ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಅಂಗವಾಗಿ ದಕ್ಷಿಣ ಕನ್ನಡದಲ್ಲಿ ‘ಜನಶಕ್ತಿ ಉತ್ಸವ’ದಲ್ಲಿ ಆಶಯ ನುಡಿಗಳನ್ನು ಆಡಿದ ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ಅವರು, ಉಗ್ರ ಹಿಂದುತ್ವವಾದ, ಬಂಡವಾಳಶಾಹಿ, ಹಾಗೂ ನವ ಉದಾರೀಕರಣದ ಭಾಗವಾಗಿ ಮನಮೋಹನ್ ಸಿಂಗ್ ನೇತೃತ್ವದ 1990 ನಂತರದ ನೀತಿಗಳಿಂದಾಗಿ ಮಾಧ್ಯಮದ ರೀತಿ ನೀತಿಗಳು ಬದಲಾಗಿದ್ದು ಆಳುವ ಶ್ರೀಮಂತವರ್ಗದ ಹಿಡಿತದಲ್ಲಿ ಮಾಧ್ಯಮ ಕಾರ್ಯನಿರ್ವಹಿಸುವ ಮಟ್ಟಕ್ಕೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಬಂದಿದೆ ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಜನಶಕ್ತಿ ಪತ್ರಿಕೆಯಂತಹ ಸ್ಥಳೀಯ ಪತ್ರಿಕೆಗಳು ಸಮಾಜವನ್ನು ಎಚ್ಚರಿಸಬೇಕಾಗಿದೆ ಎಂದರು.
ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿರುದ್ದ ಸ್ಥಳೀಯ ಪತ್ರಿಕೆಗಳು ಕೆಲಸ ಮಾಡಿದ್ದಾವೆ ಎಂಬ ಕಾರಣಕ್ಕೆ 1861 ರಿಂದ 1881 ರವರೆಗೆ ಸುಮಾರು 68 ಸ್ಥಳೀಯ ಮಾಧ್ಯಮಗಳನ್ನು ನಿಷೇಧ ಮಾಡಿದ್ದಾರೆ. 1990 ರ ನಂತರವೂ ಕೂಡ ದೇಶೀಯಾ ಹಾಗೂ ಸ್ಥಳೀಯ ಸಮಸ್ಯೆಗಳ ಹಾಗೂ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ಮಾಡದ ರೀತಿಯಲ್ಲಿ ಮಾಧ್ಯಮ ವ್ಯವಸ್ಥೆ ಬಂದಿದೆ. ಬಂಡವಾಳಶಾಹಿ ವ್ಯವಸ್ಥೆಯ ವಿರುದ್ದ ಜನಶಕ್ತಿ ಮಾಧ್ಯಮ ಹೆಚ್ಚು ಹೆಚ್ಚು ಪ್ರಸಾರದ ಮೂಲಕ ಜನಕ್ಕೆ ವಾಸ್ತವ ಮುಟ್ಟಿಸುವಂತೆ ಮಾಡಬೇಕಾಗಿದೆ.
ದೇಶದಲ್ಲಿ ನರೇಂದ್ರ ಮೋದಿ ಸರಕಾರ ಬಂದ ನಂತರದಿಂದ ಕ್ರಮೇಣವಾಗಿ ಇತಿಹಾಸದ ಪುಟಗಳನ್ನು ತಿರುಚುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚುವ ಕೆಲಸ ನಡೆಯುತ್ತಾ ಇದೆ ಇಂತಹ ಸುಳ್ಳುಗಳ ಬಗ್ಗೆ ಇತಿಹಾಸದ ಮತ್ತು ವರ್ತಮಾನದ ಬಗ್ಗೆ ವಿಚಾರಗಳನ್ನು ಮುಟ್ಟಿಸಬೇಕಾಗಿದೆ ಇದರ ಜೊತೆಗೆ ದೇಶೀಯ ಭಾಷೆ ಸಂಸ್ಕೃತಿ ಉಳಿವಿಗಾಗಿ ಪರ್ಯಾಯ ಮಾಧ್ಯಮಗಳು ಹೆಚ್ಚು ಅವಶ್ಯಕತೆ ಇದೆ ಎಂದರು.
ಮುಂಬರುವ 2023ರ ಜನಗಣತಿಯಲ್ಲಿ ಜನಸಂಖ್ಯೆಯ ಜೊತೆಯಲ್ಲಿ ಸ್ಥಳೀಯ ಭಾಷೆಯನ್ನು ಉಳಿಸಿಕೊಳ್ಳಬೇಕಾಗಿದೆ ಇಲ್ಲದೇ ಹೋದರೆ ಯಾರೋ ಬೆರಳೆಣಿಕೆಯಷ್ಟು ಮಾತಾಡುವವರು ರಾಷ್ಟ್ರಭಾಷೆಯಾಗಿ ಮಾಡಿ ಅಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸಬೇಕು ಸ್ಥಳೀಯ ಭಾಷೆ ಸ್ಥಳೀಯ ಸಾಂಸ್ಕೃತಿಕ ವೈವಿಧ್ಯಮಯತೆಯನ್ನು ಉಳಿಸಬೇಕಾಗಿದೆ ಕರ್ನಾಟಕ ಸಂಸ್ಕೃತಿಗೆ ಚಾರಿತ್ರಿಕ ಇತಿಹಾಸವಿದ್ದು ನೆನ್ನೆ ಮೊನ್ನೆ ಬಂದ ನಾಗಪುರ ಕಛೇರಿಯಿಂದ ಬಂದ ಕೇವಲ ಕೆಲವು ಮಂದಿ ಕರಾವಳಿಯ ಮೆದುಳಿಗಳಿಗೆ ವಿಷ ಬಿತ್ತಲು ಹೊರಟಿದ್ದಾರೆ ಇದರ ಬಗ್ಗೆ ಇತಿಹಾಸ ತಿಳಿಸುವ ಕೆಲಸವನ್ನು ಇಂತಹ ಪ್ರಗತಿಪರ ಮಾಧ್ಯಮಗಳು ಮಾಡಬೇಕಾಗಿದೆ ಇದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು.