ವ್ಯಾಪಿಸುತ್ತಿರುವ ಬರದ ಭೀತಿ

ನಿತ್ಯಾನಂದಸ್ವಾಮಿ

ಬರ ಘೋಷಣೆ ಮಾಡಲು ಕೆಂದ್ರ ಸರ್ಕಾರದ ಮಾನದಂಡವನ್ನು ಅನುಸರಿಸಬೇಕಾಗುತ್ತದೆ, ಆದರೆ, ಈ ಪ್ರಕ್ರಿಯೆಯಲ್ಲಿ ಪಕ್ಷ ರಾಜಕೀಯ ಪ್ರವೇಶಿಸಬಾರದು.ಮಳೆಯ ಕೊರತೆ, ಒಣ ಹವೆ, ಬಿತ್ತನೆ ಪ್ರದೇಶ, ತೇವಾಂಶ ಕೊರತೆ, ಬೆಳೆಗಳ ಸ್ಥಿತಿ, ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟವನ್ನು ಪರಿಶೀಲಿಸಿ ಬರ ಘೋಷಿಸಲಾಗುತ್ತದೆ.ಪ್ರತಿಯೊಂದು ಬರಪೀಡಿತ ತಾಲೂಕಿನ ಪ್ರತಿ 10 ಹಳ್ಳಿಗಳಲ್ಲಿ 5 ಪ್ರಮುಖ ಬೆಳೆಗಳ ಪರಿಸ್ಥಿತಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ 10 ದಿನಗಳ ಒಳಗೆ ವರದಿಯನ್ನು ನೀಡಲಾಗುತ್ತದೆ. ಬರ

ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಿದೆ. ಶೇ.50ಕ್ಕಿಂತ ಹೆಚ್ಚು ಪ್ರದೇಶಗಳು ಮಳೆ ಕೊರತೆಯನ್ನು ಎದುರಿಸುತ್ತಿದೆ.ಮುಂದಿನ ದಿನಗಳಲ್ಲಿಯೂ ಮಳೆಯ ಸೂಚನೆ ಕಾಣುತ್ತಿಲ್ಲ. ಜೂನ್ ತಿಂಗಳಲ್ಲಿ ಮಳೆಯ ತೀವ್ರ ಕೊರತೆಯಾಯಿತು.ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಯಿತು.ಆಗಸ್ಟ್‌ನಲ್ಲಿ ಮತ್ತೆ ತೀವ್ರ ಮಳೆ ಕೊರತೆ ಎದುರಾಗಿದೆ.ಸೆಪ್ಟೆಂಬರ್‌ನಲ್ಲಿ ಮಳೆಯಾಗುವ ಮುನ್ಸೂಚನೆಗಳಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯವು ಭೀಕರ ಬರವನ್ನು ಎದುರಿಸುವ ಆತಂಕಕ್ಕೆ ರಾಜ್ಯದ ಜನ, ಜಾನುವಾರು ಒಳಗಾಗುವಂತಾಗುವುದು.

