ಇಸ್ರೇಲ್ ದಾಳಿ: ಆಹಾರಕ್ಕಾಗಿ ಕಾಯುತ್ತಿದ್ದ 24 ಫೆಲೆಸ್ತೀನ್ ನಾಗರಿಕರು ಸಾವು

ಗಾಝಾ : ಇಸ್ರೇಲ್ ಗಾಝಾದಲ್ಲಿ ದಾಳಿಯನ್ನು ಮುಂದುವರಿಸಿದ್ದೂ, ಹಸಿದು ಆಹಾರಕ್ಕಾಗಿ ಕಾಯುತ್ತಿದ್ದ 24 ಫೆಲೆಸ್ತೀನ್ ನಾಗರಿಕರು ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಯಾಗಿದೆ.

ವರದಿಯ ಪ್ರಕಾರ, ಗಾಝಾ ಪಟ್ಟಿಯ ಮಧ್ಯಭಾಗದಲ್ಲಿರುವ ವಾಡಿ ಗಾಝಾದ ದಕ್ಷಿಣಕ್ಕೆ ಸಲಾಹ್ ಅಲ್-ದಿನ್ ಸ್ಟ್ರೀಟ್‌ನಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ದಾಳಿ ನಡೆಸಿದೆ.

ಇದನ್ನೂ ಓದಿ: ಮಂಡ್ಯ| ರಸ್ತೆಯಲ್ಲಿ ಮಾನಸಿಕ ಅಸ್ವಸ್ಥ ತಾಯಿಯನ್ನು ಬಿಟ್ಟು ಹೋದ ಮಗ

ಗಾಝಾದ ನಾಸರ್ ವೈದ್ಯಕೀಯ ಸಂಕೀರ್ಣ ಮತ್ತು ಅಲ್ ಅವ್ದಾ ಆಸ್ಪತ್ರೆಯಲ್ಲಿ ಸಂತ್ರಸ್ತರ ಮೃತದೇಹಗಳಿರುವುದು ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ.

ಗಾಝಾದಲ್ಲಿ ಇಸ್ರೇಲ್ ಮತ್ತು ಯುಎಸ್ ಬೆಂಬಲಿತ ನೆರವು ಕೇಂದ್ರ ಮೇ.27ರಂದು ಪ್ರಾರಂಭಿಸಲಾಗಿದೆ. ಇದೇ ನೆರವು ಕೇಂದ್ರದ ಬಳಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 400ಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. 1,000 ಜನರು ಗಾಯಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.

ಇದನ್ನೂ ನೋಡಿ: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media

Donate Janashakthi Media

Leave a Reply

Your email address will not be published. Required fields are marked *