ಪದ್ಮಶ್ರೀ ಡಾ. ಎಸ್.ಎಲ್.ಭೈರಪ್ಪರವರ ಕಾದಂಬರಿ ʻಪರ್ವʼ ರಂಗರೂಪಕ್ಕೆ ಸಿದ್ಧಗೊಳಿಸಿ ಮೂರು ದಿನಗಳ ವಿಶೇಷ ಪ್ರದರ್ಶನವನ್ನು ರಂಗಾಯಣ ಮೈಸೂರು ಇಲ್ಲಿ ಏರ್ಪಡಿಸಲಾಗಿದೆ.
ಈ ಬೃಹತ್ ಕಾದಂಬರಿಯ ವಸ್ತು ವಿಷಯವು ಮಹಾಭಾರತದ ಕತೆಯನ್ನು ಧರಿಸಿದೆ. ಮಹಾಭಾರತವನ್ನು ತನ್ನದೇ ವಿಶಿಷ್ಟ ಮತ್ತು ವಿಭಿನ್ನ ನೆಲೆಯಲ್ಲಿ ಚಿತ್ರಿಸಲಾಗಿದೆ. ಇಡೀ ಭಾರತೀಯ ಪರಂಪರೆಯಲ್ಲೇ ಮೌಖಿಕ ಹಾಗೂ ಅಕ್ಷರಸ್ಥ ಸಮಾಜಗಳೆರಡರಲ್ಲೂ ಹಾಸುಹೊಕ್ಕಾಗಿ ಬಂದಿರುವ ಮಹಾಭಾರತದ ಕಥೆಯಾಗಿದ್ದು, ಆ ಮೂಲಕ ಮನುಷ್ಯ ಜೀವನದ ನೂರಾರು ಬಗೆಯ ವ್ಯಕ್ತಿತ್ವಗಳ ಸಂಕೀರ್ಣತೆಯನ್ನು ಬಿಂಬಿಸುವ, ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಶೋಧ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಕೃತಿಯಾಗಿದೆ.
ನಾಟಕದ ನಿರ್ದೇಶನ ಪ್ರಕಾಶ ಬೆಳವಾಡಿ ಮಾಡಿದ್ದಾರೆ.
ಮಾರ್ಚ್ 12, 13, 14ರ ಮೂರು ದಿನಗಳು ಬೆಳಿಗ್ಗೆ 10 ಗಂಟೆಗೆ ನಾಟಕ ಆರಂಭವಾಗಲಿದೆ. ನಾಟಕದ ಅವಧಿ 7 ಗಂಟೆ 30 ನಿಮಿಷಗಳಾಗಿದೆ. ನಾಟಕದ ಮಧ್ಯೆ ಮಧ್ಯಾಹ್ನ ಊಟಕ್ಕೆ ಹಾಗೂ ಎರಡು ಬಾರಿ ಟೀ ವಿರಾಮ ವಿರುತ್ತದೆ. ಟಿಕೇಟ್ ದರ ರೂ.500 ಹಾಗೂ ರೂ.250 ಆಗಿದೆ.
How come janashakthi giving publicity for RSS -BJP ideologue S.Bairappa’s parva?What logic is this? One hand you’re projecting as opposed to rightist ideas and other hand giving publicity for his book.