ಕೆಲವು ಬೆಳೆಗಳು ತೇವಾಂಶ ಕೊರತೆ ಅನುಭವಿಸುತ್ತಿವೆ. ಮಳೆ ಕೊರತೆ ಹೀಗೇ ಮುಂದುವರಿದರೆ ಬೆಳೆಗಳು ಸಂಪೂರ್ಣ ಒಣಗುವ ಅಪಾಯವಿದೆ.120 ತಾಲ್ಲೂಕುಗಳಿಗೆ ಬರದ ಛಾಯೆ ವ್ಯಾಪಿಸತೊಡಗಿದೆ.ಮುಂದೆ ಕುಡಿಯುವ ನೀರಿಗೂ ಕೊರತೆ ಉಂಟಾದರೆ ಆಶ್ಚರ್ಯವಿಲ್ಲ. ಇಷ್ಟರಲ್ಲೇ 114 ಗ್ರಾಮಗಳಿಗೆ ಖಾಸಗಿ ಕೊಳವೆ ಭಾವಿಗಳಿಂದ, 25 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.ಕೆಲವು ತಾಲ್ಲೂಕುಗಳಲ್ಲಿ 15 ವಾರಗಳಿಗೆ ಮತ್ತು ಇನ್ನು ಕೆಲವು ತಾಲ್ಲೂಕುಗಳಲ್ಲಿ ಕೇವಲ 30 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ.ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಸರ್ಕಾರ ಇಲಾಖೆಯ ಮೂಲಕ ಮೇವಿನ ಬೀಜ ಒದಗಿಸಿ ಮೇವು ಬೆಳೆಸಲು ಕ್ರಮ ಕೈಗೊಳ್ಳಬೇಕು.ಮಳೆ ಕೊರತೆ ಮುಂದಿನ ದಿನಗಳಲ್ಲಿ ಮುಂದುವರೆಯುವ ಸಾಧ್ಯತೆಗಳಿರುವಾಗ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಸನ್ನದ್ಧವಾಗಬೇಕು.

ಈಗಾಗಲೇ, ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ಸರ್ಕಾರ ಸಂಪುಟ ಉಪಸಮಿತಿಯೊಂದನ್ನು ರಚಿಸಿದೆ. “ನಾವು ಎಲ್ಲದಕ್ಕೂ ಸಿದ್ದರಿದ್ದೇವೆ” ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಬರ

“ಇಂಡಿಯಾದ ಕೃಷಿ ಮಳೆಯೊಂದಿಗಿನ ಜೂಜಾಟ” ಎನ್ನಲಾಗುತ್ತದೆ.ಒಂದು ವರ್ಷ ಅತಿವೃಷ್ಟಿಯಾದರೆ, ಮತ್ತೊಂದು ವರ್ಷ ಅನಾವೃಷ್ಟಿಯಾಗಿ ಅದು ಕಾಡುತ್ತಿರುತ್ತದೆ.ಆದ್ದರಿಂದ ಮಳೆಯನ್ನೇ ಅವಲಂಭಿಸಿರುವ ರೈತರ ಪರಿಸ್ಥಿತಿ ಅತ್ಯಂತ ಅನಿಶ್ಚಿತವಾಗಿರುತ್ತದೆ.ಕಳೆದ ವರ್ಷದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮುಂಗಾರು ಮಳೆ ಆಗಿದ್ದರಿಂದ ಫಸಲು ಸಮೃದ್ಧವಾಗಿತ್ತು.ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಬಿತ್ತನೆ ಕಾರ್ಯ ಚುರುಕುಗೊಂಡಿತ್ತು.ಆದರೆ ನಂತರ ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ, ಬೆಳೆದು ನಿಂತ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ತೊಗರಿ, ಹತ್ತಿ, ರಾಗಿ ಮುಂತಾದ ಬೆಳೆಗಳು ಒಣಗತೊಡಗಿವೆ. ಶೇ.70ರಷ್ಟು ಪೈರು ನಾಶವಾಗಿದೆ.ಮಳೆ ಆಶ್ರಿತ ಭೂಮಿಯಲ್ಲಿ ರೈತರು ಸಾಲ ಸೋಲ ಮಾಡಿ ಬಿತ್ತನೆ ಮಾಡಿದ ಬೆಳೆ ಸರ್ವನಾಶವಾಗಿದೆ.ಇದರ ಪರಿಣಾಮವೇ ರೈತರ ಕರುಣಾಜನಕ ಆತ್ಮಹತ್ಯೆಗಳು.

