ಗುರುರಾಜ ದೇಸಾಯಿ
ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ಎದುರು ಸೆಣಸಾಡಿದ ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ, ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಾಕೌಟ್ ಹಂತಕ್ಕೇರಿದ ಸಾಧನೆ ಮಾಡಿದೆ.
ಕೂಲಿಕಾರನ ಮಗಳಾಗಿರುವ ರಾಣಿ ರಾಂಪಾಲ್ ಹಾಕಿ ಸೇರಿದ್ದು, ನಾಯಕಿಯಾಗಿ ಬೆಳದ ಕಣ್ಣೀರನ ಕಥೆಯನ್ನು ಹ್ಯೂಮನ್ಸ್ ಆಫ್ ಬಾಂಬೆ ಎಂಬ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ನೋವಿನ ಕಥೆ ಏನು ನೋಡೋಣ ಬನ್ನಿ.
ರಾಣಿ ರಾಂಪಾಲ್ ಹುಟ್ಟಿದ್ದು ಡಿಸೆಂಬರ್ 04, 1994 ರಲ್ಲಿ, ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ಮಾರ್ಕಂಡದಲ್ಲಿ ಜನಿಸಿದರು, ಇವರು ಬಡ ಕುಟುಂಬದ ಹಿನ್ನಲೆಯನ್ನು ಹೊಂದ್ದಿದ್ದಾರೆ. ಅವರ ತಂದೆ ಬಂಡಿ ಎಳೆಯುವ ಕೂಲಿಕಾರ ಕೆಲಸ ಮಾಡುತ್ತಿದ್ದಾರೆ. ತಾಯಿ ಮನೆ ಮನೆಗಳಿಗೆ ಹೋಗಿ ಮುಸುರಿ ತಿಕ್ಕಿವ ಮನೆಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. “ಮುರಿದ ಹಾಕಿ ಸ್ಟಿಕ್” ನೊಂದಿಗೆ ಹೇಗೆ ಅಭ್ಯಾಸ ಮಾಡಲು ಪ್ರಾರಂಭಿಸಿದರು ಎಂಬುದರ ಕುರಿತು ಅದರಲ್ಲಿ ರಾಣಿಯವರು ವಿವಿರಗಳನ್ನು ಹಂಚಿಕೊಂಡಿದ್ದಾರೆ.
ಜೀವನ ಸಾಗಿಸುವುದೆ ಕಷ್ಟವಾಗಿತ್ತು, ನನ್ನ ಬದುಕು ಮುಗಿದೇಹೋಯಿತು ಎಂದು ನಾನು ನಿರ್ಧರಿಸಿ ಬಿಟ್ಟಿದ್ದೆ, ನಮ್ಮ ಮನೆಯಲ್ಲಿ ವಿದ್ಯುತ್ ಇರಲಿಲ್ಲ, ವಿಪರೀತ ಸೊಳ್ಳೆಗಳು, ದಿನಂಪ್ರತಿ ಸೊಳ್ಳೆ ಕಚ್ಚಿಸಿಕೊಂಡೆ ಮಲಗುತ್ತಿದ್ದೆವು. ಎರಡು ಹೊತ್ತಿನ ಊಟಕ್ಕು ನಮಗೆ ಕಷ್ಟ ಆಗುತ್ತಿತ್ತು. ನಮ್ಮ ಮನೆ ಪ್ರವಾಹಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡೆವು ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗ ನಮ್ಮ ಮನೆಯ ಮುಂಭಾಗ ಹಾಕಿ ಅಕಾಡೆಮಿ ಇತ್ತು. ಅಲ್ಲಿ ದಿನಂಪ್ರತಿ ನಾಲ್ಕಾರು ಗಂಟೆಗಳ ಕಾಲ ಆಟ ನೋಡಲು ಸಮಯ ಕಳೆಯುತ್ತಿದೆ. ನನಗೂ ಕಲಸಿ ಎಂದು ಹಾಕಿ ತರಬೇತುದಾರರನ್ನು ನಾನು ಗೋಗರೆಯುತ್ತಿದ್ದೆ, ಆದರೆ ನನ್ನ ಬೇಡಿಕೆಯನ್ನು ಅವರು ತಿರಸ್ಕಾರ ಮಾಡುತ್ತಿದ್ದರು.
ಈ ಘಟನೆ ರಾಣಿ ರಾಂಪಾಲ್ ರವರಲ್ಲಿ ಛಲ ಹುಟ್ಟಿಸುತ್ತದೆ. ಅಕಾಡೆಮಿಯಲ್ಲಿ ಬಿದ್ದಿದ್ದ ಮುರಿದ ಸ್ಟಿಕ್ ನ್ನು ಹಿಡಿದು ಆಟ ಕಲಿಯಲು ಆರಂಭಿಸುತ್ತಾರೆ. ನನ್ನನ್ನು ನೋಡಿ ನಕ್ಕವರೆ ಜಾಸ್ತಿ. ಆಡುವಷ್ಟು, ಓಡುವಷ್ಟು ಶಕ್ತಿ ನಿನ್ನಲ್ಲಿಲ್ಲ’ ಎಂದು ಕೋಚ್ ಕಿಚಾಯಿಸುತ್ತಿದ್ದರು. ಅಪೌಷ್ಟಿಕತೆಯಿಂದ ಬಳಲುತ್ತಿದ್ದದ್ದರಿಂದ ನಿನಗೆ ತರಬೇತಿ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕಾರ ಮಾಡುತ್ತಲೆ ಇರುತ್ತಾರೆ. ಅಕಾಡೆಮಿಯಲ್ಲಿ ಬೇರೆಯವರು ಸಮವಸ್ತ್ರ ಹಾಕಿ ಆಡುತ್ತಿದ್ದರು, ಆದರೆ ರಾಣಿಯವರು ತಮ್ಮ ಬಳಿ ಇದ್ದ ನಾನು ಸಲ್ವಾರ್ ಕಮೀಜ್‌ನಲ್ಲಿ ಓಡುತ್ತಾರೆ, ಆಟದಲ್ಲಿನ ಅವರ ದೃಢ ವಿಶ್ವಾಸ, ಸಂಕಲ್ಪ ಹೊಂದದ್ದ ಕಾರಣ ಕೊನೆಗೂ ತರಬೇತುದಾರನನ್ನೂ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾಳೆ.
ಇದನ್ನೂ ಓದಿ : ಟೋಕಿಯೋ ಒಲಿಂಪಿಕ್ಸ್ : ಸೇಮೀಸ್ ಗೆ ಲಗ್ಗೆ ಇಟ್ಟ ಭಾರತ ಮಹಿಳಾ ಹಾಕಿ ತಂಡ
ಹಾಕಿ ಪ್ರಾಕ್ಟೀಸ್ ಆರಂಬವಾಗುವುದು ಬೆಳಗಿನ ಜಾವ. ಆದರೆ ಇವರ ಬಳಿ ಗಡಿಯಾರ ಇರಲಿಲ್ಲ. ಇವರ ತಾಯಿ ಇವರನ್ನು ಬೇಗ ಎಬ್ಬಿಸಿ ಆಟಕ್ಕೆ ಸನ್ನದ್ದು ಗೊಳಿಸುತ್ತಾರೆ. ಈ ಚಿಕ್ಕ ಉಡುಗೆಯಲ್ಲಿ ಮಗಳ ಆಟವನ್ನು ನೋಡಿದವರು ಏನೆಂದುಕೊಳ್ಳುತ್ತಾರೆ ಎಂದು ಭಯದಿಂದಲೆ ರಾಣಿಯವರಿಗೆ ಅವರ ಕುಟುಂಬ ಬೆಂಬಲಕ್ಕೆ ನಿಲ್ಲುತ್ತದೆ. ಹೀಗೆ ರಾಣಿಯವರು ಹಾಕಿಯಲ್ಲಿ ಬೆಳವಣಿಗೆ ಆರಂಭಿಸುತ್ತಾರೆ.
