ಬೆಂಗಳೂರು ಫೆ 02 : ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ನಿರ್ಣಯದ ಪರ 10 ಜನಕ್ಕಿಂತ ಹೆಚ್ಚು ಸದಸ್ಯರು ನಿಂತ ಹಿನ್ನೆಲೆ. ಸಭಾಪತಿಗಳ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಅನುಮೋದನೆ ಸಿಕ್ಕಂತಾಗಿದೆ.
ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಎದ್ದು ನಿಂತ ನಿರ್ಣಯವನ್ನು ಬೆಂಬಲಿಸಿದರು. ನಿರ್ಣಯ ಚರ್ಚೆಗೆ ಅಂಗೀಕಾರವಾಗಿದ್ದು, ಸೂಕ್ತ ಚರ್ಚೆಗಾಗಿ ದಿನಾಂಕ ಮತ್ತು ಸಮಯವನ್ನು ನಿಗದಿ ಪಡಿಸುವುದಾಗಿ ಸಭಾಪತಿ ತಿಳಿಸಿದ್ದಾರೆ. ಅವಿಶ್ವಾಸ ನಿರ್ಣಯ ದಿನಾಂಕವನ್ನ 5 ದಿನದೊಳಗೆ ಯಾವಾಗ ಚರ್ಚೆಗೆ ತೆಗೆದುಕೊಳ್ಳುತ್ತೇ ಎಂದು ತಿಳಿಸಬೇಕು ಎಂದು ಆಯನೂರು ಮಂಜುನಾಥ್ ಪಟ್ಟು ಹಿಡಿದರು. ಅಜೆಂಡಾದ ಪ್ರಕಾರ ಯಾವ ದಿನ ಬರುತ್ತೆ ಅನೋದು ಇರುತ್ತೆ. ಈ ಸಭಾಪತಿ ಸ್ಥಾನದಲ್ಲಿ ಇರುವಾಗಲೇ ಹೇಳುತ್ತಾರೆ ಎಂದು ಹೆಚ್ ವಿಶ್ವನಾಥ್ ಆಯನೂರರನ್ನು ಸಮಾಧಾನ ಮಾಡಿದರು.
ನಿಮಗೆ ಅರ್ಜೆಟ್ ಇರ್ಬಹುದು ನನಗೆ ಇಲ್ಲ ಎಂದ ಪ್ರತಾಪ್ ಚಂದ್ರ ಶೆಟ್ಟಿ ಕೊಂಚ ಸಿಡಿಮಿಡಿಗೊಂಡರು. ನನಗೆ ಗ್ರಾಮರ್ ಕಲಿಸೋಕೆ ಬರ್ಬೇಡಿ ಅದರ ಪರಿಣಾಮ ನೀವೆ ಎದರಿಸುತ್ತಿರಾ ಎಂದು ಆಯನೂರು ಮಂಜುನಾಥ್ ಗೆ ಮಾತಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಟಾಂಗ್ ನೀಡಿದರು. ಕಲಾಪವನ್ನು ಬೆಳಗ್ಗೆ 11 ಕ್ಕೆ ಮುಂದೂಡಿದರು.
ಇದನ್ನೂ ಓದಿ :ವಿಧಾನ ಪರಿಷತ್ ಅಹಿತಕರ ಘಟನೆ : ಸದನ ಸಮಿತಿಯಿಂದ 84 ಪುಟಗಳ ಮಧ್ಯಂತರ ವರದಿ ಸಲ್ಲಿಕೆ
ಕಳೆದ ಜನವರಿ 18ರಂದು ಬಿಜೆಪಿ ಸದಸ್ಯರಾದ ಆಯನೂರು ಮಂಜುನಾಥ್ ಡಾ ತಳವಾರ ಸಾಬಣ್ಣ ಅರುಣ್ ಶಹಾಪುರ ಎಸ್ ವಿ ಸಂಕನೂರು ಮಹಾಂತೇಶ್ ಕವಟಗಿಮಠ, ನಿರಾಣಿ ಹನುಮಂತ ರುದ್ರಪ್ಪ, ಹಾಗೂ ಇತರೆ ಪರಿಷತ್ ಬಿಜೆಪಿ ಸದಸ್ಯರು ನಿಯಮ 165 ಹಾಗೂ ಭಾರತ ಸಂವಿಧಾನದ 183 ನೇ ಅನುಚ್ಛೇದ ಸಿ ಖಂಡದ ಡಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕು ಎಂದು ನಿರ್ಣಯದಲ್ಲಿ ತಿಳಿಸಿದ್ದರು.
ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ರಾಜಿನಾಮೆ ನೀಡಬಹುದು ಎಂದು ಕೊಂಡಿದ್ದೆವು, ಆದರೆ ಅವರು ನೀಡಲಿಲ್ಲ. ಈಗ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಇನ್ನೆರಡು ದಿನದಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.