- ಮರುಪಠ್ಯ ಪುಸ್ತಕ ಸಮಿತಿಯಿಂದ ರೋಹಿತ್ ಚಕ್ರತೀರ್ಥನನ್ನು ಪದಚ್ಯುತ ಗೊಳಿಸುವಂತೆ ಆಗ್ರಹ
- ಪಾದಯಾತ್ರ ಮೂಲಕ ಪ್ರತಿಭಟನೆ ಕೈಗೋಳ್ಳಲು ಕಾಂಗ್ರೆಸ್ ಸಜ್ಜು,
ತೀರ್ಥಹಳ್ಳಿ : ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ರೋಹಿತ್ ಚಕ್ರತೀರ್ಥರನ್ನು ತೆಗೆದು ಹೊಸ ಪಠ್ಯಪುಸ್ತಕ ಸಮಿತಿ ರಚನೆ ಮಾಡದಿದ್ದರೆ ಕುವೆಂಪು ಜನ್ಮಸ್ಥಳದಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಿಮ್ಮನೆ, ರೋಹಿತ್ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಯನ್ನು ಅವಮಾನಿಸಿರುವುದು, ನಾಡ ಧ್ವಜಕ್ಕೆ ಅಪಹಾಸ್ಯ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಹೇಳಿದರು.
ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ಪಾಠ ತಿರುಚಲಾಗಿದೆ. ಬುದ್ದರ ಪದ್ಯ ಕಿತ್ತು ಹಾಕಿದ್ದಾರೆ. ಬಸವಣ್ಣನ ವಚನಗಳಿಗೆ ಮತ್ತು ಜೀವನಗಾಥೆಗೆ ತಿದ್ದುಪಡಿ ಮಾಡಿರುವುದು ಹಾಗೂ ನಾರಾಯಣ ಗುರುಗಳ ಪಾಠ ತೆಗದು ಮತ್ತೊಂದು ಕಡೆ ತಿರುಚಿ ಸೇರಿಸಲಾಗಿದೆ. ಸಾ ರಾ ಅಬೂಬಕರ ಅವರ ಮಾನವೀಯ ನೆಲೆಯ ಕತೆ ತೆಗೆದಿದೆ, ಇತಿಹಾಸಕ್ಕೆ ಕೋಮು ದ್ವೇಶದ ಲೇಪ ಹಚ್ಚಿದೆ, ಬಿ ಟಿ ಲಲಿತಾ ನಾಯಕ್ ಅವರ ಪದ್ಯ ಕಿತ್ತು ಹಾಕಿದೆ. ಕೋಮುವಾದ ಎಂದರೆ ಮುಸ್ಲಿಂ ಕೋಮುವಾದ ಎಂದು ಬಿಂಬಿಸಿದೆ. ಪ್ರಾದೇಶಿಕವಾದ ಅಂದರೆ ದೇಶದ್ರೋಹ ಎಂದು ಬಿಂಬಿಸಿದೆ. ಮತ್ತು ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಪಠ್ಯ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಹತ್ತು ಹಲವು ವಿಕೃತಿಗಳು ಒಂದೊಂದಾಗಿ ಬಯಲಾಗುತ್ತಿವೆ. ಎಂದು . ಹದಿನೈದು ದಿನಗಳಲ್ಲಿ ಕಿತ್ತು ಹಾಕಿದ ಸಮಿತಿಯನ್ನು ರದ್ದುಗೊಳಿಸದೆ ಹೋದರೆ ಕುವೆಂಪುರವರ ಜನ್ಮ ಸ್ಥಳದಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಿಮ್ಮನೆ ತಿಳಿಸಿದರು.
ಈ ವೇಳೆ, ಕೆಪಿಸಿಸಿ ಸದಸ್ಯ ಜಿ ಎಸ್ ನಾರಾಯಣರಾವ್, ತೀರ್ಥಹಳ್ಳಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆಸ್ತೂರು ಮಂಜುನಾಥ್, ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಡುಬ ರಾಘವೇಂದ್ರ ಇದ್ದರು.