ಮುಡಾ ಹಗರಣ; ರಿಟ್ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 12ಕ್ಕೆ ಮುಂದೂಡಿಕೆ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ವಿರುದ್ಧ  ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಇಂದು ನಡೆಯತು. ಎರಡೂ ಕಡೆಯ ವಕೀಲರು ಇಂದು ತಮ್ಮ ವಾದ ಮಂಡಿದ್ದು, ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದ್ದಾರೆ.

ಸೆಪ್ಟೆಂಬರ್ 12ಕ್ಕೆ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘಿ ತಮ್ಮ ವಾದ ಮಂಡನೆ ಮಾಡಲಿದ್ದಾರೆ. ಇದು ಬಹುತೇಕ ಕೊನೇ ಹಂತದ ವಾದವಾಗಿದ್ದು, ಇದರ ನಂತರದಲ್ಲಿ ನ್ಯಾಯಾಧೀಶರು ಆದೇಶ ಹೊರಡಿಸುವ ಸಾಧ್ಯತೆ ಇದೆ. ಹೀಗಾಗಿ ಸಪ್ಟೆಂಬರ್ 12ರಂದು ನಡೆಯುವ ವಿಚಾರಣೆ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್‌ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಇದನ್ನು ಓದಿ : ಮಹದಾಯಿ ಯೋಜನೆ ಬಗ್ಗೆ ಸಮಜಾಯಿಷಿ | ರೈತರು ತಿರುಗೇಟು! ಪೇಚಿಗೆ ಸಿಲುಕಿದ ಕೇಂದ್ರ ಸಚಿವ!!

ಸರ್ಕಾರದ ಪರವಾಗಿ ಅಡೋಕೆಟ್ ಜನರಲ್ ಶಶಿಕಿರಣ್ ಶೆಟ್ಟಿ, ರವಿ ವರ್ಮಕುಮಾರ್ ವಾದ ಮಂಡನೆ ಮಾಡಿದರು.. ಸ್ನೇಹಮಯಿ ಕೃಷ್ಣ ಪರ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು.. ಸಿದ್ದರಾಮಯ್ಯ ಅವರು 1996-1999ರಲ್ಲಿ ಡಿಸಿಎಂ ಆಗಿದ್ದರು. ಈ ವೇಳೆಯಲ್ಲೇ ಡಿನೋಟಿಫಿಕೇಷನ್‌ ಮಾಡಲಾಗಿದೆ.. 2004-2007ರಲ್ಲಿ ಭೂಪರಿವರ್ತನೆ ಮಾಡಿದ್ದು, 2013- 2018ವರೆಗೆ ಸಿದ್ಧರಾಮಯ್ಯ ಅವರು ಸಿಎಂ ಆಗಿದ್ದಾಗ ಪರಿಹಾರದ ಸೈಟ್ ಗಳಿಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಲಕ್ಷ್ಮೀ ಅಯ್ಯಂಗಾರ್ ವಾದಿಸಿದರು.

ಸಿಎಂ ಪರವಾಗಿ ವಾದಿಸಿದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸುಪ್ರೀಂಕೋರ್ಟ್ ಯಾವ ಕೇಸ್‌ನಲ್ಲಿ ಪ್ರಾಥಮಿಕ ತನಿಖೆ ಆಗಬೇಕು ಎಂದು ಹೇಳಿದೆ.. ಮುಡಾ ಕೇಸ್ 22 ವರ್ಷಕ್ಕಿಂತ ಹಳೆಯದಾದ್ದರಿಂದ ಪ್ರಾಥಮಿಕ ತನಿಖೆ ಬೇಕು.17ಎ ಅಡಿಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ ಎಂದು ವಾದ ಮಂಡಿಸಿದರು.

ಇದನ್ನು ನೋಡಿ : ರಾಜ್ಯಗಳಿಗೆ ಆರ್ಥಿಕ ಕೊರತೆಯುಂಟು ಮಾಡುವ ತೆರಿಗೆ ವ್ಯವಸ್ಥೆ ಮತ್ತು 16ನೆ ಹಣಕಾಸು ಆಯೋಗ : ಮುಂದೇನು? Janashakthi

Donate Janashakthi Media

Leave a Reply

Your email address will not be published. Required fields are marked *