ಆಡಳಿತ ಮಂಡಳಿ ಕುತಂತ್ರ ಬುದ್ಧಿ ತೋರಿಸಿದೆ, ಕಾರ್ಮಿಕರ ಆರೋಪ, – ತೆರವಿನ ಹಿಂದೆ ಸರಕಾರವಿದೆ – ಸಿಪಿಐಎಂ ಆರೋಪ.
ಬೆಂಗಳೂರು :ಕಳೆದ 33 ದಿನಗಳಿಂದ ಅಕ್ರಮ ಬೀಗಮುದ್ರೆ ಮತ್ತು ಉತ್ಪಾದನ ನಿಬಂಧನೆಗಳು ಹಾಗು ಕಾಮಿ೯ಕರ ಅಮಾನತ್ತಿನ ವಿರುದ್ಧ ಟಯೋಟಾ ಕಿಲೊ೯ಸ್ಕರ್ ಕಾಮಿ೯ಕರು ಧರಣಿ ನಡೆಸುತ್ತಿದ್ದ ಧರಣಿ ಸ್ಥಳದಲ್ಲಿ ಹಾಕಿಕೊಂಡಿದ್ದ ಪೆಂಡಾಲನ್ನು ತೆರವುಗೊಳಿಸಲಾಗಿದೆ. ಪೆಂಡಾಲ್ ತೆರವಿನ ಹಿಂದೆ ಆಡಳಿತ ಮಂಡಳಿ ಹಾಗೂ ಬಿಜೆಪಿ ಸರಕಾರದ ಕೈವಾಡ ಇದೆ ಎಂದು ಕಾರ್ಮಿಕರು ಆಕ್ರೊಶವನ್ನು ವ್ಯಕ್ತಪಡಿಸಿದ್ದಾರೆ. ಸರಕಾರ ಹಾಗೂ ಆಡಳಿತ ಮಂಡಳಿಯ ಕುತಂತ್ರ ಬುದ್ದಿಗೆ ಹೆದರದೆ ಕಾರ್ಮಿಕರು ಕಂಪನಿಯ ಗೇಟ್ ಮುಂಭಾಗ ಛತ್ರಿ ಹಿಡುದುಕೊಂಡು ‘ ಛತ್ರಿ ಚಳುವಳಿ ಆರಂಭಿಸಿದ್ದಾರೆ.
60 ಜನರ ಅಮಾನತ್ತು ರದ್ದು ಮಾಡಿ ಕಾರ್ಮಿಕರ ಬೇಡಿಕೆ ಈಡೇರಿಸದೇ ಇದ್ದರೆ ಹೋರಾಟದ ರೂಪರೇಷೆಗಳನ್ನು ಇನ್ನಷ್ಟೂ ಚುರುಕು ಮಾಡಲಾಗುವುದು ಎಂದು ಕಾರ್ಮಿಕ ಸಂಘ ಎಚ್ಚರಿಸಿವೆ. ಈಗಾಗಲೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಸರಕಾರ ಒಂದು ಸುತ್ತಿನ ಮಾತುಕತೆ ನಡೆಸಿತ್ತು. ಅದಯ ಯಾವುದೇ ಪ್ರಯೋಜನ ನೀಡದ್ದರಿಂದ ಕಾರ್ಮಿಕರು ಮುಷ್ಕರವನ್ನು ಮುಂದುವರೆಸಿದ್ದರು.
ಪೆಂಡಾಲ ತೆರವಿಗೆ ಸಿಪಿಐಎಂ ಖಂಡನೆ : ರಾಜ್ಯ ಬಿಜೆಪಿ ಸಕಾ೯ರವು ಕಾಮಿ೯ಕರ ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮವಹಿಸದೆ, ಮುಷ್ಕರ ನಿಷೇಧಿಸಿ ನಂತರ ಲಾಕೌಟ್ ಅನ್ನು ನಿಷೇಧಿಸಿ, ಮಾಲೀಕರು ಲಾಕೌಟ್ ತೆರವುಗೊಳಿಸಲು ಕಾಮಿ೯ಕರಿಂದ ಮುಚ್ಚಳಿಕೆ ಕೊರಿದ್ದರಿಂದ ಮುಷ್ಕರ ಮುಂದುವರಿದಿದೆ. ಮಾಲೀಕರ ಪರ ನಿಂತಿರುವ ರಾಜ್ಯ ಬಿಜೆಪಿ ಸಕಾ೯ರವು ಕಾಮಿ೯ಕರು ರೈತರೊಂದಿಗೆ ಸೇರಿ ಹೋರಾಟ ತೀವ್ರಗೊಳಿಸಿರುವ ಕಾರಣ ಮುಷ್ಕರ ಮುರಿಯಲು ಕೆಐಎಡಿಬಿ ಬಳಿಸಿಕೊಂಡು ಪೋಲಿಸರ ಮೂಲಕ ಪೆಂಡಾಲ್ ತೆರೆವುಗೊಳಿಸಿರುವುದು ಬಿಜೆಪಿ ಸಕಾ೯ರದ ಕಾಮಿ೯ಕ ವಿರೋಧಿ ಕ್ರಮದ ಪ್ರತೀಕವಾಗಿದೆ ಎಂದು ಸಿಪಿಐಎಂ ಆರೋಪಿಸಿದೆ. ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸಕಾ೯ರದ ಈ ಕ್ರಮವು ಅದರ ಎಂದಿನ ಜನವಿರೋಧಿ ನೀತಿಯ ಭಾಗವಾಗಿದೆ. ಅದರ ವಿರುದ್ಧ ಹೋರಾಟ ಮುಂದವರಿಸಿ ಛತ್ರಿ ಚಳುವಳಿಗೆ ಮುಂದಾಗಿರುವ ಕಾಮಿ೯ಕರನ್ನು ಸಿಪಿಐ(ಎಂ) ಅಭಿನಂಧಿಸಿದೆ.