ಬಂಗಾಳಿಗಳಿಗೆ ಕಿರುಕುಳಗಳು ಕೊನೆಗೊಳ್ಳಬೇಕು

ಬಂಗಾಳಿಯನ್ನು ವಿದೇಶಿ ಭಾಷೆ ಎಂದಿರುವುದಕ್ಕೆ ಕ್ಷಮೆ ಯಾಚಿಸಬೇಕು
ನವದೆಹಲಿ: ದಿಲ್ಲಿ ಪೊಲೀಸರು ಹೊರಡಿಸಿದ ಪತ್ರದಲ್ಲಿ ಬಂಗಾಳಿ ಭಾಷೆಯನ್ನು ‘ಬಾಂಗ್ಲಾದೇಶಿ ಭಾಷೆ’ ಎಂದು ತಪ್ಪಾಗಿ ಗುರುತಿಸಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಕಿರುಕುಳ

ಹಲವಾರು ಬಂಗಾಳಿ ಭಾಷಿಕರನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರೆಂದು ಶಂಕಿಸಿ ಬಂಧಿಸುತ್ತಿರುವ ದಿಲ್ಲಿ ಪೊಲೀಸರೊಳಗಿನ ಕಳವಳಕಾರಿ ಮನೋಭಾವವನ್ನು ಇದು ಬಿಂಬಿಸುತ್ತದೆ. ಬಂಗಾಳಿ ಎಂಬುದು ತನ್ನದೇ ವಿಶಿಷ್ಟ ಲಿಪಿಯನ್ನು ಹೊಂದಿರುವ ಒಂದೇ ಒಂದು ಭಾಷೆ ಎಂಬ ತಥ್ಯದ ಬಗ್ಗೆ ಅವರ ಅಜ್ಞಾನವನ್ನೂ ಇದು ತೋರಿಸುತ್ತದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಸಂವಿಧಾನದ ಎಂಟನೇ ಶೆಡ್ಯೂಲಿನಲ್ಲಿ ಭಾರತದ ರಾಷ್ಟ್ರೀಯ ಭಾಷೆಗಳು ಒಂದು ಎಂದು ಮಾನ್ಯತೆ ಪಡೆದಿರುವ  ಭಾಷೆಗಳಲ್ಲಿ ಬಂಗಾಳಿಯೂ ಒಂದು. ಇದಕ್ಕೆ ಒಂದು ವಿದೇಶಿ ಭಾಷೆ ಎಂದು ಹಣೆಪಟ್ಟಿ ಕಟ್ಟುವ ಮೂಲಕ, ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ದಿಲ್ಲಿ ಪೊಲೀಸ್‍ ವಾಸ್ತವಿಕವಾಗಿ  ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುತ್ತಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರಗಳ ಹಲವು ಭಾಗಗಳು ಪತ್ತೆ

ಇದು ಅಮಿತ್ ಷಾ ನೇತೃತ್ವದ ಗೃಹ ಸಚಿವಾಲಯದ ಕಾರ್ಯವೈಖರಿಯ ಪ್ರತಿಬಿಂಬವಾಗಿದೆ, ಅವರು ಪದೇ ಪದೇ ಬಂಗಾಳಿ ಮಾತನಾಡುವ ಜನರ ಬಗ್ಗೆ ತನ್ನ ತಿರಸ್ಕಾರವನ್ನು ತೋರಿಸಿದ್ದಾರೆ.

ಈ ಇಡೀ ಘಟನೆಯು ನೆರೆಯ ದೇಶದೊಂದಿಗೆ ಒಂದು ಭಾಷೆಯನ್ನು ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಬಂಗಾಳಿಗಳನ್ನು ನುಸುಳುಕೋರರು ಎಂದು ಚಿತ್ರಿಸುವ ಬಿಜೆಪಿ ನೇತೃತ್ವದ ಸರ್ಕಾರದ ದುಷ್ಟ ಪ್ರಯತ್ನವನ್ನು ಪ್ರಕಟಪಡಿಸುತ್ತದೆ. ಹಲವಾರು ರಾಜ್ಯಗಳಲ್ಲಿ, ಪೊಲೀಸರು ಬಂಗಾಳಿಗಳನ್ನು, ವಿಶೇಷವಾಗಿ ಬಡ ವಲಸೆ ಕಾರ್ಮಿಕರನ್ನು ಅಕ್ರಮವಾಗಿ ದಸ್ತಗಿರಿ ಮಾಡುವ ಮೂಲಕ ಕಿರುಕುಳಕ್ಕೆ ಒಳಪಡಿಸುತ್ತಿದ್ದಾರೆ. ಹಲವರನ್ನು ದೌರ್ಜನ್ಯ, ಚಿತ್ರಹಿಂಸೆ ಮತ್ತು ಸೂಕ್ತ ಕಾನೂನು ಪ್ರಕ್ರಿಯೆಯಿಲ್ಲದೆ ಗಡೀಪಾರಿಗೂ ಗುರಿಪಡಿಸಲಾಗಿದೆ.

ಬಂಗಾಳಿ ಭಾಷಿಕ ನಾಗರಿಕರಿಗೆ ಕೊಡುತ್ತಿರುವ ಕಿರುಕುಳವನ್ನು ಕೇಂದ್ರ ಸರ್ಕಾರ ತಕ್ಷಣವೇ ಕೊನೆಗೊಳಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ ಎಂದಿರುವ  ಪೊಲಿಟ್‍ಬ್ಯುರೊ, ಬಂಗಾಳಿಯನ್ನು ಒಂದು ವಿದೇಶಿ ಭಾಷೆ ಎಂದು ಗುರುತಿಸಿದ್ದಕ್ಕಾಗಿ ಗೃಹ ಸಚಿವಾಲಯ ಕ್ಷಮೆಯಾಚಿಸಬೇಕು ಮತ್ತು ಇದಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಇದನ್ನೂ ನೋಡಿ: ಬಿಹಾರ ಚುನಾವಣೆ: ಹಿಂದುಳಿದ, ಅತಿ ಹಿಂದುಳಿದ ವರ್ಗಗಳ(ಇಬಿಸಿ) ಒಲವು, ನಿಲುವು ಎತ್ತ ಕಡೆ? Janashakthi Media

Donate Janashakthi Media

Leave a Reply

Your email address will not be published. Required fields are marked *