಮಕಾತಿ ಪತ್ರವನ್ನು ಮುದ್ರಿಸಲಾಗಿದೆ. ನಾನು ಸ್ಥಳೀಯ ವಕೀಲನಾಗಿದ್ದು, ಬಿಜೆಪಿ ಸೇರಿದ್ದೇನೆ ಎಂದು ಪದಾಧಿಕಾರಿಗಳು ಹೇಳಿದರು. ಆದರೆ ನನಗೆ ಯಾವುದೇ ಪಕ್ಷದ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದು ನಾನು ಹೇಳಿದ ನಂತರ ನನ್ನನ್ನು ಪಟ್ಟಿಯಿಂದ ತೆಗೆದು ಹಾಕಿದರು” ಎಂದು ಸೆಲ್ವಕುಮಾರ್ ಹೇಳಿದ್ದಾರೆ. ಪೆಟ್ರೋಲ್ ಬಾಂಬ್
ಕಾನೂನು ಸಚಿವ ರಘುಪತಿ ಅವರು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ,”ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ವಕೀಲರಿಂದ ವಿನೋದ್ ಅವರನ್ನು ಜಾಮೀನು ಪಡೆದಿದ್ದಾರೆ ಎಂಬ ಮಾಹಿತಿ ತನಗೆ ಬಂದಿದೆ. ಇದು ಅನುಮಾನಾಸ್ಪದವಾಗಿದ್ದು, ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
2022 ರಲ್ಲಿ ಬಿಜೆಪಿ ಪ್ರಧಾನ ಕಚೇರಿಯಾದ ಕಮಲಾಲಯದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ವಿನೋದ್ ಅವರ ಬಿಡುಗಡೆಗೆ ವಕೀಲ ಸೆಲ್ವಕುಮಾರ್ ಇತ್ತೀಚೆಗೆ ಸಹಾಯ ಮಾಡಿದ್ದರು. ಆರೋಪಿ ವಿನೋದ್ ಮತ್ತು ವಕೀಲರ ನಡುವಿನ “ಲಿಂಕ್” ಚೆನ್ನೈನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವ ಬಿಜೆಪಿಯ ಪ್ರಯತ್ನವನ್ನು ಬಹಿರಂಗಪಡಿಸಿದೆ ಎಂದು ಡಿಎಂಕೆ ಆರೋಪಿಸಿದೆ.
ತನ್ನನ್ನು ಜೈಲಿನಿಂದ ಅಕಾಲಿಕ ಬಿಡುಗಡೆಗೆ ನಿರಾಕರಿಸಿದ್ದರಿಂದ ಚೆನ್ನೈನಲ್ಲಿರುವ ಗವರ್ನರ್ ಆರ್‌ಎನ್ ರವಿ ಅವರ ನಿವಾಸದ ಮೇಲೆ ಬಾಂಬ್ ಎಸೆದಿರುವುದಾಗಿ ವಿನೋದ್ ಹೇಳಿಕೊಂಡಿದ್ದನು. ವಿನೋದ್‌ನನ್ನು ಬಂಧಿಸಿದ್ದ ಪೊಲೀಸರು ಆತನಿಂದ ಇನ್ನೂ ಎರಡು ಪೆಟ್ರೋಲ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪೆಟ್ರೋಲ್ ಬಾಂಬ್
ವಿಡಿಯೊ ನೋಡಿ: ರಸ್ತೆ ಸಾರಿಗೆ ಕಾರ್ಮಿಕರನ್ನು ಶೋಷಿಸುವ ಮೋಟಾರು ತಿದ್ದುಪಡಿ ಕಾಯ್ದೆ ವಾಪಸ್ಸಾಗಲಿ