ಜನನ ಪ್ರಮಾಣ ಪತ್ರದಲ್ಲಿ ಪೋಷಕರು ಎಂದು ನಮೂದಿಸಬಹುದು: ಕೇರಳ ಹೈಕೋರ್ಟ್

Please follow and like us:
ತಿರುವನಂತಪುರಂ: ಲಿಂಗತ್ವ ಅಲ್ಪಸಂಖ್ಯಾತ ದಂಪತಿ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಮ್ಮನ್ನು ತಂದೆ ಮತ್ತು ತಾಯಿ ಎಂದು ನಮೂದಿಸುವ ಬದಲಿಗೆ ಪೋಷಕರು ಎಂದು ನಮೂದಿಸಬಹುದು ಎಂದು ಜೂನ್‌ 2 ಸೋಮವಾರದಂದು ಕೇರಳ ಹೈಕೋರ್ಟ್ ಆದೇಶ ನೀಡಿದ್ದೂ, ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ತೀರ್ಪು ಬಂದಿದೆ.

2023ರ ಫೆಬ್ರವರಿಯಲ್ಲಿ ಮಗುವಿಗೆ ಜನ್ಮ ನೀಡಿದ ಕೇರಳದ ಜಹಾದ್(25) ಮತ್ತು ಜಿಯಾ(24) ದಂಪತಿಗೆ ಕೇರಳ ಹೈಕೋರ್ಟ್ ನಿರ್ಧಾರದಿಂದ ಸಮಾಧಾನ ತಂದಿದೆ.

ಕೋಯಿಕ್ಕೋಡ್ ನಗರ ಪಾಲಿಕೆ ನೀಡಿದ ಜನನ ಪ್ರಮಾಣ ಪತ್ರದಲ್ಲಿ ಮಗುವಿಗೆ ಜನ್ಮ ನೀಡಿದ ಜಹಾದ್ ಅವರನ್ನು ತಾಯಿ ಎಂದು, ಆಕೆಯ ಸಂಗಾತಿ ಜಿಯಾ ಅವರನ್ನು ತಂದೆ ಎಂದು ಉಲ್ಲೇಖಿಸಲಾಗಿತ್ತು. ನಾವಿಬ್ಬರೂ ಲಿಂಗತ್ವ ಅಲ್ಪಸಂಖ್ಯಾತರಾಗಿರುವುದರಿಂದ ತಮ್ಮನ್ನು ಪೋಷಕರು ಎಂದು ಉಲ್ಲೇಖಿಸುವಂತೆ ಅವರು ಮನವಿ ಮಾಡಿದ್ದರು.

ಇದನ್ನೂ ಓದಿ: ಕೊಪ್ಪಳ| ಎರಡು ಕುಟುಂಬಗಳ ನಡುವೆ ಜಗಳ; ಓರ್ವ ಕೊಲೆ

ಕೇರಳದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೊದಲ ವಕೀಲೆಯಾಗಿರುವ ಪದ್ಮ ಲಕ್ಷ್ಮಿ ಅವರು ಕೇರಳ ಹೈಕೋರ್ಟ್ ನಲ್ಲಿ ಈ ಲಿಂಗತ್ವ ಅಲ್ಪಸಂಖ್ಯಾತ ದಂಪತಿಯ ಪರವಾಗಿ ವಾದ ಮಂಡಿಸಿದ್ದರು.

ಈ ದಂಪತಿಯ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಅವರು ಇಬ್ಬರನ್ನೂ ಪೋಷಕರು ಎಂದು ಉಲ್ಲೇಖಿಸುವ ಜನನ ಪ್ರಮಾಣ ಪತ್ರ ನೀಡುವಂತೆ ಕೋಯಿಕ್ಕೋಡ್ ನಗರ ಪಾಲಿಕೆಗೆ ನಿರ್ದೇಶನ ನೀಡಿದೆ.

ಕೋಯಿಕ್ಕೋಡ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 2023ರ ಫೆಬ್ರವರಿ 8 ರಂದು ಜಹಾದ್ ಮಗುವಿಗೆ ಜನ್ಮ ನೀಡಿದ್ದರು. ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಜನ್ಮ ನೀಡಿದ ಮೊದಲ ಪ್ರಕರಣ ಇದು ಎಂದು ಹೇಳಲಾಗಿತ್ತು.

ಇದನ್ನೂ ನೋಡಿ: ಡಾ. ಎಸ್.‌ ಬಾಲಚಂದ್ರರಾವ್‌ ಜೊತೆಗಿನ ಒಡನಾಟ ಹಂಚಿಕೊಂಡ ಜಿ.ಆರ್‌ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *