ಪ್ಯಾರಾಲಿಂಪಿಕ್ಸ್‌: ಶೂಟರ್‌ ಸಿಂಗ್‌ರಾಜ್‌ಗೆ ಒಲಿದ ಕಂಚಿನ ಪದಕ

ಟೋಕಿಯೋ: ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪುರುಷರ 10 ಮೀಟರ್‌ ಏರ್‌ ಪಿಸ್ತೂಸ್‌ ಎಸ್‌ಹೆಚ್‌1 ಫೈನಲ್‌ ಸ್ಪರ್ಧೆಯಲ್ಲಿ ಸಿಂಗ್‌ರಾಜ್‌ ಅಧಾನ ಕಂಚಿನ ಪದಕಕ್ಕೆ ತೃಪ್ತಿಪಡೆದುಕೊಂಡರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇದುವರೆಗೆ ಭಾರತವು 8 ಪದಕಗಳನ್ನು ಗಳಿಸಿಕೊಂಡಿದೆ.

ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದಿದ್ದ ಸಿಂಗ್‌ರಾಜ್ ಅಧಾನ ಫೈನಲ್‌ನಲ್ಲಿ ಮೊದಲ ಹಂತದ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರುವ ಮೂಲಕ ಉತ್ತಮ ಆರಂಭ ಮಾಡಿದ್ದರು.

ಇದನ್ನು ಓದಿ: ಪ್ಯಾರಾಲಿಂಪಿಕ್ಸ್‌: ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್

39 ವರ್ಷದ ಸಿಂಗ್‌ರಾಜ್‌ ಅಧಾನ ಒಟ್ಟು 216.8 ಅಂಕಗಳನ್ನು ಕಲೆಹಾಕುವುದರೊಂದಿಗೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಪುರುಷರ 10 ಮೀಟರ್‌ ಏರ್‌ ಪಿಸ್ತೂಸ್‌ ಎಸ್‌ಹೆಚ್‌1 ಫೈನಲ್‌ಗೆ ಮನೀಶ್ ನರ್ವಾಲ್ ಹಾಗೂ ಸಿಂಗ್‌ರಾಜ್‌ ಅರ್ಹತೆ ಪಡೆದುಕೊಂಡಿದ್ದರು.

ಸಿಂಗ್‌ರಾಜ್‌ ನಿಖರವಾಗಿ ಶೂಟ್‌ ಮಾಡುವ ಮೂಲಕ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿ ಕಂಚಿನ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. ಮನೀಶ್‌ ನರ್ವಾಲ್‌ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮನೀಶ್ 7ನೇ ಸ್ಥಾನ ಪಡೆದು, ಎರಡನೇ ಸುತ್ತಿನಲ್ಲಿಯೇ ಸ್ಪರ್ಧೆಯಿಂದ ಹೊರಬಿದ್ದರು.

ಪ್ಯಾರಾಲಿಂಪಿಕ್ಸ್ ನ ಪಂದ್ಯಾವಳಿಯು 8ನೇ ದಿನಕ್ಕೆ ತಲುಪಿದ್ದು, ಭಾನುವಾರ ಭಾರತ ಎರಡು ಪದಕಗಳನ್ನು ಜಯಿಸಿತ್ತು. ಸೋಮವಾರ ಎರಡು ಚಿನ್ನ ಸಹಿತ ಒಟ್ಟು 5 ಪದಕಗಳನ್ನು ಪಡೆದುಕೊಂಡಿತ್ತು. ಇಂದು ಸಿಂಗ್‌ರಾಜ್‌ ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *