ಉನ್ನಾವೊ, ಫೆ : ಉತ್ತರ ಪ್ರದೇಶದ ಉನ್ನಾವೊ ನಲ್ಲಿ ಕಳೆದ ವಾರ ಗ್ರಾಮವೊಂದರ ಹೊಲದಲ್ಲಿ ಇಬ್ಬರು ಯುವತಿಯರು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಹಂಚಿಕೊಂಡ ಅಭಿಪ್ರಾಯಗಳು ಸುಳ್ಳು ಸುದ್ದಿಗಳು ಎಂಬ ಆರೋಪದಡಿ ಹಿರಿಯ ಪತ್ರಕರ್ತೆ ಬರ್ಕಾದತ್ ಸೇರಿದಂತೆ ೮ ಜನರ ವಿರುದ್ಧ ಉನ್ನಾವೊ ನ ಸದರ್ ಕೊಟ್ವಾಲಿ ಠಾಣೆಯ ಪೊಲೀಸರು ಎಫ್‌ಐಆರ್ ಹಾಕಿದ್ದಾರೆ.
‘ಮೊಜೊ ಸ್ಟೋರಿ‘ ಸಂಪಾದಕಿ ಹಿರಿಯ ಪತ್ರಕರ್ತೆ ಬರ್ಕಾ ದತ್, ಜನ್‌ಜಾಗರಣ್ ಲೈವ್, ಅಝಾದ್ ಸಮಾಜ್ ಪಾರ್ಟಿ ವಕ್ತಾರ ಸೂರಜ್ ಕುಮಾರ್ ಬೌಧ್, ನೀಲಿಮ್ ದತ್, ವಿಜಯ್ ಅಂಬೇಡ್ಕರ್, ಅಭಯ್ ಕುಮಾರ್ ಆಜಾದ್, ರಾಹುಲ್ ದಿವಾಕರ್, ನವಾಬ್ ಸತ್ಪಾಲ್ ತನ್ವರ್ ಅವರ ವಿರುದ್ಧ ನೆನ್ನೆ ಉನ್ನಾವೊ ನಲ್ಲಿರುವ ಸದರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಈ ಬಗ್ಗೆ ಅಲ್ಲಿನ ಎಎಸ್‌ಪಿ ವಿನೋದ್ ಕುಮಾರ್ ಪಾಂಡೆ ರವರು ‘ನಕಲಿ ಮತ್ತು ದಾರಿತಪ್ಪಿಸುವಂತಹ ಸುದ್ದಿಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್ ಹಾಕಲಾಗಿದೆ’ ಎಂದು ತಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತೆ ಬರ್ಕಾ ದತ್, ‘ಇದು ನಾಚಿಕೆಗೇಡಿನ ಕ್ರಮ. ಕಿರುಕುಳ ನೀಡುವ ಮತ್ತು ಬೆದರಿಸುವ ಪ್ರಯತ್ನʼ ಎಂದು ಹೇಳಿದರು.
‘ನಾವು ವಿಕಾಸಗೊಳ್ಳುತ್ತಿರುವ ಕಥೆಯ ಎಲ್ಲಾ ಬದಿಗಳನ್ನು ವರದಿ ಮಾಡುವ ಮೂಲಕ ಪತ್ರಿಕೋದ್ಯಮ ತತ್ವಗಳನ್ನು ಅನುಸರಿಸಿದ್ದೇವೆ. ಹೊಸ ತಿರುವು ಪಡೆದುಕೊಳ್ಳುತ್ತಿರುವ ಘಟನೆಯ ಬಗ್ಗೆ ಎಲ್ಲಾ ದೃಷ್ಟಿಕೋನಗಳಿಂದ ವರದಿ ಮಾಡಿದ್ದೇವೆ. ಆದರೆ, ನಮ್ಮನ್ನು ಬೆದರಿಸುವುದಕ್ಕಾಗಿಯೇ ಜೈಲು ಶಿಕ್ಷೆಗೆ ಒಳಗಾಗುವಂತಹ ಐಪಿಸಿ ಸೆಕ್ಷನ್‌ಗಳನ್ನು ಹಾಕಲಾಗಿದೆ. ನಾನು ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಸಿದ್ದʼ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉನ್ನಾವೊದಲ್ಲಿ ಇಬ್ಬರು ದಲಿತ ಹುಡುಗಿಯರ ಸಾವು : ಯೋಗಿ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಿಲ್ಲ ರಕ್ಷಣೆ
ಅಲ್ಲದೆ, “ಇನ್ನೂ ಹೆಚ್ಚಿನ ಅನುಮಾನಾಸ್ಪದ ಸಂಗತಿಯೆಂದರೆ ಉನ್ನಾವೊ ಪೊಲೀಸರು ನಮ್ಮನ್ನು ರಾಜಕಾರಣಿಗಳ ಗುಂಪಿನೊಂದಿಗೆ ಹೇಗೆ ಸೇರಿಸಿದ್ದಾರೆ.” ಎಂದು ಹೇಳಿದರು. ‘ಉನ್ನಾವೊ ಪೊಲೀಸರು ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರತಿಯನ್ನು ನೀಡಲು ನಿರಾಕರಿಸಿದ್ದಾರೆʼ ಎಂದೂ ಬರ್ಕಾ ದತ್ ಆರೋಪಿಸಿದ್ದಾರೆ.