“ಅಕಾಡೆಮಿಯಲ್ಲಿ, ಪ್ರತಿಯೊಬ್ಬ ಆಟಗಾರನೂ 500 ಮಿಲಿ ಹಾಲನ್ನು ತರುವುದು ಕಡ್ಡಾಯವಾಗಿತ್ತು. ಆದರೆ ರಾಣಿಯವರ ಕುಟುಂಬವು ಕೇವಲ 200 ಮಿಲಿ ಮೌಲ್ಯದ ಹಾಲನ್ನು ಮಾತ್ರ ಖರೀದಿಸಬಲ್ಲ ಸಾಮರ್ತ್ಯ ಉಳ್ಳವರಾಗಿದ್ದರು. ಹಾಗಾಗಿ ರಾಣಿಯವರು ಹಾಲನ್ನು ನೀರಿನೊಂದಿಗೆ ಬೆರೆಸಿ ಕುಡಿಯಲು ಆರಂಭಿಸುತ್ತಾರೆ. ರಾಣಿಯವರ ಬಡತನದ ಕಷ್ಟ ಇವರ ಕೋಚ್ ಗೆ ಗೊತ್ತಾಗುತ್ತದೆ. ಅವರೆ ಇವರಿಗೆ ಪೌಷ್ಟಿಕ ಆಹಾರವನ್ನು ನೀಡುವ ವ್ಯವಸ್ಥೆಯನ್ನು ಮಾಡುತ್ತಾರೆ. ಇದನ್ನೆಲ್ಲ ಖುಷಿಯಿಂದಲೇ ಸ್ವಿಕರಿಸಿದ ರಾಣಿಯವರು ಒಂದಿಲ್ಲೊಂದು ದಿನ ನಾನು ಸಾಧನೆ ಮಾಡುತ್ತೇನೆ ಎಂದು ಕುಟುಂಬಕ್ಕೆ ಭರವಸೆ ನೀಡುತ್ತಾರೆ.
ಅದರಂತೆ ರಾಣಿಯವರು ಹಾಕಿಯಲ್ಲಿ ಇಲ್ಲಿಯವರೆಗೆ ಸಾಕಷ್ಟು ಸಾಧನೆ ಮಾಡಿದ್ದಾರೆ. 15ನೇ ವಯಸ್ಸಿನಲ್ಲೇ ಭಾರತದ ರಾಷ್ಟ್ರೀಯ ಹಾಕಿ ತಂಡದಲ್ಲಿದ್ದು 2010 ವರ್ಷದಲ್ಲಿ ನಡೆದ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದರು. 2009 ರ ಜೂನ್‍ನಲ್ಲಿ ರಷ್ಯಾ ಕಜನ್ನಲ್ಲಿ ನಡೆದ ಚಾಂಪಿಯನ್ಸ್ ಚಾಲೆಂಜ್ ಟೂರ್ನಮೆಂಟ್‍ನ ಅಂತಿಮ ಪಂದ್ಯದಲ್ಲಿ 4 ಗೋಲುಗಳನ್ನು ಹೊಡೆಯುವ ಮೂಲಕ ಭಾರತ ತಂಡವನ್ನು ಗೆಲ್ಲಿಸಿದರು. ಅವರು “ಟಾಪ್ ಗೋಲ್ ಸ್ಕೋರರ್” ಮತ್ತು “ಟೂರ್ನಮೆಂಟ್‍ನ ಯುವ ಆಟಗಾರ್ತಿ”ಯಂಬ ಬಿರುದಿಗೆ ಕಾರಣರಾದರು.