ರಾಜ್ಯದ 14 ಪ್ರಮುಖ ಜಲಾಶಯಗಳ ನೀರಿನ ಸಂಗ್ರಹಣಾ ಸಾಮರ್ಥ್ಯ 896 ಟಿಎಂಸಿ. ಪ್ರಸ್ತುತ ಅವಧಿಯಲ್ಲಿ 618 ಟಿಎಂಸಿ ನೀರು ಮಾತ್ರ ಸಂಗ್ರವಾಗಿದೆ.ಇದು ಒಟ್ಟು ಸಂಗ್ರಹಣೆಯ ಶೇ.69 ರಷ್ಟಾಗುತ್ತದೆ.ಕಳೆದ ವರ್ಷ ಇದೇ ಅವಧಿಯಲ್ಲಿ 796 ಟಿಎಂಸಿ ನೀರು ಸಂಗ್ರಹವಾಗಿತ್ತು.ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಒಟ್ಟು 114 ಟಿಎಂಸಿ ಸಂಗ್ರಹಣಾ ಸಾಮರ್ಥ್ಯ ಇದ್ದು, ಇಲ್ಲಿಯವರೆಗೆ ಕೇವಲ 80 ಟಿಎಂಸಿ ಮಾತ್ರ ಸಂಗ್ರಹವಾಗಿದೆ.ಕೃಷ್ಣ ಜಲಾಯನ ಪ್ರದೇಶದಲ್ಲಿ 6 ಜಲಾಶಯಗಳಿದ್ದು ಅವುಗಳ ಒಟ್ಟು ಸಾಮರ್ಥ್ಯ 422 ಟಿಎಂಸಿಗಳಾಗಿದ್ದು, ಇಲ್ಲಿಯವರೆಗೆ 348 ಟಿಎಂಸಿ ನೀರು ಸಂಗ್ರಹವಾಗಿದೆ.ರಾಜ್ಯದ ವಿದ್ಯುತ್ ಉತ್ಪಾದನಾ ಜಲಾಶಯಗಳಾದ ಲಿಂಗನಮಕ್ಕಿ, ಸೂಪ ಮತ್ತು ವರಾಹಿ ಜಲಾಶಯಗಳ ಒಟ್ಟು ಸಾಮರ್ಥ್ಯ 328 ಟಿಎಂಸಿ ಆಗಿದ್ದು ಇಲ್ಲಿಯವರೆಗೆ ಕೇವಲ 165 ಟಿಎಂಸಿ ನೀರು ಶೇಖರಣೆಯಾಗಿದೆ.

ಈ ಅಂಕಿಅಂಶಗಳು ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯನ್ನು ಸೂಚಿಸುತ್ತದೆ.ರಾಜ್ಯದ ಜಲಾಶಯಗಳ ಒಳಹರಿವು ತೀರಾ ಕಡಿಮೆ ಇದೆ. ನೀರಿನ ಸಂಕಷ್ಟ ಉಂಟಾಗಿದೆ.ಈ ಸಂಕಷ್ಟವನ್ನು ಪರಸ್ಪರ ಸಹಕಾರ ಮನೋಭಾವದಿಂದ ಇತ್ಯರ್ಥ್ಯಗೊಳಿಸಬೇಕಾಗಿದೆ.ನೆರೆಹೊರೆಯ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಘರ್ಷ ಬೇಕಾಗಿಲ್ಲ. ಪರಸ್ಪರ ಚರ್ಚೆಯ ಮೂಲಕ ವಿವಾದವನ್ನು ಇತ್ಯರ್ಥ್ಯಪಡಿಸಿಕೊಳ್ಳಬೇಕು. ಅಗತ್ಯಬಿದ್ದರೆ ನ್ಯಾಯಾಲಯದ ಮಧ್ಯಪ್ರವೇಶದ ಅವಕಾಶ ಕಲ್ಪಿಸಬೇಕು.ಯಾವ ಕಾರಣಕ್ಕೂ ಹಿಂಸಾಚಾರಕ್ಕೆ ಅವಕಾಶ ನೀಡಬಾರದು.ಚುನಾವಣಾ ಲಾಭಕ್ಕಾಗಿ ಸಮಸ್ಯೆಯನ್ನು ಜೀವಂತವಾಗಿ ಇಡುವ ಕ್ಷುಲ್ಲಕ ರಾಜಕೀಯಕ್ಕೆ ಎರಡೂ ಕಡೆಯವರು ಅವಕಾಶ ನೀಡಬಾರದು.

