ಉತ್ತರಾಖಂಡ ಬಿಜೆಪಿ ಸರ್ಕಾರದೀಂದ ಪತಂಜಲಿ ಉತ್ಪನ್ನಗಳ ಪರವಾನಿಗಿ ರದ್ದು

ನವದೆಹಲಿ: ಜನರನ್ನು ದಾರಿತಪ್ಪಿಸುವ ಜಾಹೀರಾತುಗಳ ಕುರಿತು ಒಂದು ಕಡೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಇನ್ನೊಂದು ಹಿನ್ನಡೆಯೆನ್ನುವಂತೆ ಉತ್ತರಾಖಂಡ ಬಿಜೆಪಿ ಸರ್ಕಾರವು ಪತಂಜಲಿಯ ದಿವ್ಯ ಫಾರ್ಮಸಿಯಿಂದ ತಯಾರಿಸಿದ ಕನಿಷ್ಠ 14 ಉತ್ಪನ್ನಗಳ ಪರವಾನಗಿಯನ್ನುರದ್ದುಗೊಳಿಸಿದೆ.

ಬಾಬಾ ರಾಮ್‌ದೇವ್ ಮತ್ತು ಅವರ ಸಹವರ್ತಿ ಆಚಾರ್ಯ ಬಾಲಕೃಷ್ಣ ಅವರಿಗೆ  ಸುಪ್ರೀಂ ಕೋರ್ಟ್‌  ತರಾಟೆಗೆ ತೆಗೆದುಕೊಂಡು ಪತ್ರಿಕೆಗಳಲ್ಲಿ ಕ್ಷಮೆಯಾಚಿಸಿದ ಕೆಲವು ದಿನಗಳ ನಂತರ ಉತ್ತರಾಖಂಡ ಸರ್ಕಾರವು ಈ ಕ್ರಮ ಕೈಗೊಂಡಿದೆ. ಉತ್ಪನ್ನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ಈ ತಿಂಗಳ ಆರಂಭದಲ್ಲಿ ಆದೇಶವನ್ನು ಹೊರಡಿಸಲಾಗಿದ್ದು ಪತಂಜಲಿ ಸಂಸ್ಥೆಗೆ ಭಾರೀ ಹಿನ್ನಡೆಯಾಗಿದೆ.

ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಹ, ಮುಕ್ತ ವತಿ ಎಕ್ಸ್‌ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್ ಮತ್ತು ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್, ‘ಲಿವಾಮೃತ್ ಅಡ್ವಾನ್ಸ್’, ‘ಲಿವೋಗ್ರಿಟ್’, ‘ ಐಗ್ರಿಟ್ ಗೋಲ್ಡ್’ ಮತ್ತು ‘ಪತಂಜಲಿ ದೃಷ್ಟಿ ಐ ಡ್ರಾಪ್’ ಇವುಗಳನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಪತಂಜಲಿಯ ‘ಶಿಶುಗಳ, ಮಕ್ಕಳ ಆಹಾರʼ ದ ಜಾಹೀರಾತುಗಳು ತಪ್ಪುದಾರಿಗೆಳೆಯುತ್ತಿವೆ: ಸುಪ್ರೀಂ ಕೋರ್ಟ್

ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆಕ್ಟ್ ಉಲ್ಲಂಘನೆಯ ಕಾರಣದಿಂದ ಔಷಧ ಪರವಾನಗಿ ಪ್ರಾಧಿಕಾರವು ಸಂಸ್ಥೆಯಿಂದ ಉತ್ಪನ್ನಗಳ ಪರವಾನಗಿಗಳನ್ನು ಅಮಾನತುಗೊಳಿಸಿದೆ.

ಸಂಸ್ಥೆಯು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೇಳಿದ ಮಾಹಿತಿಯನ್ನು ಒದಗಿಸಿಲ್ಲ ಮತ್ತು ರಕ್ಷಣೆಗಾಗಿ ನೀಡಿದ ವಿವರಣೆಯು ತೃಪ್ತಿಕರವಾಗಿಲ್ಲ ಎಂದು ಪ್ರಾಧಿಕಾರವು ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ನೋಡಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಿಜೆಪಿ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ, ಯಾರ ಮತಬುಟ್ಟಿಗೆ ಕೈ ಹಾಕ್ತಾರೆ ಈಶ್ವರಪ್ಪ?

Donate Janashakthi Media

Leave a Reply

Your email address will not be published. Required fields are marked *