ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ

  • 11 ಸಾವಿರ ಮತಗಳಲ್ಲಿ 7070 ಮತಗಳನ್ನ ತನ್ನದಾಗಿಸಿಕೊಂಡ ಹೊರಟ್ಟಿ
  • ವಿಶ್ವಾಸ ಹುಸಿಯಾಗಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ

ಬೆಳಗಾವಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ.  ಸತತ ಎಂಟನೇ ಬಾರಿಗೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಹೊರಟ್ಟಿಯವರು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆದ್ದು ಬೀಗಿದ್ದು, ಕಾಂಗ್ರೆಸ್ಸಿನ ಬಸವರಾಜ್ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಿಡದಿನ್ನಿಗೆ ಮುಖಭಂಗವಾಗಿದೆ. ಅಧಿಕ ಮತಗಳು ತಿರಸ್ಕಾರದಿಂದ ಹೊರಟ್ಟಿ ಲೀಡ್ ಪ್ರಮಾಣ ಕುಸಿತವಾಗಿದೆ. ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿಗೆ ಚಲಾವಣೆಗೊಂಡಿದ್ದವು.

ಧಾರವಾಡ, ಹಾವೇರಿ, ಗದಗ  ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿ ಕ್ಷಕರ ಕ್ಷೇತ್ರದಲ್ಲಿ 11,000 ಮತಗಳಲ್ಲಿ  ಬಸವರಾಜ ಗುರಿಕಾರ- 3314 ಮತಗಳನ್ನ ಪಡೆದು ಕೊಂಡಿದ್ದು, ಹೊರಟ್ಟಿ ಅವರು  7070 ಮತಗಳನ್ನು ಪಡೆದು 3 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯ ಗಳಿಸಿದ್ದಾರೆ ಆ ಮೂಲಕ ಸತತ 8 ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಹೊರಟ್ಟಿ ವಿಜಯದ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಬೆಳಗಾವಿಯ ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ನಡೆದಿದೆ. ಬಸವರಾಜ ಹೊರಟ್ಟಿ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ 76 ರ ಹರೆಯದ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಜೆಡಿಎಸ್ ನ ಶ್ರೀಶೈಲ ಗಡದಿನ್ನಿ, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಕಣದಲ್ಲಿದ್ದರು.

‘ಈ ಬಾರಿ ದಾಖಲೆ ಗೆಲುವು ಸಾಧಿಸುವೆ’ ಎಂದು ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸುತ್ತಾ ಬಂದಿದ್ದರು.  ‘ನಾನು ನಂಬಿರುವ ಶಿಕ್ಷಕರು ನನ್ನ ಕೈಬಿಡುವುದಿಲ್ಲ. ದಬ್ಬಾಳಿಕೆ, ಹಣದ ಪ್ರಭಾವಕ್ಕೆ ಮತದಾರರು ಒಳಗಾಗಿಲ್ಲ. ಹೀಗಾಗಿ ನನ್ನ ಗೆಲುವು ನಿಶ್ಚಿತ’ ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಶಿಕ್ಷಕರು ಬಸವರಾಜ ಗುರಿಕಾರರಿಗೆ ʻಕೈʼ ಕೊಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *