ಮೈಸೂರು: ‘ಯಜ್ಞ ಕುಂಡ ಯಾವ ಕಡೆ ಇರಬೇಕು ಎಂಬ ಪಾಠ ಯಾರಿಗೆ ಬೇಕು? ಶಾಲಾ ಪಠ್ಯಪುಸ್ತಕಗಳಲ್ಲಿ ಎಂದೆಂದಿಗೂ ಧರ್ಮ ಆಧಾರಿತ ಪಾಠಗಳು ಇರಬಾರದು. ಇತ್ತೀಚೆಗೆ ಪಠ್ಯಗಳ ಕೇಸರೀಕರಣ ಅತ್ಯಂತ ಅಪಾಯಕಾರಿ ಬೆಳವಣಿಗೆ ಮಾಜಿ ಸಚಿವ, ವಿಧಾನ ಪರಿಷತ್ತು ಸದಸ್ಯ ಬಿಜೆಪಿ ನಾಯಕ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಹೆಡಗೆವಾರ್ ಯಾರೆಂಬುದೇ ಗೊತ್ತಿಲ್ಲ, ಬಾಯಿಗೆ ಬಂದಹಾಗೆ ಯಾರ‍್ಯಾರದೋ ಪಾಠ ಸೇರಿದರೆ ಹೇಗೆ. ರೋಹಿತ್ ಚಕ್ರತೀರ್ಥ ಯಾರಪ್ಪ? ಸಂಘ ಪರಿವಾರದ ಕಾರ್ಯಕರ್ತ. ಶಿಕ್ಷಣ ತಜ್ಞರಲ್ಲದವರು ಪಠ್ಯ ಪುಸ್ತಕ ತಯಾರಿಯ ಅಧ್ಯಕ್ಷರಾಗೋದು ದುರಂತ ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷ ಅಲ್ಲ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷವಲ್ಲ. ನಾವೆಲ್ಲ ಸೇರಿ ಶಿಕ್ಷಣ ವ್ಯವಸ್ಥೆ ಹಾಳು ಮಾಡುತ್ತಿದ್ದೇವೆ. ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಪಠ್ಯ ಬೋಧಿಸುವುದು ಯಾರಿಗೆ ಬೇಕು? ನಾರಾಯಣ ಗುರು ಸಾಮಾಜಿಕ ಕ್ರಾಂತಿಯ ಹರಿಕಾರ ಅವರ ಪಠ್ಯ ತೆಗೆಯುವುದು ತಪ್ಪು. ತಮಗೆ ತೋಚಿದ ಹಾಗೆ ಯಾರನ್ನೋ ಪಠ್ಯದಲ್ಲಿ ಸೇರಿಸಿದರೆ ಹೇಗೆ? ಟಿಪ್ಪು ಬ್ರಿಟಿಷರ ವಿರುದ್ಧ ಮಂಡಿಯೂರಲಿಲ್ಲ. ಮಕ್ಕಳನ್ನು ಒತ್ತೆ ಇಟ್ಟು ರಾಜ್ಯ ರಕ್ಷಣೆ ಮಾಡಿದ್ದ’ ಎಂದು ಹೇಳಿದರು.