ಪರಿಷತ್‌ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ: ಕಾರ್ಯದರ್ಶಿಯಿಂದಲೇ ಅಂಗೀಕಾರ

ಬೆಂಗಳೂರು: ಬಿಜೆಪಿ ಪಕ್ಷವನ್ನು ಸೇರುವ ಉದ್ದೇಶದಿಂದಾಗಿ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ನೆನ್ನೆ(ಮೇ 16) ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ನಿಯಮಗಳ ಪ್ರಕಾರ ರಾಜೀನಾಮೆ ಪತ್ರವನ್ನು ಉಪಸಭಾಪತಿ ಅವರಿಗೆ ಸಲ್ಲಿಸಬೇಕು. ಆದರೆ, ಸದ್ಯ ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನವು ಖಾಲಿ ಇರುವುದರಿಂದ ವಿಧಾನ ಪರಿಷತ್ತ್‌ ಕಾರ್ಯದರ್ಶಿಗಳಿಗೆ ರಾಜೀನಾಮೆಯನ್ನು ಸಲ್ಲಿಸಲಾಗಿದೆ.

ಇದನ್ನು ಓದಿ: ಮಾದಕ ದ್ರವ್ಯದ ವ್ಯಸನದ ಹಾಗೆ ಇಂದು ರಾಜಕೀಯವಿದೆ: ಬಸವರಾಜ ಹೊರಟ್ಟಿ

ಅದರಂತೆ, ವಿಧಾನ ಪರಿಷತ್‌ ಕಾರ್ಯದರ್ಶಿ ಕೆ.ಆರ್.‌ ಮಹಾಲಕ್ಷ್ಮೀ ಅವರು ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ.

ನಿಯಮವಳಿಗಳ ಪ್ರಕಾರ, ಸಭಾಪತಿಯವರು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೂ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಉಪಸಭಾಪತಿಗಳಿಗೆ ಮಾತ್ರ ರಾಜೀನಾಮೆಯನ್ನು ಸಲ್ಲಿಸಬೇಕಾಗಿತ್ತು. ಆದರೆ, ಉಪಸಭಾಪತಿ ಸ್ಥಾನ ಖಾಲಿ ಇದ್ದು, ಅವರ ಬದಲಾಗಿ ಪರಿಷತ್ತಿನ ಕಾರ್ಯದರ್ಶಿ ಅಂಗೀಕಾರ ಮಾಡಬಹುದು ಎನ್ನಲಾಗಿದೆ.

ಹೊರಟ್ಟಿ ಅವರ ರಾಜೀನಾಮೆ ಉಪಸಭಾಪತಿಯ ಮೂಲಕವೇ ರಾಜ್ಯಪಾಲರಿಗೆ ರವಾನೆಯಾಗಬೇಕು. ತದನಂತರ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಲಿದ್ದಾರೆ.

ಕರ್ನಾಟಕ ವಿಧಾನ ಪರಿಷತ್‌ ಕಾರ್ಯದರ್ಶಿ ಪ್ರಕಟಣೆಯಂತೆ  ಸಭಾಪತಿ ಸ್ಥಾನ ಖಾಲಿಯಾಗಿದ್ದು, ಆ ಸ್ಥಾನಕ್ಕೆ ಹೊಸಬರು ಆಯ್ಕೆಯಾಗುವವರೆಗೂ ಸ್ಥಾನ ಖಾಲಿಯಾಗಿರುತ್ತದೆ. ಸದ್ಯ ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಉಪ ಸಭಾಪತಿ ಎರಡೂ ಸ್ಥಾನಗಳೂ ಖಾಲಿ ಇವೆ.

Donate Janashakthi Media

Leave a Reply

Your email address will not be published. Required fields are marked *