ಇದನ್ನೂ ಓದಿ:ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿ :ಮಾಜಿ ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಬರ ಘೋಷಣೆ ತುರ್ತಾಗಿ ಆಗಬೇಕಾಗಿದೆ. ಬರ ಘೋಷಣೆ ಮಾಡಲು ಕೆಂದ್ರ ಸರ್ಕಾರದ ಮಾನದಂಡವನ್ನು ಅನುಸರಿಸಬೇಕಾಗುತ್ತದೆ, ಆದರೆ, ಈ ಪ್ರಕ್ರಿಯೆಯಲ್ಲಿ ಪಕ್ಷ ರಾಜಕೀಯ ಪ್ರವೇಶಿಸಬಾರದು.ಮಳೆಯ ಕೊರತೆ, ಒಣ ಹವೆ, ಬಿತ್ತನೆ ಪ್ರದೇಶ, ತೇವಾಂಶ ಕೊರತೆ, ಬೆಳೆಗಳ ಸ್ಥಿತಿ, ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟವನ್ನು ಪರಿಶೀಲಿಸಿ ಬರ ಘೋಷಿಸಲಾಗುತ್ತದೆ.ಪ್ರತಿಯೊಂದು ಬರಪೀಡಿತ ತಾಲೂಕಿನ ಪ್ರತಿ 10 ಹಳ್ಳಿಗಳಲ್ಲಿ 5 ಪ್ರಮುಖ ಬೆಳೆಗಳ ಪರಿಸ್ಥಿತಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ 10 ದಿನಗಳ ಒಳಗೆ ವರದಿಯನ್ನು ನೀಡಲಾಗುತ್ತದೆ.ಸಮಿತಿಯು ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ನೀಡುತ್ತದೆ.ಬರಪೀಡಿತ ಪ್ರದೇಶ ಎಂದು ಗುರುತಿಸಿದ ನಂತರ ಬೆಳೆ ಹಾನಿ ಪ್ರಮಾಣದ ಆಧಾರದಲ್ಲಿ ಬರ ವರ್ಗೀಕರಣ ಮಾಡಲಾಗುತ್ತದೆ. ಹಾನಿಯು ಶೇ. 50ಕ್ಕೂ ಹೆಚ್ಚು ಇದ್ದರೆ, ಬರಪೀಡಿತ ಪ್ರದೇಶವೆಂದು ಕೇಂದ್ರಕ್ಕೆ ವರದಿ ನೀಡಲಾಗುತ್ತದೆ.

ಕರ್ನಾಟಕದ ರೈತರು ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸುತ್ತಿರುವುದು ಸಹಜವೇ ಆಗಿದೆ.ಆದರೆ, ಒಟ್ಟು ರೈತರ ಹಿತವನ್ನು ಕಡೆಗಣಿಸಲಾಗದು.ಮಳೆಯ ಕೊರತೆಯಿಂದ ಈ ಸಂಕಷ್ಟದ ಪರಿಸ್ಥಿತಿ ಬಂದಿದ್ದು, ಇದರಲ್ಲಿ ಕನ್ನಡಿಗರಾಗಲಿ, ತಮಿಳರೇ ಆಗಲಿ ಹೊಣೆಗಾರರಲ್ಲ. ರಾಜ್ಯದಲ್ಲಿ ಬಿಜೆಪಿಯವರು ಅನವಶ್ಯಕವಾಗಿ ಕರ್ನಾಟಕದಲ್ಲಿ ಅಶಾಂತಿ ಉಂಟುಮಾಡಿ, ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ.ರೈತರ ಹಿತ ಕಾಪಾಡುವ ಹೆಸರಿನಲ್ಲಿ ಕನ್ನಡಿಗರಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಾರೆ.ನಾವು ಇಂತಹ ಚಿತಾವಣೆಗೆ ಪ್ರಚೋದಿತರಾಗಬಾರದು.ಮಳೆ ಅಭಾವದಿಂದ ಉಂಟಾಗುವ ಬರ ಪರಿಸ್ಥಿತಿಯನ್ನು ಎರಡೂ ರಾಜ್ಯಗಳ ಜನ ಮತ್ತು ರೈತರು ಪರಿಹರಿಸಿಕೊಳ್ಳಲು ಮುಂದಾಗಬೇಕು.ತಮಿಳುನಾಡಿಗೆ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಹರಿಸುವುದು ನಮ್ಮ ಸೋಲು ಎಂದು ಮಾತ್ರ ನಾವು ಭಾವಿಸಬಾರದು. ನದಿಗಳ ಒಂದು ರಾಜ್ಯದಲ್ಲಿ ಹುಟ್ಟಿ, ಇನ್ನೊಂದು ರಾಜ್ಯದಲ್ಲಿ ಹರಿದು ಮಗದೊಂದು ರಾಜ್ಯದಲ್ಲಿ ಸಮುದ್ರ ಸೇರುತ್ತವೆ. ಎಲ್ಲಾ ನದಿಗಳ ನೀರು ನಮಗೆಲ್ಲರಿಗೆ ಸೇರಿದ್ದು. ಬರ

ಕೆಲವರು ತಮಿಳುನಾಡಿಗೆ ನೀರನ್ನು ಬಿಡುವುದನ್ನೇ ವಿರೋಧಿಸುತ್ತಾರೆ.ತಮಿಳುನಾಡಿಗೆ ನೀರನ್ನು ಹರಿಸುವುದು ಕನ್ನಡಕ್ಕೆ ದ್ರೋಹ ಎಂದು ವಾದಿಸುತ್ತಾರೆ. ಇಂತಹ ಪ್ರಚೋದನೆಯಿಂದ ರಸ್ತೆಗಳಲ್ಲಿ ಅಮಾಯಕರ ರಕ್ತ ಹರಿಯುವಂತಾಗುತ್ತದೆ.ಬಿಜೆಪಿಗರಿಗೆ ಈಗ ಕೆಲಸ ಇಲ್ಲ. ದ್ವೇಷ ಹರಡಲು ಸಾಕಷ್ಟು ಸಮಯ ಇದೆ.ಬರ ಪದೇ ಪದೇ ಪುನರಾವರ್ತನೆಯಾಗುವ ವಿದ್ಯಮಾನ. ಸರ್ಕಾರಗಳು ಬರವನ್ನು ಎದುರಿಸಲು ಯಾವಾಗಲೂ ಸಜ್ಜಾಗಿಯೇ ಇರಬೇಕು.ಕೋರ್ಟ್ ನಿರ್ಧಾರಕ್ಕೂ ಆದ್ಯತೆ ನೀಡಬೇಕು.ಬರ ಎಂಬುದಾಗಲೀ, ಪ್ರವಾಹ ಎಂಬುದಾಗಲೀ ಇವು ನೈಸರ್ಗಿಕ ವಿಕೋಪಗಳು.ಇವು ಮನುಷ್ಯನ ತಪ್ಪಿನಿಂದ ಜರುಗುವುದಿಲ್ಲ. ಅವು ಸಂಭವಿಸಿದಾಗ ಸೂಕ್ತ ಹಾಗೂ ತರ್ತುಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಗಳು ಮುಂದಾಗಬೇಕು.ಕ್ಷುಲ್ಲಕ ರಾಜಕೀಯಕ್ಕೆ ಮಧ್ಯಪ್ರವೇಶ ಮಾಡಲು ಬಿಡಬಾರದು. ಬರ

Donate Janashakthi Media

Leave a Reply

Your email address will not be published. Required fields are marked *