ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಗುರುವಾರ ಸಂಜೆ ಬಿಜೆಪಿ 148 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರೂ ಇಬ್ಬರು ಅಭ್ಯರ್ಥಿಗಳು ತಮ್ಮ ಒಪ್ಪಿಗೆಯಿಲ್ಲದೆ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಸ್ಪರ್ಧಿಸಲು ನಿರಾಕರಿಸಿದ್ದಾರೆ ಎಂದು ಒನ್ ಇಂಡಿಯಾ ವರದಿಮಾಡಿದೆ.
ದಿವಂಗತ ಕಾಂಗ್ರೆಸ್ ಮುಖಂಡ ಸೋಮೆನ್ ಮಿತ್ರ ಅವರ ಪತ್ನಿ ಶಿಖಾ ಮಿತ್ರ ಮತ್ತು ತೃಣಮೂಲ ಶಾಸಕರಾದ ಮಾಲಾ ಸಹಾ ಅವರ ಪತಿ ತರುಣ್ ಸಹಾ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಥಿಸಲು ನಿರಾಕರಿಸಿದ್ದಾರೆ.
ಇದನ್ನೂ ಓದಿ : ಕೇಂದ್ರದ ಯೋಜನೆ ಜಾರಿಯಾಗಿವೆ: ಪತ್ರಿಕೆಗಳಲ್ಲಿ ಜಾಹೀರಾತು
ಬಿಜೆಪಿ ತರುಣ್ ಸಹಾ ಅವರನ್ನು ಕಾಶಿಪುರ-ಬೆಲ್ಗಾಚಿಯಾ ಸ್ಥಾನದಿಂದ ಮತ್ತು ಶಿಖಾ ಮಿತ್ರಾ ಅವರನ್ನು ಚೌರಿಂಗ್ಹೀ ಕ್ಷೇತ್ರದ ಅಭ್ಯರ್ಥಿಯಾಗಿ ಹೆಸರಿಸಿತ್ತು. ಆದರೆ ಮಿತ್ರಾ ಅವರ ಹೆಸರನ್ನು ಒಪ್ಪಿಗೆಯಿಲ್ಲದೆ ಘೋಷಿಸಲಾಗಿದೆ ಮತ್ತು ಅವರು ಚುನಾವಣಾ ಕಣಕ್ಕೆ ಪ್ರವೇಶಿಸುವುದಿಲ್ಲ ಎಂದು ಹೇಳಿದರು. ಕೇಸರಿ ಪಕ್ಷದ ಮುಖಂಡ ಮತ್ತು ಕುಟುಂಬ ಸ್ನೇಹಿತ ಸುವೆಂಡು ಅಧಿಕಾರಿಯೊಂದಿಗಿನ ಭೇಟಿಯ ನಂತರ ಅವರು ಸುತ್ತುವರೆದಿರುವ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ಉಹಾಪೂಹಗಳು ಕಡಿವಾಣ ಹಾಕಿದ್ದಾರೆ.
ಇದನ್ನೂ ಓದಿ : ಮೋದಿಯವರ ಬ್ರಿಗೇಡ್ “ಜೋಷ್” ಹರಡಿಸಲು ಎಡರಂಗದ ರ‍್ಯಾಲಿಗೇ ಶರಣು!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಇಲ್ಲ, ನಾನು ಎಲ್ಲಿಂದಲಾದರೂ ಸ್ಪರ್ಧಿಸುತ್ತಿಲ್ಲ. ನನ್ನ ಒಪ್ಪಿಗೆಯಿಲ್ಲದೆ ನನ್ನ ಹೆಸರನ್ನು ಘೋಷಿಸಲಾಗಿದೆ. ಅಲ್ಲದೆ ನಾನು ಬಿಜೆಪಿಗೆ ಸೇರುತ್ತಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಟ್ರೋಲಿಗೆ ಸಿಲುಕಿ ನಲುಗಿದ ಮೋದಿ ಕುರಿತ ತಮಿಳು ಹಾಡು
ಅವರ ಪುತ್ರ ರೋಹನ್ ಮಿತ್ರಾ ಅವರು ಟ್ವಿಟ್ಟರ್ ನಲ್ಲಿ ವಿಡಿಯೋ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ ಮತ್ತು “ನನ್ನ ತಾಯಿಯನ್ನು ಈ ಕಸದಿಂದ ದೂರವಿಡಿ” ಎಂದು ಹೇಳಿದರು.
Let set the record straight! Once and for all- keep my mother out of this rubbish pic.twitter.com/87QXLOcO3c
— Rohan S Mitra (@rohansmitra) March 18, 2021