ಬೆಂಗಳೂರು.ಫೆ.03 : ರೈತರ ಟ್ರಾಕ್ಟರ್ ರ್ಯಾಲಿಯ ಬಗ್ಗೆ ವರದಿ ಮಾಡಿದ್ದಕ್ಕಾಗಿ ಹಿರಿಯ ಪತ್ರಿಕಾ ಸಂಪಾದಕರು ಮತ್ತು ಪತ್ರಕರ್ತರುಗಳ ಮೇಲೆ ಕೇಂದ್ರ ಸರ್ಕಾರವು ರಾಜದ್ರೋಹದ ಎಫ್.ಐ.ಆರ್. ಗಳನ್ನು ಹಾಕಿರುವುದನ್ನು ವಿರೋಧಿಸಿ ಸಮಾನ ಮನಸ್ಕರು ಅಲುಮ್ನಿ ಹಾಲ್, ಕೆ ಆರ್ ಸರ್ಕಲ್ ನಲ್ಲಿ ಇಂದು (ಬುಧವಾರ) ಪ್ರತಿಭಟನಾ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ದೆಹಲಿ ರೈತ ಹೋರಾಟಕ್ಕೆ ಹೆಚ್ಚುತ್ತಿದೆ ಜನ ಬೆಂಬಲ
ಜನವರಿ 26 ರಂದು ಹೆದಲಿಯಲ್ಲಿ ನಡೆದ ರೈತರ ಹೋರಾಟ ಬೆಂಬಲಿಸಿದ ಪತ್ರಕರ್ತರಾದ ಮನ್ ದೀಪ್ ಪುನಿಯಾ ಬಂಧನ, ರಾಜದೀಪ್ ಸರ್ದೇಸಾಯಿ, ಸಿದ್ಧಾರ್ಥ್ ವರದರಾಜನ್, ಚಿಂತಕ ಯೋಗೇಂದ್ರ ಯಾದವ್ ಇವರ ಮೇಲಿನ ಎಫ್ ಐ ಆರ್ ನ್ನು ವಿರೋಧಿಸಿ ಕವಿಗಳು, ಸಾಹಿತಿಗಳು, ಚಿಂತಕರು, ಪತ್ರಕರ್ತರು ಸೇರಿದಂತೆ ಸಮಾನ ಮನಸ್ಕರೆಲ್ಲರೂ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳಬೇಕಂದು ಕಾವ್ಯ ಅಚ್ಯುತ್ ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.
ಇದನ್ನು ಓದಿ: ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಹಿರಿಯ ಪತ್ರಕರ್ತರ ಮೇಲೆ ರಾಜದ್ರೋಹದ ಎಫ್.ಐ.ಆರ್.