2009 ರ ನವೆಂಬರ್‌ನಲ್ಲಿ ನಡೆದ ಏಷ್ಯಾ ಕಪ್‍ನಲ್ಲಿ ಭಾರತೀಯ ತಂಡಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 2010 ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2010 ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರೀಯ ತಂಡದೊಂದಿಗೆ ಆಡಿದ ನಂತರ ರಾಮ್ಪಾಲ್ 2010 ರ ಮಹಿಳಾ ಆಲ್ ಸ್ಟಾರ್ ತಂಡವನ್ನು ಸೇರಿಕೊಂಡರು. 2010 ರ ಏಷ್ಯನ್ ಕ್ರೀಡಾಕೂಟದಲ್ಲಿ ಗ್ವಾಂಗ್ಝೌನಲ್ಲಿ ಅವರ ಕಾರ್ಯ ನಿರ್ವಹಣೆ ಆಧಾರದ ಮೇಲೆ ಏಷ್ಯನ್ ಹಾಕಿ ಫೆಡರೇಶನ್ ಆಲ್ ಸ್ಟಾರ್ ತಂಡಕ್ಕೆ ಅವರನ್ನು ಸೇರಿಸಿಕೊಳ್ಳಲಾಯಿತು.
ಅರ್ಜೆಂಟೀನಾದ ರೊಸಾರಿಯೋನಲ್ಲಿ ನಡೆದ 2010 ರ ಮಹಿಳಾ ಹಾಕಿ ವಿಶ್ವಕಪ್‍ನಲ್ಲಿ ಅವರು ಒಟ್ಟು ಏಳು ಗೋಲುಗಳನ್ನು ಹೊಡೆದರು, ಇದು ವಿಶ್ವ ಮಹಿಳಾ ಹಾಕಿ ಶ್ರೇಯಾಂಕದಲ್ಲಿ ಒಂಬತ್ತನೆಯ ಸ್ಥಾನದಲ್ಲಿದೆ. ಇದು 1978 ರಿಂದಲೂ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. 2010 ರ ಎಫ್ಐಹೆಚ್ ಮಹಿಳಾ ಯುವ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಹಾಕಿ ವಿಶ್ವಕಪ್ 2010 ರ ಪಂದ್ಯಾವಳಿಯಲ್ಲಿ ಅಗ್ರ ಕ್ಷೇತ್ರ ಗೋಲ್ ಸ್ಕೋರರ್ ಆಗಿ ತನ್ನ ನಾಕ್ಷತ್ರಿಕ ಪ್ರದರ್ಶನವನ್ನು ಗುರುತಿಸಿ ಅವರಿಗೆ “ಅತ್ಯುತ್ತಮ ಯುವ ಆಟಗಾರನ ಪಂದ್ಯಾವಳಿಯ ಪ್ರಶಸ್ತಿ” ನೀಡಿದ್ದಾರೆ.
2013 ರ ಜೂನಿಯರ್ ವಿಶ್ವಕಪ್‍ನಲ್ಲಿ ಇವರನ್ನು ‘ಪ್ಲಯೆರ್ ಆಫ್ ಟೂರ್ನಮೆಂಟ್’ ಯಂದು ತೀರ್ಮಾನಿಸಿದರು, ಭಾರತ ಕಂಚಿನ ಪದಕ ಗೆಲ್ಲುವುದರ ಮೂಲಕ ಆಟ ಮುಕ್ತಾಯಗೊಂಡಿತು. ಇವರು FICCI ‘ಕಮ್ಬ್ಯಾಕ್ ಆಫ್ ದಿ ಇಯರ್ 2014’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. “ನನ್ನ ಕುಟುಂಬದ ಬೆಂಬಲದೊಂದಿಗೆ ಇವರು ಅಂತಿಮವಾಗಿ ಭಾರತೀಯ ಹಾಕಿ ತಂಡದ ನಾಯಕರಾಗಿದ್ದಾರೆ. ರಾಣಿಯವರು ಇನ್ನಷ್ಟು ಸಾಧನೆ ಮಾಡಲಿ ಎಂದು ವಿಶ್ವದಾದ್ಯಂತ ಬೆಂಬಲ ಹಾಗೂ ಶುಭಾಶಯಗಳು ಹರಿದು ಬರುತ್ತಿವೆ.