ಗದಗ: ಮಗನ ಹೆಸರಿನಲ್ಲಿ ಕಡು ಬಡವರಿಗೆ ಉಚಿತವಾಗಿ ಸೈಟ್ ನೀಡಲು ತಂದೆ ತಾಯಿ ಮುಂದಾಗಿದ್ದಾರೆ. ಮೃತ ಪುತ್ರನ ಹೆಸರು ಅಜರಾಮರವಾಗಿ ಉಳಿಯಲೆಂದು ತಂದೆ ತಾಯಿ ಆಸೆಯಾಗಿದೆ. ಹೌದು ಇಂತಹ ಅಪರೂಪದ ತಂದೆ ತಾಯಿ ಇರೋದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ. ಗ್ರಾಮದ ದ್ಯಾಮಣ್ಣ ಹಾಗೂ ಜ್ಯೋತಿ ದಂಪತಿಗೆ ಜೀವನ್ ಎಂಬ ಮಗ ಇದ್ದ. ಆದ್ರೆ ಕಳೆದ ಮೂರು ವರ್ಷದ ಹಿಂದೆ ಜೀವನ್ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ. ಇರುವ ಒಬ್ಬನೇ ಮಗನ ಕಳೆದುಕೊಂಡ ದ್ಯಾಮಣ್ಣ ಜ್ಯೋತಿ ದಂಪತಿ ಕಣ್ಣೀರು ಹಾಕುತ್ತಿದ್ದರು. ಇದೀಗ ಮಗ ಮೃತಪಟ್ಟು 3 ವರ್ಷ ಕಳೆದಿದೆ. ಇದೀಗ ಆತನ ಹೆಸರಲ್ಲಿ ಏನಾದರೂ ಉತ್ತಮ ಕಾರ್ಯ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಅದರಂತೆ, ಬಡವರಿಗೆ ಉಚಿತವಾಗಿ ನಿವೇಶನ ನೀಡಲು ದ್ಯಾಮಣ್ಣ ಹಾಗೂ ಜ್ಯೋತಿ ನಿರ್ಧಾರ ಮಾಡಿದ್ದಾರೆ.
40 ಫಲಾನುಭವಿಗಳಿ ಸೈಟ್ ಹಂಚಿಕೆ : ಸೊರಣಗಿ ಗ್ರಾಮದಲ್ಲಿರುವ ಅಂಗವಿಕಲರಿಗೆ, ಗಂಡ ತೀರಿಕೊಂಡ ಹೆಣ್ಣುಮಕ್ಕಳನ್ನು, ಬಡವರನ್ನು ಆಯ್ಕೆ ಮಾಡಿ ಜೀವನ್ ಹೆಸರಲ್ಲಿ 40 ಫಲಾನುಭವಿಗಳಿಗೆ ಸೈಟ್ ನೀಡಲು ತಿರ್ಮಾನಿಸಿದ್ದಾರೆ. ದ್ಯಾಮಣ್ಣ ತನ್ನ ಹೆಸರಿನಲ್ಲಿ ಇದ್ದ ಸರ್ವೇ ನಂಬರ್ 224/1ಅ 2 ಎಕರೆ ಜಾಗದಲ್ಲಿ ಸ್ವಲ್ಪ ತಮಗೆ ಇಟ್ಟುಕೊಂಡು ಅದರಲ್ಲಿ 50 ಗುಂಟೆ ಸೈಜ್ 18*30 540 ಪೂಟ ವಿಸ್ತೀರ್ಣ ದಲ್ಲಿ ಸೂರಣಗಿ ಗ್ರಾಮದಲ್ಲಿ 40 ಜನ ಕಡು ಬಡವರಿಗೆ, 3 ಅಂಗವಿಕಲರಿಗೆ 1 ಮಹಿಳಾ ಸಂಘ,1 ಯುವಕ ಮಂಡಳ,1 ಗ್ರಾಮ ಪಂಚಾಯತಿ 1 ಅಂಗನವಾಡಿ, ದೇವಸ್ಥಾನ ಹೀಗೆ ದಾನ ರೂಪವಾಗಿ ತಮ್ಮ ಮಗನ 3ನೇ ವರ್ಷದ ಪುಣ್ಯ ತಿಥಿಗೆ ಕೊಡಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ದೀಪಕ್ – ಹಲವರ ಬಾಳಿಗೆ ಬೆಳಕು
