RTO ದಾಳಿ: ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಪಾರ್ಟಿಷನ್ ಡೋರ್ ತೆರವು; 8 ಬಸ್‌ ಸೀಜ್

ಬೆಂಗಳೂರು: ಬೆಳ್ಳಂಬೆಳಗ್ಗೆ ದೇವನಹಳ್ಳಿಯ ಆರ್.ಟಿ.ಒ. ಅಧಿಕಾರಿಗಳು ಪದೇ ಪದೇ ಸ್ಲೀಪರ್ ಕೋಚ್ ಬಸ್ ಗಳ ಅಪಘಾತ ಹಿನ್ನೆಲೆಯಲ್ಲಿ  ಕಾರ್ಯಾಚರಣೆ ನಡೆಸಿದ್ದೂ, ಖಾಸಗಿ ಸ್ಲೀಪರ್ ಕೋಚ್ ಬಸ್ ಗಳ ಪಾರ್ಟಿಶನ್ ಡೋರ್ ತೆರವುಗೊಳಿಸಲಾಗಿದೆ. ದಾಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪ ರಾಣಿ ಕ್ರಾಸ್ ಬಳಿ ಬಸ್ ಗಳನ್ನು ತಡೆದು ಖಾಸಗಿ ಬಸ್ ಗಳ ಒಳಭಾಗದ ಡೋರ್ ತೆಗೆಸಿದ್ದಾರೆ.

ಬಸ್ ಚಾಲಕ ಮತ್ತು ಪ್ರಯಾಣಿಕರ ನಡುವಿನ ಡೋರ್ ತೆರವುಗೊಳಿಸಲಾಗಿದೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ 8 ಸ್ಲೀಪರ್ ಕೋಚ್ ಬಸ್ ಗಳ ಡೋರ್ ಬಿಚ್ಚಿಸಿ ಸೀಜ್ ಮಾಡಿದ್ದಾರೆ. ದೇವನಹಳ್ಳಿ ಆರ್.ಟಿ.ಒ. ಸುಧೀರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ನೋಡಿ: ಸಂವಿಧಾನ ಮೌಲ್ಯಗಳ ಪ್ರತಿಧ್ವನಿ: ಸಂವಿಧಾನ ಗೀತೆ | ರವಿ ಮರಿಯಪ್ಪ – ಗುರುರಾಜ ದೇಸಾಯಿ ಮಾತಯಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *