ಬಿಜೆಪಿ ಜೊತೆಗೆ ಹೊಂದಾಣಿಕೆ ಇಲ್ಲ: ಜನರ ತೀರ್ಮಾನವೇ ನನ್ನ ತೀರ್ಮಾನ|ಶಾಸಕಿ ಕರೆಮ್ಮ ಜಿ.ನಾಯಕ್‌

ರಾಯಚೂರು: ಎನ್‌ಡಿಎ ಜೊತೆಗಿನ ಮೈತ್ರಿ ಬೆನ್ನಲ್ಲೇ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದೀಗ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ್‌ ಅವರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರು. ಮೈತ್ರಿ ಬಗ್ಗೆ ಜೆಡಿಎಸ್ ವರಿಷ್ಠರು ತೀರ್ಮಾನ ‌ಮಾಡಿರಬಹುದು. ನಮಗೆ ಬಿಜೆಪಿ ಜೊತೆಗೆ ಹೋಗಿ ಕೆಲಸ ಮಾಡಲು ಆಗಲ್ಲ. ಮೈತ್ರಿಗೆ ನಾನು ಒಪ್ಪಿದ್ರೂ ಕ್ಷೇತ್ರದ ಜನರು ಒಪ್ಪಲ್ಲ ಎಂದು ಹೇಳಿದರು. ಹೊಂದಾಣಿಕೆ 

ಇದನ್ನೂ ಓದಿ:ಬಿಜೆಪಿ ಜೆಡಿಎಸ್ ಮೈತ್ರಿ ಎಚ್‌ಡಿಕೆ ಮತ್ತು ಅಮಿತ್ ಶಾ ಮಧ್ಯೆ ಮಾತುಕತೆ!

ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ದೂರ ಇಟ್ಟಿದ್ದೇವೆ. ಈಗಲೂ ಅವರನ್ನು ದೂರವೇ ಇಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಬಿಜೆಪಿಯವರ ಮೇಲೆ ಅಸಮಾಧಾನವಿದೆ. ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ನನಗೆ ಕಾಟ ನೀಡಿದ್ದಾರೆ. ನನ್ನ ಮಗಳ ಮೇಲೆ ಕಾರ್ಯಕರ್ತರು ಅಟ್ಯಾಕ್‌ ಮಾಡಿದ್ದಾರೆ. ಜೆಡಿಎಸ್‌ ಕಾರ್ಯಕರ್ತರಿಗೆ ಚಪ್ಪಲಿಯಿಂದ ಹೊಡೆಯುತ್ತೇವೆ ಎಂದೆಲ್ಲ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.ಬಿಜೆಪಿ 

ದೇವದುರ್ಗದಲ್ಲಿ ಬಿಜೆಪಿಯವರು ಏನೆಲ್ಲ ಕಿರುಕುಳ ನೀಡಿದ್ದಾರೆ ಎನ್ನುವುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ನಮ್ಮ ಪಂಚರತ್ನ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದು ಇದೇ ಬಿಜೆಪಿಯವರು. ನಮ್ಮ ‌ಪಕ್ಷದ ಬ್ಯಾನರ್ ಹರಿದಿದ್ದರು. ಆದರೆ ನನಗೆ ನನ್ನ ಪಕ್ಷ ದೇವರು. ವರಿಷ್ಠರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ನನ್ನ ಕಷ್ಟ ಏನೆಂದು ವರಿಷ್ಠರಿಗೆ ಗೊತ್ತಿದೆ. ದೇವೇಗೌಡರು ನನ್ನನ್ನು ಕಾರ್ಯಕರ್ತೆಯನ್ನಾಗಿ ನೋಡಿಲ್ಲ. ಅವರ ಮಗಳ ಸಮಾನವಾಗಿ ಸ್ವೀಕರಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ಇಲ್ಲ. ಜನರ ತೀರ್ಮಾನವೇ ನನ್ನ ತೀರ್ಮಾನ. ನನಗೆ ಬಿಜೆಪಿ ಜೊತೆಗೆ ಮೈತ್ರಿ ‌ಮಾಡಿಕೊಳ್ಳಲು ವರಿಷ್ಠರು ನನಗೆ ಹೇಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕುಮಾರಣ್ಣ ಅವರಿಗೆ ಸವಾಲು ಹಾಕಿದ ವ್ಯಕ್ತಿ ಇದೇ ಕ್ಷೇತ್ರದಲ್ಲಿದ್ದಾನೆ. ಕುಮಾರಣ್ಣನಿಗೆ ಕೆಟ್ಟದಾಗಿ ನಿಂದಿಸಿದ ವ್ಯಕ್ತಿ ಜೊತೆಗೆ ನಾನು ಮೈತ್ರಿ ಮಾಡಿಕೊಳ್ಳಬೇಕಾ? ಅದು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಡಿಯೋ ನೋಡಿ:INDIA v/s NDA : 2024 ರ ಲೋಕಸಭೆಗೆ ಸಿದ್ದಗೊಂಡ ವೇದಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *