ಶ್ರಮಜೀವಿಗಳ ಹೋರಾಟದಲ್ಲಿ ಭಾಗವಹಿಸಲು ಬಸ್‌ಗಾಗಿ ಹೋರಾಡಿದ ಬಿಸಿಯೂಟ ನೌಕರರು

ಲಿಂಗಸ್ಗೂರು: ಶ್ರಮಜೀವಿಗಳ ಹೋರಾಟದಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳುತ್ತಿದ್ದ ಬಿಸಿಯೂಟ ನೌಕರರು ಬಸ್‌ಗಾಗಿ ಆಗ್ರಹಿಸಿ ಹೋರಾಟ ನಡೆಸಿದ ಘಟನೆ ಲಿಂಗಸ್ಗೂರಿನಲ್ಲಿ ನಡೆದಿದೆ.  ಲಿಂಗಸ್ಗೂರು

ಬದುಕಿನ ಬಂಡಿ ಸಾಗಿಸಲು ಬೆಂಗಳೂರಿಗೆ ಗುಳೆ ಹೊರಟಿರುವ ಶ್ರಮ ಜೀವಿ ವರ್ಗದ ಜನತೆ ಹಾಗೂ ಕೇವಲ ಮೂರು ಸಾವಿರ ರೂಪಾಯಿಗೆ ಸರ್ಕಾರಿ ಶಾಲೆಗಳಲ್ಲಿ ದುಡಿಯುತ್ತಿರುವ ಅಕ್ಷರ ದಾಸೋಹ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಲು ತಾಲೂಕಿನ ಬಹುತೇಕ ಹಳ್ಳಿಗಳಿಂದ ಸಂಜೆ 4 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದು ಹೊರಡಲು ಸಿದ್ದಗೊಂಡಿದ್ದರು.

ಆದರೆ 7 ಗಂಟೆಯಾದರೂ ಖಾಲಿ ಬಸ್ ಗಳು ಸಿಗದೇ ಪರದಾಡುವಂತಾಯಿತು. ಡಿಪೋ ವ್ಯವಸ್ಥಾಪಕ ರಾಹುಲ್ ಎಂ ಪೋನ್ ಮಾಡಿದರೂ ಸ್ಪಂದನೆ ನೀಡಲಿಲ್ಲ. ಬಸ್ ನಿಲ್ದಾಣದಲ್ಲಿ ಸುಮಾರು 600 ಜನ ಸಂದಣಿ ಸೇರಿತು. ಲಿಂಗಸ್ಗೂರು

ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ತ್ವರಿತವಾಗಿ ಗುರುತಿನ ಚೀಟಿ ವಿತರಿಸಿ: ತುಷಾರ್ ಗಿರಿ ನಾಥ್

ಇದನ್ನರಿತ ಸಿಐಟಿಯು ಹಾಗೂ ವಿವಿಧ ಸಂಘಟನೆಯವರು, ಇತರೇ ಪ್ರಯಾಣಿಕರು ಸೇರಿ ಬಸ್ ಡಿಪೋ ಮುಂದೆ ಹೋಗಿ ಬಸ್ ಬಿಡಲು ಕೋರಿದರು. ಬಸ್ ಬಿಡೋಕೆ ಆಗೊಲ್ಲ ನಮ್ಮ ಡಿಪೋದ ಎಲ್ಲಾ ಬಸ್ ಗಳು ಈಗಾಗಲೇ ಬೆಂಗಳೂರು ಕಡೆ ಹೊರಟಿವೆ. ಹೆಚ್ಚಿನ ಬಸ್ ಬಿಡೋಕೆ ಆಗೊಲ್ಲ ಎಂದು ಹೇಳಿದಾಗ ಘೋಷಣೆ ಕೂಗಿ ಪ್ರತಿಭಟನಾ ಧರಣಿ ಆರಂಭಿಸಲಾಯಿತು. ಡಿಪೋ ವ್ಯವಸ್ಥಾಪಕ ರಾಹುಲ್ ಎಂ ಹಾಗೂ ಸಂಘಟನೆ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆಯಾಯಿತು.

ನಂತರ ಸ್ಥಳಕ್ಕೆ ಆಗಮಿಸಿದ ಸಿಪಿಐ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ 2 ಬಸ್ ಗಳನ್ನು ಬಿಡಲು ಒಪ್ಪಿದರು. ಪ್ರಯಾಣಿಕರು ಬಸ್ ಸಮಸ್ಯೆ ಎಂದು ಕೇಳಿದರೆ ಹೋರಾಟಗಾರರು, ಪ್ರಯಾಣಿಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬಸ್ ಡಿಪೋ ವ್ಯವಸ್ಥಾಪಕ ರಾಹುಲ್ ಎಂ ಬೆದರಿಸುವ ಪ್ರಯತ್ನ ಮಾಡಿದರು. ಇದನ್ನು ಸಂಘಟಕರು ತೀವ್ರವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಸಂಚಾಲಕ ಹನೀಫ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಸಿಐಟಿಯು ಮುಖಂಡರಾದ ಅಲ್ಲಾಭಕ್ಷ, ಬಾಬಾಜಾನಿ, ಕಮಲಾಬಾಯಿ, ಜರೀನಾ ಬೇಗಂ, ಮಹಮ್ಮದ್ ಅಲಿ, ಸಿದ್ದಮ್ಮ.ಹನುಮವ್ವ.ಅಂಬಮ್ಮ, ಲಕ್ಷ್ಮೀ ದೇವಿ, ಶಕುಂತಲಾ, ಗಂಗಮ್ಮ, ಹುಸೇನ್ ಸೇರಿದಂತೆ ನೂರಾರು ಅಕ್ಷರ ದಾಸೋಹ ನೌಕರರು, ಗುಳೆ ಹೊರಟ ಪ್ರಯಾಣಿಕರು, ಹೋರಾಟಗಾರರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಶ್ರಮಜೀವಿಗಳ ಅಹೋರಾತ್ರಿ ಹೋರಾಟ | ಬಿಸಿಯೂಟ ನೌಕರರ ಮುಷ್ಕರ

Donate Janashakthi Media

Leave a Reply

Your email address will not be published. Required fields are marked *