ರಾಯಚೂರು: ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ದರೋಡೆಗೆ ಯತ್ನ

ರಾಯಚೂರು : ಕೆಎಸ್‌ಆರ್‌ಟಿಸಿ ಬಸ್ಸುಗಳು ಸೇರಿದಂತೆ 40 ಕ್ಕೂ ಹೆಚ್ಚು ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ದರೋಡೆಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಬೀದರ್ ನಿಂದ ಬಳ್ಳಾರಿಗೆ ಹೋಗುವ ಮಾರ್ಗದ ಮಧ್ಯೆ ಸುಮಾರು 20 ಕ್ಕೂ ಜನರಿದ್ದ ಗುಂಪು 20 ಸಾರಿಗೆ ಬಸ್, 20 ಖಾಸಗಿ ಬಸ್ ಗಳ ಗಾಜಿನ ಮೇಲೆ ಕಲ್ಲು ತೂರಾಟ ನಡೆಸಿದೆ.

ಇದನ್ನೂ ಓದಿ : ರಾಯಚೂರು: ಕಾಲುವೆ ಬಿದ್ದ ಗೂಡ್ಸ್ ಆಟೋ – ಹಲವರಿಗೆ ಗಾಯ

ರಾತ್ರಿ ವೇಳೆ ಟೆಂಪೋ, ಲಾರಿ, ಕಾರು ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಲಾಗಿದೆ. ದುಷ್ಕರ್ಮಿಗಳ ಗುಂಪು ಕಲ್ಲು ತೂರಿ ಚಿನ್ನಾಭರಣ, ಹಣ ದರೋಡೆ ಮಾಡಲು ಯತ್ನಿಸಿತ್ತು ಎನ್ನಲಾಗಿದೆ. ಆದರೆ ಯಾವ ವಾಹನಗಳು ಕೂಡ ವಾಹನ ನಿಲ್ಲಿಸದೇ ತೆರಳಿದ್ದರಿಂದ ದರೋಡೆಕೋರರ ಯತ್ನ ವಿಫಲವಾಗಿದೆ. ಘಟನೆ ಕುರಿತು ಪೊಲೀಸರಿಗೆ ಕೂಡ ಸುದ್ದಿ ಮುಟ್ಟಿಸಲಾಗಿದೆ.

ಇದನ್ನೂ ನೋಡಿ : ಪ್ರತ್ಯೇಕ ‘ಆದಿವಾಸಿ ನಿಗಮ’ ಸ್ಥಾಪನೆಗೆ ಶೀಘ್ರವೇ ಕ್ರಮ : ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *