ರಜೆ ವಿಸ್ತರಣೆ: ಜನರು ಸರ್ಕಾರಿ ಶಾಲೆಗಳಿಂದ ದೂರ ಹೋಗುತ್ತಾರೆ – ನಿರಂಜನಾರಾಧ್ಯ ವಿ ಪಿ ವಾಗ್ದಾಳಿ

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರು ಸಾಮಾಜಿಕ – ಆರ್ಥಿಕ ಗಣತಿಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಈಗಿರುವ ರಜೆ ಅಕ್ಟೋಬರ್ 18 ರವರೆಗೆ ಸರ್ಕಾರ ವಿಸ್ತರಿಸಿದೆ. ಗಣತಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನಿಜವಾಗಿಯೂ ಮುಖ್ಯ. ಆದರೆ, ಸರ್ಕಾರಿ ಕನ್ನಡ ಶಾಲೆಗಳನ್ನು ಬಲಿಕೊಟ್ಟು ಮಾಡುವುದಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ ಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ರಜೆ

ಸರ್ಕಾರಿ ಶಾಲೆಗಳ ಬಗ್ಗೆ ಜನ ಈಗಾಗಲೇ ನಂಬಿಕೆಗೆ ಕಳೆದುಕೊಂಡಿದ್ದಾರೆ .ಇಂತಹ ತೀರ್ಮಾನಗಳಿಂದ ಜನರು ಸರ್ಕಾರಿ ಶಾಲೆಗಳಿಂದ ಇನ್ನಷ್ಟು ದೂರ ಹೋಗುತ್ತಾರೆ ಎಂದರು.

ಇದನ್ನೂ ಓದಿ: ಬೆಂಗಳೂರು| 252 ಗ್ರಾಮ ಪಂಚಾಯಿತಿಗಳಲ್ಲಿ ʼನೀರಿದ್ದರೆ ನಾಳೆʼ ಯೋಜನೆ ಜಾರಿ

ಈ ತೀರ್ಮಾನ ಬಡ ಮಕ್ಕಳಿಗೆ ಕಲಿಕೆಯನ್ನು ವಂಚಿಸಿ ಶ್ರೀಮಂತರ ಮಕ್ಕಳು ಯಾವುದೇ ಆತಂಕವಿಲ್ಲದೆ ಕಲಿಕೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸುತ್ತದೆ . ಇದು ತಾರತಮ್ಯ ಹಾಗೂ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ. ಈ ತೀರ್ಮಾನದಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿಕೊಂಡರು.

ಇದನ್ನು ಸರ್ಕಾರಿ ಆಲೋಚಿಸಬೇಕಿತ್ತು .ಶಿಕ್ಷಕರನ್ನು ಗಣತಿಗೆ ತೆಗೆದಿಕೊಂಡಿದ್ದೆ ತಪ್ಪು. ಪರ್ಯಾಯವಾಗಿ , ಯುವನಿಧಿ ಯುವಕರನ್ನು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬಹುದಿತ್ತು. ಅವರಿಗೂ ಸಮಾಜದ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಜನಜೀವನದ ಬಗ್ಗೆ ಒಂದು ಹೊಸ ಕಲಿಕೆ -ಅನುಭವ ಆಗುತಿತ್ತು ಎಂದು ತಿಳಿಸಿದರು.

ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ | ‘ನ್ಯಾಯಕ್ಕಾಗಿ ಜನಾಗ್ರಹ’ Janashakthi Media

Donate Janashakthi Media

Leave a Reply

Your email address will not be published. Required fields are marked *