ಧಾರವಾಡ : ಧಾರವಾಡ ತಾಲ್ಲೂಕಿನ ನಾರಾಯಣಪುರದ ವಾಸಿ ಮಾರುತಿ ಶಾನಬಾಗ್ ಎಂಬುವವರು ದಿ:22/12/2023 ರಂದು ರೂ.10,000/- ಕಿಮ್ಮತ್ತಿನ ಆಯುರ್ವೇದಿಕ್ ಆಹಾರ ಸಾಮಾನುಗಳನ್ನು ಮುಂಬೈಯಲ್ಲಿರುವ ಸಂತೋಷ ಎಂಬುವವರಿಗೆ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್‍ನವರ ಮುಖಾಂತರ ಸರ್ವಿಸ್ ಚಾರ್ಜ ಪಾವತಿಸಿ ಪಾರ್ಸಲ್ ಕಳುಹಿಸಿದ್ದರು. ದಂಡ
ಆದರೆ ಅದು ಸಂತೋಷ ಅವರಿಗೆ ತಲುಪಿರಲಿಲ್ಲ. ತಕ್ಷಣ ದೂರುದಾರರು ಎದುರುದಾರರಿಗೆ ಭೇಟಿಯಾಗಿ ಪಾರ್ಸಲ್ ತಲುಪಿರದ ಬಗ್ಗೆ ತಿಳಿಸಿರುತ್ತಾರೆ. ಸಾಕಷ್ಟು ಸಲ ವಿಚಾರಿಸಿದರೂ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್‍ಗೆ ಅದಕ್ಕೆ ಉತ್ತರ ನೀಡದೇ ಸತಾಯಿಸಿರುತ್ತಾರೆ. ಅಲ್ಲದೇ ತಾವು ಕೇವಲ ರೂ.1,000/- ಗೆ ಮಾತ್ರ ಪರಿಹಾರ ಕೊಡಲು ಸೀಮಿತರಾಗಿರುತ್ತೇವೆ ಎಂದು ಉತ್ತರ ನೀಡಿರುತ್ತಾರೆ. ಮನನೊಂದ ದೂರುದಾರರು ಎದುರುದಾರರ ಸೇವಾ ನ್ಯೂನ್ಯತೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದಿ:01/03/2024 ರಂದು ದೂರು ಸಲ್ಲಿಸಿದ್ದರು.
ಇದನ್ನು ಓದಿ : ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ವಿಳಂಬಕ್ಕೆ ದಂಡ ಕಟ್ಟಿದ ಕುಟುಂಬಗಳ ಬಿಪಿಲ್ ಕಾರ್ಡ್ ರದ್ದು ತಡೆ: ಸಿಪಿಐಎಂ ಒತ್ತಾಯ
ಸದರಿ ದೂರಿನ ಕೂಲಂಕುಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಕೆ.ಭೂತೆ, ಸದ್ಯಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ. ದೂರುದಾರರು ಎದುರುದಾರರ ಬಳಿ ಸೇವಾ ಶುಲ್ಕ ರೂ.220/- ಕೊಟ್ಟು ಪಾರ್ಸಲನ್ನು ಮುಂಬೈಯಿಗೆ ಕಳುಹಿಸಿರುವುದು ಕಂಡುಬರುತ್ತದೆ. ಅಲ್ಲದೇ ಅದು ಮುಂಬೈಯಿಗೆ ಹೋಗಿ ಮುಟ್ಟಿರದೇ ಇರುವುದು ಸೇವಾ ನ್ಯೂನ್ಯತೆ ಅಂತಾ ಪರಿಗಣಿಸಿ ದೂರುದಾರರಿಗೆ ಆಗಿರುವ ನಷ್ಟಕ್ಕೆ ರೂ.5,000/- ಶೇ8% ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ಬುಕ್ ಮಾಡಿದ ದಿ:22/12/2023 ರಂದು ಪೂರ್ತಿ ಹಣ ಸಂದಾಯವಾಗುವವರೆಗೆ ದೂರುದಾರರಿಗೆ ಕೊಡಲು ಎದುರುದಾರರಿಗೆ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.25,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚಾ ರೂ.10,000/- ಕೊಡಬೇಕು ಅಂತಾ ಧಾರವಾಡದ ಎಸ್.ಆರ್.ಎಸ್. ಟ್ರಾವೆಲ್ಸ್‍ಗೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನು ನೋಡಿ : ಐಸಿಡಿಎಸ್ ಯೋಜನೆ ಕಾಯ್ದೆಯಾಗಬೇಕು – ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳ ಹಕ್ಕಾಗಬೇಕು – ವಕೀಲ ಮಂಜುನಾಥ್