ಕೇರಳ : ಸಂಸದ ಶಶಿ ತರೂರ್, ಪಕ್ಷದ ಜೊತೆಗೆ ತಮಗಿರುವ ತಾತ್ವಿಕವಾಗಿರುವ ಏಕೈಕ ಸಾರ್ವಜನಿಕ ಭಿನ್ನಾಭಿಪ್ರಾಯ ಆಪರೇಷನ್ ಸಿಂಧೂರ್ ಅಷ್ಟೆ ಆದರೆ ಸಂಸತ್ತಿನಲ್ಲಿ ಎಂದಿಗೂ ಕಾಂಗ್ರೆಸ್ ಪಕ್ಷದ ಹೇಳಿಕೆಗಳನ್ನು ಉಲ್ಲಂಘಿಸಿಲ್ಲ ಎಂದು ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಕುರಿತು ತಮ್ಮ ಬಲವಾದ ನಿಲುವಿನಲ್ಲಿ ಕ್ಷಮೆಯಾಚಿಸದೇ ನಿಂತಿರುವುದಾಗಿ ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ, ತರೂರ್ ಅವರನ್ನು ನಿರ್ಲಕ್ಷ್ಯಿಸಿದ್ದಾರೆ ಹಾಗೂ ರಾಜ್ಯ ನಾಯಕರು ಅವರನ್ನು ಬದಿಗಿಡಲು ಪದೇ ಪದೆ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳ ನಡುವೆ ಸಂಸದರು ಈ ಹೇಳಿಕೆ ಹೊರ ಬಂದಿದೆ. ಸಂಸದ ಶಶಿ ತರೂರು ಮತ್ತು ಪಕ್ಷದ ನಾಯಕರ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.
ಇದನ್ನೂ ಓದಿ : ತಮಿಳುನಾಡು ವಿಧಾನಸಭೆ| ‘VB-G RAM G’ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿದ ಸಿಎಂ ಎಂ. ಕೆ. ಸ್ಟಾಲಿನ್
ನಾನು ಒಬ್ಬ ವೀಕ್ಷಕ ಮತ್ತು ಬರಹಗಾರನಾಗಿ, ಪಹಲ್ಗಾಮ್ ಘಟನೆಯ ನಂತರ ಪತ್ರಿಕೆಯಲ್ಲಿ ಅಂಕಣ ಬರೆದಿದ್ದೇನೆ. ಅದರಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಮತ್ತು ಚಲನಶೀಲ ಪ್ರತಿಕ್ರಿಯೆ ಇರಬೇಕು ಎಂದು ತಿಳಿಸಿದ್ದಾರೆ.
ಪಾಕಿಸ್ತಾನದೊಂದಿಗಿನ ದೀರ್ಘಕಾಲದ ಸಂಘರ್ಷಕ್ಕೆ ಅದನ್ನು ಎಳೆಯಬಾರದು. ಯಾವುದೇ ಕ್ರಮವು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸುವುದಕ್ಕೆ ಸೀಮಿತವಾಗಿರಬೇಕು. ಭಾರತವು ಅಭಿವೃದ್ಧಿಯತ್ತ ಗಮನಹರಿಸಿದೆ. ಭಾರತ ಸರ್ಕಾರ ತಾನು ಶಿಫಾರಸು ಮಾಡಿದ್ದನ್ನೇ ಮಾಡಿತು. ಅದು ತಮಗೆ ಅಚ್ಚರಿ ಮೂಡಿಸಿತು ಎಂದರು.
ಜವಾಹರ್ ಲಾಲ್ ನೆಹರು ಅವರೇ ಭಾರತ ಸತ್ತರೆ ಯಾರು ಬದುಕುತ್ತಾರೆ? ಎಂಬ ಪ್ರಶ್ನೆಯನ್ನು ಎತ್ತಿದ್ದರು ಎಂದ ಅವರು, ಭಾರತ ಅಪಾಯದಲ್ಲಿದ್ದಾಗ, ಭಾರತದ ಭದ್ರತೆ ಮತ್ತು ಜಗತ್ತಿನಲ್ಲಿ ಅದರ ಸ್ಥಾನ ತೊಡಗಿಸಿಕೊಂಡಾಗ, ಭಾರತ ಮೊದಲು ಬರುತ್ತದೆ ಎಂದರು.
ಉತ್ತಮ ಭಾರತವನ್ನು ನಿರ್ಮಿಸುವ ಪ್ರಕ್ರಿಯೆಯ ಭಾಗವಾಗಿ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಆದರೆ, ರಾಷ್ಟ್ರೀಯ ಹಿತಾಸಕ್ತಿಗಳು ತೊಡಗಿಸಿಕೊಂಡಾಗ, ದೇಶದ ವಿಚಾರದಲ್ಲಿ ಮೇಲುಗೈ ಸಾಧಿಸಬೇಕು ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ತರೂರ್ ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಜೊತೆಗೆ ಆಪರೇಷನ್ ಸಿಂಧೂರವನ್ನು ಸಮರ್ಥಿಸಿಕೊಳ್ಳುವ ಮೂಲಕ ಪಕ್ಷ ಮತ್ತು ಅವರ ನಡುವಿನ ಅಂತರ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಜೊತೆಗೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದೆ ಪಾಕಿಸ್ತಾನದ ಕಾರ್ಯದ ಕುರಿತು ವಿಶ್ವದ ಮುಂದೆ ಬಿಚ್ಚಿಡಲು ಭಾರತ ರಚಿಸಿರುವ ಸರ್ವಪಕ್ಷಗಳನ್ನು ಒಳಗೊಂಡ ರಾಜತಾಂತ್ರಿಕ ನಿಯೋಗಗಳಲ್ಲಿ ಶಶಿ ತರೂರ್ಗೆ ಕೂಡ ಸ್ಥಾನವನ್ನು ನೀಡಲಾಗಿತ್ತು.
ಇದನ್ನೂ ನೋಡಿ : ಸಮುದಾಯ -50 | ಬಾದಲ್ ಸರ್ಕಾರ್ – ತೃತೀಯ ರಂಗಭೂಮಿ ಪರಿಕಲ್ಪನೆ ಮತ್ತು ಪ್ರಭಾವ Janashakthi Media
