ಇಂಡಿಗೋ ವಿಮಾನ ಸೇವೆ ರದ್ದು ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಪ್ರಯಾಣಿಕರು

ವದೆಹಲಿ: ಇಂಡಿಗೋ ವಿಮಾನ ಸೇವೆಗಳ ರದ್ದುಪಡಿಸಿದ ಪರಿಣಾಮ ಸಂಕಷ್ಟಕ್ಕೀಡಾದ ಪ್ರಯಾಣಿಕರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದೂ, ಭಾರತದ ಮುಖ್ಯ ನ್ಯಾಯಮೂರ್ತಿಯವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಹಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ, ನ್ಯಾಯಾಲಯ ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳುವುದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು DGCAಯಿಂದ ಸ್ಥಿತಿಗತಿ ವರದಿಗಳನ್ನು ಪಡೆಯಲು ನಿರ್ದೇಶಿಸುವುದು, ಹಾಗೂ ತಕ್ಷಣ ಕೇಳುವಿಕೆಗಾಗಿ ವಿಶೇಷ ಬಂಚ್ ರಚಿಸುವಂತೆ ಮನವಿ ಮಾಡಲಾಗಿದೆ.

ಈ ನಡುವೆ, DGCAಗೆ ಇಂಡಿಗೋ ಕಂಪನಿಯು ಸಂಸ್ಥಯ “ತಪ್ಪು ನಿರ್ಣಯ ಮತ್ತು ಪ್ಲ್ಯಾನಿಂಗ್ ಕೊರತೆ” ಕಾರಣದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ವಿವರಿಸಿದೆ.

ಇದನ್ನೂ ಓದಿ: ಸತೀಶ್‌ ಸೈಲ್‌ |ವೈದ್ಯಕೀಯ ಜಾಮೀನಿಗೆ ಆಕ್ಷೆಪ

ಮುಂದುವರೆದ ವಿಮಾನ ರದ್ದತಿ

ಡಿಸೆಂಬರ್ 6ರಂದೂ ಸಹ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನ ಸೇವೆಯಲ್ಲಿ ಅಡಚಣೆ ಮುಂದುವರೆದಿದೆ. ಬೆಂಗಳೂರು, ಅಹಮದಾಬಾದ್ ಸೇರಿದಂತೆ ಹಲವು ಏರ್‌ಪೋರ್ಟ್‌ಗಳಲ್ಲಿ ಫ್ಲೈಟ್‌ಗಳು ಕ್ಯಾನ್ಸಲ್‌ ಆಗಿ ಪ್ರಯಾಣಿಕರು ಪರದಾಡುವಂತಾಗಿದೆ.

ಬೆಂಗಳೂರು ಏರ್‌ಪೋರ್ಟ್ ಒಂದರಲ್ಲೇ 63 ನಿರ್ಗಮನಗಳು ಮತ್ತು 61 ಆಗಮನಗಳು ಸೇರಿ ಒಟ್ಟು 124 ಫ್ಲೈಟ್‌ಗಳು ರದ್ದಾಗಿವೆ ರದ್ದುಗೊಂಡಿವೆ.

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಂಡಿಗೋ ನಡೆಸಬೇಕಿದ್ದ 22 ದೇಶೀಯ ವಿಮಾನ ಕಾರ್ಯಾಚರಣೆಗಳಲ್ಲಿ ಅಡಚಣೆ ಉಂಟಾಗಿದ್ದು, ಒಟ್ಟು 6 ವಿಮಾನಗಳು ರದ್ದುಗೊಂಡಿವೆ (3 ಆಗಮನ ಮತ್ತು 3 ನಿರ್ಗಮನ).

ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರು ಮಾರ್ಗಗಳು ಹೆಚ್ಚು ಬಾಧಿತ ವಿಮಾನಯಾನ ಮಾರ್ಗಗಳಾಗಿದ್ದು, ಪ್ರಯಾಣಿಕರಿಗೆ ವಿಮಾನಗಳ ಸಮಯ ಮರುನಿಗಧಿ ಮತ್ತು ಹಾರಾಟದ ಮಾಹಿತಿ ಪಡೆಯಲು ಏರ್‌ಲೈನ್‌ನೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.

ಇದರ ಜೊತೆಗೆ, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ 7 ಆಗಮನ ಮತ್ತು 12 ನಿರ್ಗಮನ ವಿಮಾನಗಳು ರದ್ದುಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಿರಂತರ ಸಮಸ್ಯೆಯ ಹಿನ್ನೆಲೆಯಲ್ಲಿ, ನಾಲ್ವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಇಂಡಿಗೋದಲ್ಲಿ ಉಂಟಾದ ವ್ಯಾಪಕ ವ್ಯತ್ಯಯಗಳ ಕಾರಣಗಳನ್ನು ಪರಿಶೀಲಿಸಲು DGCA ನಿರ್ದೇಶಿಸಿದೆ.

ಸ್ಪೈಸ್‌ಜೆಟ್ ಹೆಚ್ಚುವರಿ ಸರ್ವಿಸ್‌, ಅನೇಕ ಏರ್ಪೋರ್ಟ್‌ಗಳಲ್ಲಿ ಗೊಂದಲ

ದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ರದ್ದತಿ ಹಾಗೂ ವಿಳಂಬ ಅವ್ಯವಸ್ಥೆಯಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿರುವ ನಡುವೆ, ಪರ್ಯಾಯ ವ್ಯವಸ್ಥೆಗಾಗಿ ಸ್ಪೈಸ್‌ಜೆಟ್ ಹಾಗೂ ವಿಮಾನ ನಿಯಂತ್ರಣ ಸಂಸ್ಥೆಗಳು ತುರ್ತು ಕ್ರಮಗಳನ್ನು ಕೈಗೊಂಡಿವೆ.

ಇದನ್ನೂ ನೋಡಿ: ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಪ್ರವಾಸಿಗರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ -ಮುನೀರ್ ಕಾಟಿಪಳ್ಳ Janashakthi Media

Donate Janashakthi Media

Leave a Reply

Your email address will not be published. Required fields are marked *