3 ವರ್ಷದ ಹಿಂದೆ ತೀರಿಕೊಂಡ ಮಗ : ಹುಟ್ಟಿದ ಕೆಲವೇ ತಿಂಗಳು ಕಾಲ ಅರಾಂ ಆಗಿ ಇದ್ದ ಜೀವನ್, ದೊಡ್ಡವನಾಗುತ್ತ ಇರುವಾಗ ಅನಾರೋಗ್ಯ ಬಹಳ ಕಾಡುತ್ತ ಬಂದೀತು. ಹೊಟ್ಟೆಯಲ್ಲಿ ಗಂಟು ಇದ್ದ ಕಾರಣ ಹಲವು ಆಸ್ಪತ್ರೆಗಳಿಗೆ ತೋರಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬರು ಬರುತ್ತಾ ಆ ಗಂಟು ತಾನೇ ಕರಗುತ್ತಾ ಹೊರಟು ಹೋಯಿತು. ಮಗು ಇನ್ನೇನು ಹುಷಾರಾಗಿದ್ದಾನೆ ಎನ್ನುವಷ್ಟರಲ್ಲಿ, ಆಟ ಆಡುತ್ತಿದ್ದಾಗ ಬಿದ್ದು ಬ್ರೇನ್ ಡ್ಯಾಮೇಜ್ ಆಯ್ತ. ಇದರಿಂದ ವಿಚಲಿತ ಗೊಂಡ ದಂಪತಿ ಮಗನ ಆಸ್ಪತ್ರೆ ಖರ್ಚಿಗಾಗಿ 3 ಎಕರೆಗೂ ಅಧಿಕ ಜಮೀನು ಮಾರಾಟ ಮಾಡಿದ್ದರು. 15 ರಿಂದ 20 ಲಕ್ಷದವರೆಗೂ ಹಣ ಖರ್ಚು ಆಯ್ತು ಅರಾಮ್ ಆಗಲೇ ಇಲ್ಲ. ಮನೆಯಲ್ಲಿ ಇದ್ದಾಗ ಮೆದುಳು ಜ್ವರ ಬಂದು ಮಗ ಕಳೆದ 3 ವರ್ಷದ ಹಿಂದೆ ಪ್ರಾಣ ಬಿಟ್ಟಿದಿದ್ದಾನೆ ಎಂದು ದ್ಯಾಮಣ್ಣ ಕಣ್ಣೀರು ಹಾಕಿದರು.
ಹೀಗೆ ಜೀವನ ಪೂರ್ತಿ ಜೀವನ್ನ ಜೀವನ ಕಷ್ಟದಲ್ಲಿ ಕಳೆದು ಹೋಯಿತು. ಮಗನನ್ನು ಮಲಗಿದ್ದಲ್ಲಿ ತಂದೆ ತಾಯಿಗಳು ಜೋಪಾನ ಮಾಡಿದರು. ಆದ್ರೆ ಜೀವನ್ ಮಾತ್ರ ಆಸ್ಪತ್ರೆಯಿಂದ ಮನೆಗೆ ಜೀವಂತವಾಗಿ ಬರಲಲ್ಲಿ. ಹೀಗಾಗಿ ಆತನ ಹೆಸರು ಅಮರವಾಗಿಸಲು ದಂಪತಿ ನಿರ್ಧರಿಸಿದ್ದಾರೆ.
ಜಾಗವನ್ನು ತಮ್ಮ ಸ್ವಂತ ನಿರ್ಧಾರ ದಿಂದ ಹಂಚದೇ ಊರಿನ ಪ್ರಮುಖರು ಸೇರಿಕೊಂಡು ಎಲ್ಲಾ ಜಾತಿ ಧರ್ಮ ಮರೆತು ಮನೆ ಇಲ್ಲದ ಕಡು ಬಡವರ ಆಯ್ಕೆ ಮಾಡಿ ಕೊಟ್ಟರೆ ಅವರಿಗೆ ನಿವೇಶನ ಕೊಡುತ್ತೇವೆ. ಅದು ಗ್ರಾಮದ ಜನರಿಗೆ ಮಾತ್ರ ಅನ್ನುತ್ತಾರೆ ದ್ಯಾಮಣ್ಣ. ಸದ್ಯ ತಮ್ಮ ಸ್ವಂತ ಜಮೀನನಲ್ಲಿ 40 ಸೈಟ್ ಗಳನ್ನು ರಡಿಮಾಡಿ ಕಡು ಬಡವರಿಗೆ ಉಚಿತವಾಗಿ ನೀಡುವ ಕೆಲಸ ಮಾಡುತ್ತಿರುವುದು ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.